ಮಾಣಿ : ದಿನಾಂಕ 07-07-19ರಂದು ಬೆಳಿಗ್ಗೆ 8.30ರಿಂದ ಬಾಕಿಲ ಕೋಟಿ-ಚೆನ್ನಯ ಗರಡಿ ಅವರಣದಲ್ಲಿ ಮಾಣಿ ಘಟಕದ ವತಿಯಿಂದ ವನಮೋಹತ್ಸವ ಕಾರ್ಯಕ್ರಮ ನಡೆಯಿತು.
ಮುಖ್ಯ ಅಥಿತಿಯಾಗಿ ಉಪವಲಯ ಅರಣ್ಯಾಧಿಕಾರಿ ಯಶೋಧರ ಪೂಜಾರಿ,ಅನಂತಾಡಿ ಸಾಮಾಜಿಕ ಉಪವಲಯ ಅರಣ್ಯಾಧಿಕಾರಿ ರಂಜಿತ,ಅನಂತಾಡಿ ಅರಣ್ಯ ರಕ್ಷಕ ಖ್ಯಾತಲಿಂಗ ಆಗಮಿಸಿದರು. ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ,ಬಾಕಿಲಗುತ್ತಿನ ಪ್ರಮುಖರಾದ ಜನಾರ್ದನ ಪೂಜಾರಿ ಮತ್ತು ಮೊನಪ್ಪ ಪೂಜಾರಿ ಉಪಸ್ಥಿತರಿದ್ದರು.
ಇಂದು ಕಾಡು ನಾಶದ ಪರಿಣಾಮ ಮಳೆಯ ಪ್ರಮಾಣ ವಿಪರೀತ ಕುಸಿತ ಕಂಡಿದೆ,ಅರಣ್ಯ ಉಳಿಸುವ ನಿಟ್ಟಿನಲ್ಲಿ ನಾಗರಿಕರಾದ ನಾವೆಲ್ಲರೂ ಕೂಡ ಕೈ ಜೋಡಿಸಬೇಕು ಹಾಗೂ ವನಮೋಹತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಾಗಿದೆ ವರ್ಷವಿಡಿ ನಡೆಯಬೇಕು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.
ಗಿಡ ನೆಟ್ಟು ನೀರು ಚಿಮ್ಮಿಸುವ ಮೂಲಕ ಕಾರ್ಯಕ್ರಮಕ್ಕೆ ಚಲನೆ ನೀಡಲಾಯಿತು. ಕಾರ್ಯದರ್ಶಿ ಸುಜಿತ್ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ನಿ.ಪೂ ಅಧ್ಯಕ್ಷರಾದ ರಾಜೇಶ್ ಬಾಬನಕಟ್ಟೆ, ಸಲಹೆಗಾರು ದಯಾನಂದ ಕೊಡಾಜೆ, ಉಪಾಧ್ಯಕ್ಷರಾದ ರಮೇಶ್ ಮುಜಲ,ಪ್ರಶಾಂತ್ ಅನಂತಾಡಿ,ಕೋಶಾಧಿಕಾರಿ ಶಿವರಾಜ್ ಪಿ.ಅರ್ ಮತ್ತು 60ಕ್ಕೂ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.