09-12-2018, 3:01 PM
ಬಜಪೆ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ರಸಗೀತಾ – 2018 ರ ಜಾನಪದ ಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಯುವವಾಹಿನಿ ಬೆಂಗಳೂರು ಘಟಕ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಯುವವಾಹಿನಿ ಮಂಗಳೂರು ಘಟಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಜಾನಪದ ಗೀತಾ ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಉಮಾಕಾಂತ್ ನಾಯಕ್ ಮತ್ತು ಮಲ್ಲಿಕಾ ಶೆಟ್ಟಿ ಇವರು ಭಾಗವಹಿಸಿದ್ದರು. ಈ ವಿಭಾಗದಲ್ಲಿ ಒಟ್ಟು 11 ಘಟಕಗಳು ಸ್ಪರ್ಧೆಯನ್ನು ನೀಡಿದುವು. ಕನಕಾ […]
Read More
09-12-2018, 2:53 PM
ಬಜಪೆ : ಸಮಾಜ ಕಟ್ಟುವ ದೇಶ ಕಟ್ಟುವ ಕಾರ್ಯ ಇಂದಿನ ಯುವಕರಿಂದ ಇನ್ನೂ ಹೆಚ್ಚು ಹೆಚ್ಚು ಆಗಬೇಕಾಗಿದೆ. ಅಂತಹ ಯುವಕರು ಇಂತಹ ಕಾರ್ಯಕ್ರಮಗಳನ್ನು ನಡೆಸಿ ಸಂಘಟನಾತ್ಮಕಗೊಳಿಸಿ ಸಮಾಜವನ್ನು ಆರೋಗ್ಯಪೂರ್ಣಗೊಳಿಸಬೇಕು. ರಸಗೀತಾ ಕಾರ್ಯಕ್ರಮ ಇಂತಹುದಕ್ಕೆ ವೇದಿಕೆಯಾಗಲಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಬಜಪೆ-ಕರಂಬಾರು ಇದರ ಉಪಾಧ್ಯಕ್ಷರಾದ ಶ್ರೀ ಚಂದಪ್ಪ ಕುಂದರ್ ಇವರು ದಿನಾಂಕ 09.12.2018ರಂದು ಶ್ರೀ ನಾರಾಯಣಗುರು ಸಮುದಾಯ ಭವನ ಬಜಪೆ ಇಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.) […]
Read More
08-12-2018, 8:52 AM
ಬೆಳ್ತಂಗಡಿ : ಶಾಂತ ಸ್ವಭಾವದ ವಿಶುಕುಮಾರ್ ತನ್ನ ಸುತ್ತಮುತ್ತಲಿನ ಜನರ ಜೀವನದ ಆಗುಹೋಗುಗಳ ಘಟನೆಗಳನ್ನು ಒಂದು ಚೌಕಟ್ಟಿನಲ್ಲಿ ಬರಹದ ರೂಪಕ್ಕೆ ತಂದರು ಅವರ ಬರಹ ತೀಕ್ಷ್ಣತೆ ಹಾಗೂ ನಿರ್ಭೀತಿಯಿಂದ ಕೂಡಿತ್ತು ಅವರು ಯಾರ ಮುಲಾಜಿಗೂ ಒಲಿಯುತ್ತಿರಲಿಲ್ಲ ತಮಗೆ ಅನಿಸಿದ್ದನ್ನು ಬರೆಯುತ್ತಿದ್ದರು. ಎಂದು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮನಾಥ್ ಬಂಟ್ವಾಳ್ ತಿಳಿಸಿದರು. ಅವರು ಶಾರದಾ ಮಂಟಪ ಗುರುವಾಯನಕೆರೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ […]
Read More
07-12-2018, 4:04 PM
