ಮೂಡುಬಿದಿರೆ : ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ ಆರಂಭಿಸಲ್ಪಟ್ಟ “ಯುವಸ್ಪಂದನ” ಸೇವಾ ಯೋಜನೆಗೆ ಆರ್ಥಿಕ ನೆರವಿಗಾಗಿ ಹಲವಾರು ಸಮಾಜದ ಬಡ ವಿಧ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು ಆ ಮನವಿಯನ್ನು ಪರಿಶೀಲಿಸಿ.
ಯುವವಾಹಿನಿ ರಿ .ಮೂಡುಬಿದಿರೆ ಘಟಕದ ಜುಲೈ ತಿಂಗಳ ಸದಸ್ಯರ ಸಭೆಯು ದಿನಾಂಕ13-7-2019 ಶನಿವಾರ “ಬ್ರಹ್ಮಶ್ರೀ ಗುರುನಾರಯಣ ಸೇವಾ ಸಂಘ ಮೂಡುಬಿದಿರೆಲ್ಲಿ ನಡೆದಿದ್ದು ಈ ಸಭೆಯಲ್ಲಿ ಬೆಳುವಾಯಿ ಗೊಲಾರ ಮನೆ ಕೆಸರುಗದ್ದೆ ನಿವಾಸಿ ಲಕ್ಷ್ಮಣ್ ಪೂಜಾರಿ ಇವರ ಸುಪುತ್ರಿ ರಕ್ಷಿತಾ ಇವರು ಪ್ರಥಮ ವರ್ಷದ ಬಿ.ಎ ಪದವಿಯನ್ನು ಮಹಾವೀರ ಕಾಲೇಜಿನಲ್ಲಿ ಮಾಡುತ್ತಿದ್ದು ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದು ದ್ವಿತೀಯ ವರ್ಷವನ್ನು ಮುಂದುವರಿಸಲು ಅಸಾಧ್ಯವಾಯಿತು.ಇದಕ್ಕೆ ಮೂಲ ಕಾರಣ ತಂದೆಯ ಅನಾರೋಗ್ಯದಿಂದ ಸುಮಾರು ಎಂಟು ತಿಂಳುಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಇವರ ಕುಟುಂಬಕ್ಕೆ ಯುವ ಸ್ಪಂದನ ಸೇವಾ ಯೋಜನೆಯ ರೂ.5000/- ಚೆಕ್ ಅನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ಇವರು ಯುವವಾಹಿನಿ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿದರು.