ಧರ್ಮ ಶಿಕ್ಷಣ ತರಗತಿಯ ಗುರುಗಳಾದ ಡಾ.ಅರುಣ್ ಉಳ್ಳಾಲ್ ರವರ ನಿರ್ದೇಶನದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದಲ್ಲಿ”‘ಧರ್ಮ ಶಿಕ್ಷಣ ತರಗತಿ ಮತ್ತು ಮಕ್ಕಳ ದಿನಾಚರಣೆ”” ಕಾರ್ಯಕ್ರಮವು ಓಂಕಾರದೊಂದಿಗೆ ಆರಂಭಗೊಂಡು ಗಣಪತಿ ಸ್ತುತಿ, ಮುಖೇನ ತರಗತಿಯನ್ನು ಪ್ರಾರಂಭಿಸಲಾಯಿತು.ನಂತರ ಮಕ್ಕಳ ದಿನಾಚರಣೆ”” ಅಂಗವಾಗಿ ಧರ್ಮ ಶಿಕ್ಷಣ ತರಗತಿಯಲ್ಲಿ ಹಾಜರಿದ್ದ ಮಕ್ಕಳಿಗೆ, ವಿವಿಧ ಮನೋರಂಜನಾ ಆಟ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು, ಘಟಕದ ಅಧ್ಯಕ್ಷರು ಶ್ರೀ ನಿತಿನ್ ಕರ್ಕೇರ ಸರ್ವರನ್ನು ಸ್ವಾಗತಿಸಿದರು, ಧರ್ಮ ಶಿಕ್ಷಣ ತರಗತಿಯ ಗುರುಗಳಾದ ಡಾ. ಅರುಣ್ ಉಳ್ಳಾಲ್ ಸರ್ ರವರು ಇಂದಿನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಅಭಿನಂದನೆ ತಿಳಿಸಿ, ಮಕ್ಕಳ ದಿನಾಚರಣೆಯ ಶುಭ ಹಾರೈಸಿದರು, ಕೊಲ್ಯ ಘಟಕದ ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾದ ಕು, ಹಿತಾಶ್ರೀ ಇವರು ಇಂದಿನ ಸ್ಪರ್ಧೆಯ ವಿಜೇತರ ಮಾಹಿತಿ ನೀಡಿದರು, ಮಕ್ಕಳಿಗೆ ಬಹುಮಾನ ವಿತರಿಸಲಾಯಿತು, ಕೊಲ್ಯ ಘಟಕದ ಉಪಾಧ್ಯಕ್ಷರು ಶ್ರೀ ಜೀವನ್ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು, ತರಗತಿಯ ಸಂಚಾಲಕರು ಶ್ರೀ ಜಗಜೀವನ್ ಕೊಲ್ಯ ಇವರು ಸರ್ವರಿಗೂ ಧನ್ಯವಾದ ಅರ್ಪಿಸಿದರು
ಶಾಂತಿ ಮಂತ್ರದೊಂದಿಗೆ ತರಗತಿ ಮಂಗಳವಾಯಿತು.
DEC 12, 2025 6.19 AM IST


