ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದಿಂದ ಶೈಕ್ಷಣಿಕ ದತ್ತು ಸ್ವೀಕಾರ ನಿಧಿಯ ವತಿಯಿಂದ, ದತ್ತು ವಿದ್ಯಾರ್ಥಿಗಳಿಗೆ, 2019 – 20 ನೇ ಸಾಲಿನ ಶೈಕ್ಷಣಿಕ ವೆಚ್ಚವನ್ನು ದಿನಾಂಕ 09/07/2019ರ ಸಾಪ್ತಾಹಿಕ ಸಭೆಯಲ್ಲಿ ದತ್ತುನಿಧಿಯ ದಾನಿಗಳ ಮೂಲಕ ವಿತರಿಸಲಾಯಿತು. ಕೆಪಿಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ 5th ಸೆಮಿಸ್ಟರ್ ನಲ್ಲಿರುವ ನಿಖಿಲ್, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿ ಕುಮಾರಿ ಪೂಜಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿರುವ ಕುಮಾರಿ ಜಯಲಕ್ಷ್ಮಿ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ದ್ವಿತಿಯ ವರ್ಷದ ಬಿಕಾಂ ಕಲಿಯುತ್ತಿರುವ ಕುಮಾರಿ ಕವಿತಾ, ಪ್ರಥಮ ವರ್ಷದ ಬಿಕಾಂ ಕಲಿಯುತ್ತಿರುವ ಕುಮಾರಿ ಸಂಜನಾ ಮತ್ತು ಕುಮಾರಿ ಶ್ವೇತಾ ಇವರಿಗೆ ನೀಡಲಾಯಿತು. ಕುಮಾರಿ ಶ್ವೇತಾರವರು 91 ಶೇಕಡಾ ಅಂಕಗಳನ್ನು ಪಡೆದಿದ್ದು ಸಭೆಯಲ್ಲಿ ಸನ್ಮಾನಿಸಲಾಯಿತು.
ದತ್ತು ನಿಧಿಯ ದಾನಿಗಳಾದ ವಿಶ್ವನಾಥ ಸಾಲ್ಯನ್, ಯೋಗೀಶ್ ಕುಮಾರ್ ಮತ್ತು ನರೇಂದ್ರ ನಾಯಕ್ ರವರನ್ನು ಘಟಕದ ಮಾಜಿ ಅಧ್ಯಕ್ಷರುಗಳು ಗೌರವಿಸಿದರು. ದತ್ತು ನಿಧಿಯ ಸಂಚಾಲಕರಾದ ಸತೀಶ್ ಕುಮಾರ್ ರವರು ಎಲ್ಲಾರಿಗೂ ಅಭಿನಂದನೆ ಸಲ್ಲಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕೆ. ಆರ್. ಲಕ್ಷ್ಮೀನಾರಾಯಣರವರು ವಹಿಸಿದ್ದರೆ, ಗತ ಸಭೆಯ ವರದಿಯನ್ನು ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ರವರು ವಾಚಿಸಿದರು. ಏರ್ ಬಿರ್ಸೆರ್ ನಳ ಪರಿವಾರೋಡು ಯುವವಾಹಿನಿ ಪುರುಷರ ಅಂತರ್ ಘಟಕ ಸ್ಪರ್ಧೆಯಲ್ಲಿ ನಮ್ಮ ಘಟಕವು ಪ್ರಥಮ ಸ್ಥಾನ ಪಡೆದಿದ್ದು ಎಲ್ಲರನ್ನು ಅಧ್ಯಕ್ಷರು ಅಭಿನಂದಿಸಿದರು.
ಶ್ರೀ ಗುರು ಚಿಂತನ ಮಂಥನ ಕಾರ್ಯಕ್ರಮದಲ್ಲಿ ರಾಜೇಂದ್ರ ಕುಮಾರ್ ರವರು ಮಾತನಾಡುತ್ತ, ಶ್ರೀ ನಾರಾಯಣ ಗುರುಗಳು ನಿರಾಕಾರ, ನಿರ್ಗುಣ, ಸೃಷ್ಟಿಗೆ ಕಾರಣವಾಗಿ ಸೃಷ್ಟಿಯಲ್ಲಿ ಇದ್ದುಕೊಂಡು ಜಗತ್ತನ್ನು ಬೆಳಗುತ್ತಿರುವ ಸಂಪೂರ್ಣ ಜ್ಞಾನ ಮತ್ತು ಶಕ್ತಿಯ ಪರಬ್ರಹ್ಮ ಸ್ವರೂಪಿ. ಜಗತ್ತಿಗೆ ಸಾಕ್ಷತ್ ಶಿವ ಓಬ್ಬನೇ ಗುರುವಾಗಿರುವವನು, ಶಿವಸ್ವರೂಪಿ ಯಾಗಿ ಭೂಮಿಗೆ ಬಂದ ಶ್ರೀ ನಾರಾಯಣ ಗುರುಗಳು ತೋರಿದ ದಾರಿಯಲ್ಲಿ ಸಾಧನೆ ಮಾಡಿ ನಾವು ಸಾಮಾಜಿಕ ಸುಧಾರಣೆಯ ಜೊತೆ ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರು.
ಶೈಕ್ಷಣಿಕ ದತ್ತು ಸ್ವೀಕಾರ ನಿಧಿಯ ರೂವಾರಿಯಗಿರುವ ಅಶೋಕ್ ಕುಮಾರ್ ಇಂಜಿನಿಯರ್ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹಿತನುಡಿದರು.
ಯೋಗೀಶ್ ಕುಮಾರ್ ಡೆಂಟಲ್ ರವರು ಎಲ್ಲಾರಿಗೂ ಕೃತಜ್ಙತೆ ಸಲ್ಲಿಸಿದರೆ, ಕೊನೆಯಲ್ಲಿ ಸದಸ್ಯರೆಲ್ಲರು ವಿದ್ಯಾರ್ಥಿಗಳೊಡನೆ ಸಹಭೋಜನದಲ್ಲಿ ಪಾಲ್ಗೊಂಡರು.