ಯಡ್ತಾಡಿ : ಬದುಕು ಒಂದೊಮ್ಮೆ ತೀರಾ ಸಂಕಷ್ಟಕ್ಕೆ ತುತ್ತಾಗುತ್ತದೆ. ಕಷ್ಟ ಬಂದವರಿಗೆ ಮರಳಿ ಮರಳಿ ನೋವು ಬರುತ್ತೆ. ಯಡ್ತಾಡಿ ಗ್ರಾಮದಲ್ಲಿ ವಾಸವಾಗಿರುವ ಸ.ಹಿ.ಪ್ರಾ. ಶಾಲೆ ಯಡ್ತಾಡಿಯ 7ನೇ ತರಗತಿ ವಿದ್ಯಾರ್ಥಿ ರಾಜೇಂದ್ರ ಎಂಬ ಹುಡುಗನ ಕರುಣಾಜನಕ ಕಥೆ ಇದು. ಕಡು ಬಡತನದಲ್ಲಿ ಹುಟ್ಟಿದ ಈ ಹುಡುಗನಿಗೆ ಹುಟ್ಟಿನಿಂದಲೇ ಒಂದು ಕಿಡ್ನಿಯಲ್ಲಿ ಸಮಸ್ಯೆ ಇತ್ತು. ಆದರೂ ಚಿಕಿತ್ಸೆಯ ಮೂಲಕ ಒಂದೇ ಕಿಡ್ನಿಯಲ್ಲಿ ಲವ ಲವಿಕೆಯ ಜೀವನ ಸಾಗಿಸುತ್ತಿದ್ದ. ಆದರೆ ಇತ್ತೀಚಿಗೆ ಇನ್ನೊಂದು ಕಿಡ್ನಿಯಲ್ಲೂ ಸಮಸ್ಯೆ ಕಾಣಿಸಿ ಹಲವಾರು ದಿನಗಳಿಂದ […]
Read More
05-12-2018, 4:29 PM
ಕೊಲ್ಯ: ವಿಶುಕುಮಾರ್ ಈ ನಾಡು ಕಂಡ ಮತ್ತು ನಮ್ಮ ಸಮಾಜದಲ್ಲಿ ಹುಟ್ಟಿಬೆಳೆದ ಓರ್ವ ಶ್ರೇಷ್ಠ ಕಾದಂಬರಿಕಾರ, ನಟ ,ನಿರ್ಮಾಪಕ ,ನಿರ್ದೇಶಕ ,ಪತ್ರಕರ್ತ ಮತ್ತು ಉತ್ತಮ ನಾಟಕಕಾರರಾಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ನೇರ ನಡೆ – ನುಡಿ ,ಪ್ರಾಮಾಣಿಕತೆ ಮತ್ತು ಶಿಸ್ತನ್ನು ಅಳವಡಿಸಿಕೊಂಡಿದ್ದ ಇವರು ,ಭ್ರಷ್ಟಾಚಾರದಿಂದ ಬೇಸತ್ತು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಹುದ್ದೆಯನ್ನು ಅರ್ಧದಲ್ಲೇ ತೊರೆದು, ಅನ್ಯಾಯದ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಓರ್ವ ಅಸಾಮನ್ಯ ವ್ಯಕ್ತಿ,ಇಂದು ಸತ್ತ ನಂತರವೂ ನಮ್ಮೆದುರು ಜೀವಂತವಿರುವ ‘ಮಹಾನ್ ಆತ್ಮ’ […]
Read More
04-12-2018, 2:57 AM
ವೇಣೂರು : ಯುವವಾಹಿನಿ(ರಿ.) ವೇಣೂರು ಘಟಕದ ಸೇವಾಯೋಜನೆ ‘ಆಸರೆ’ಯ 4ನೇ ಕಂತನ್ನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪೆರಾಡಿ ಗ್ರಾಮದ ಜಯ ಪೂಜಾರಿಯವರಿಗೆ ಘಟಕದ ಅಧ್ಯಕ್ಷರಾದ ನಿತೀಶ್. ಎಚ್ ಹಸ್ತಾಂತರಿಸಿದರು, ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್ ಮೂಡುಕೋಡಿ, ಘಟಕದ ಉಪಾಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ, ಕಾರ್ಯದರ್ಶಿಗಳಾದ ಸತೀಶ್ ಪಿ.ಎನ್, ಪದಾಧಿಕಾರಿಗಲಾದ ಕರುಣಾಕರ ಪೂಜಾರಿ ಮರೋಡಿ, ಸದಾನಂದ ಪೂಜಾರಿ, ಹರೀಶ್ ಪಿ.ಎಸ್, ಶಿವಪ್ರಕಾಶ್ ಅಂಬಲ, ಸುದೀಪ್ ಕಾಶಿಪಟ್ಣ ಉಪಸ್ಥಿತರಿದ್ದರು
Read More
03-12-2018, 4:34 PM
ಪಣಂಬೂರು ಕುಳಾಯಿ : ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಯುವವಾಹಿಯಂತಹ ಸಂಘಟನೆಗಳು ಬಿಲ್ಲವರ ಸ್ವಾಭಿಮಾನ, ಆತ್ಮಸ್ಥೈರ್ಯಗಳಿಗಾಗಿ ಕೋಟಿ ಚೆನ್ನಯ ಕಾಂತಾಬಾರೆ ಬೂದಾಬಾರೆಯಂತಹ ವೀರ ಪುರುಷರ ಸಾಧನೆಯನ್ನು , ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು, ಸಾಹುಕಾರ್ ಕೊರಗಪ್ಪ, ದಾಮೋದರ ಮಾಸ್ತರ್ ರಂತಹ ಸಾಮಾಜಿಕ ಸೇವೆಯನ್ನು, ಬಂಗಾರಪ್ಪ, ದಾಮೋದರ ಮುಲ್ಕಿ ಹಾಗೇ ನಮ್ಮ ನಡುವೆಯೇ ಇರುವ ಜನಾರ್ದನ ಪೂಜಾರಿಯಂತಹ ರಾಜಕೀಯ ಕ್ಷೇತ್ರದ ಸಾಧನೆಯನ್ನು ಆದರ್ಶವಾಗಿ ತೆಗೆದುಕೊಳ್ಳುತ್ತೇವೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ ದಿ.ವಿಶುಕುಮಾರ್ […]
Read More
02-12-2018, 3:30 PM
ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಅಥಿತ್ಯದಲ್ಲಿ ತಾ: 02-12-2018 ರಂದು ಸ್ಪರ್ಶ ಟ್ರಸ್ಟ್ ನ ನಿಸರ್ಗ ಗ್ರಾಮದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಟ್ರಸ್ಟಿನ ಮಕ್ಕಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಗಳನ್ನು ನಡೆಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಪೂಜಾರಿಯವರು ವಹಿಸಿಕೊಂಡಿದ್ದರು, ಸ್ಪರ್ಶ ಟ್ರಸ್ಟ್ ನ ಅಡ್ಮಿನ್ ಉಸ್ತುವಾರಿ ಆಗಿರುವ ರಾಜು ಹಾಗೂ ಶಶಧರ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಘಟಕದ ಸದಸ್ಯರಾದ ಕಿಶನ್ […]
Read More
01-12-2018, 4:41 PM
ಪಡುಬಿದ್ರಿ : ಯುವವಾಹಿನಿ (ರಿ) ಪಡುಬಿದ್ರಿ ಘಟಕದ ವತಿಯಿಂದ 01.12.2018 ರಂದು ಮಾನಸಿಕ ಅಸಮರ್ಥತೆಯಿಂದ ಬಳಲುವ ಮಕ್ಕಳನ್ನು ಹೊಂದಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಜಮಾಡಿ ಬಳಿಯ ನಿವಾಸಿ ಜಯಂತಿಯವರಿಗೆ ಘಟಕದಿಂದ ರೂ 6,000 (ಆರುಸಾವಿರ) ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ, ಉಪಾಧ್ಯಕ್ಷರಾದ ಯೋಗೀಶ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಸುಶಾಂತ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್, ದಯಾನಂದ ,ಪ್ರಕಾಶ್ ಉಪಸ್ಥಿತರಿದ್ದರು.
Read More
01-12-2018, 3:05 AM
ಮಾಣಿ : ವ್ಯಕ್ತಿ ತನ್ನ ನಡತೆ ಮತ್ತು ಕಾರ್ಯಗಳಿಂದ ಬದುಕಿರುವಾಗಲೆ ಸಾಯಬಾರದು ಬದಲಾಗಿ ನಮ್ಮ ವ್ಯಕ್ತಿತ್ವ ನಮ್ಮ ಸಾವಿನ ಬಳಿಕವೂ ನಮ್ಮನ್ನು ಜೀವಂತವಾಗಿರಿಸಬೇಕು, ನಮ್ಮ ನಡುವೆ ಇಲ್ಲದೇ ಇದ್ದರೂ ಅವರ ವ್ಯಕ್ತಿತ್ವದಿಂದ ನಮ್ಮ ನಡುವೆ ಇಂದಿಗೂ ಜೀವಂತವಾಗಿರುವವರು ವಿಶುಕುಮಾರ್ ಅವರ ಜೀವನ ಕ್ರಮ ಅನುಕರಣೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ತಿಳಿಸಿದರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.), ಮಾಣಿ […]
Read More