ಸುರತ್ಕಲ್ : ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಸುರತ್ಕಲ್ ಘಟಕದ ಅತಿಥ್ಯದಲ್ಲಿ ಫಾದರ್ಸ್ ಡೇ ಯ ಪ್ರಯುಕ್ತ ಯುವವಾಹಿನಿ ಅಂತರ್ ಘಟಕ ಪುರುಷರಿಗಾಗಿ ” ಏರ್ ಬಿರ್ಸೆರ್ ನಳ ಪಾರಿವಾರೊಡು” ಅಡುಗೆ ಸ್ಪರ್ಧೆಯನ್ನು ಹಾಗೂ ವಿವಿಧ ಘಟಕಗಳ ಮಹಿಳೆಯರಿಗಾಗಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸೀರೆ ಮತ್ತು ಕೇಶವಿನ್ಯಾಸ ಸೌಂದರ್ಯ ಸ್ಪರ್ಧೆಯನ್ನು ಸುರತ್ಕಲ್ ತಾರಾ ಟವರ್ಸ್ ಸಭಾಂಗಣದಲ್ಲಿ ದಿನಾಂಕ 07.07.2019 ರಂದು ಅಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ಪಡುಬಿದ್ರಿಯ ಹೋಟೆಲ್ ಉದ್ಯಮಿ ವೈ.ಸುಕುಮಾರ್ ಉದ್ಘಾಟಿಸಿದರು. ಇಂದಿನ ಆಧುನಿಕ ಯುಗದಲ್ಲಿ ಪುರುಷರು ಕೂಡಾ ಕೆಲವೊಂದು ರುಚಿ-ರುಚಿಯಾದ ಅಡುಗೆಯನ್ನು ಮಾಡುವುದರಲ್ಲಿ ಪರಿಣಿತರಿದ್ದಾರೆ. ಅವರಿಗೊಂದು ಅವಕಾಶ ಸಿಕ್ಕಂತಾಗಿದೆ. ಈ ವಿನೂತನ ಕಾರ್ಯಕ್ರಮದ ಮೂಲಕ ಎಂದು ಸಂಘಟಕರನ್ನು ಶ್ಲಾಘಿಸಿದರು.
ಪುರುಷರ ಅಡುಗೆ ಸ್ಪರ್ಧೆಯು ನಡೆಯಿತು. ಅದೇ ಸಂದರ್ಭದಲ್ಲಿ ಮಹಿಳೆಯರು ಭಾರತೀಯ ಸಂಪ್ರದಾಯಿಕ ಸೀರೆ ಉಟ್ಟು, ವಿಶೇಷ ಕೇಶ ವಿನ್ಯಾಸದೊಂದಿಗೆ ಸಭಿಕರನ್ನು ರಂಜಿಸಿದರು. ಘಟಕದ ಮಹಿಳೆಯರಿಂದ ಪ್ರಾತ್ಯಾಕ್ಷಿಕೆಯಾಗಿ ಸೌಂದರ್ಯ ಸ್ಪರ್ಧೆಯ ವಿವಿಧ ಭಂಗಿಗಳು ಪ್ರದರ್ಶಿಸಲ್ಪಟ್ಟವು. ಸಭಿಕರಿಂದ ಮೆಚ್ಚುಗೆಯನ್ನು ಪಡೆದರು.
ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಅನಿತಾ, ಕವಿತಾ ಮತ್ತು ಸೌಮ್ಯ ಬ್ಯುಟಿಷಿಯಷನ್ಸ್ ಭಾಗವಹಿಸಿದರು. ಪುರುಷರ ಅಡುಗೆ ಸ್ಪರ್ಧೆಯ ತೀಪುಗಾರರಾಗಿ ವೀಣಾಶೆಟ್ಟಿ, ಸುಖಾಲಾಕ್ಷಿ ಸುವರ್ಣ ಮತ್ತು ಸುಪ್ರೀತಾ ಕೋಟ್ಯಾನ್ ಭಾಗವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಮಹಾಬಲ ಪೊಜಾರಿ ಕಡಂಬೋಡಿ, ಶ್ರೀಚಂದ್ರಶೇಖರ್ ಮುಕ್ಕ , ಸಂಚಾಲಕರಾದ ಸತೀಶ್ ಕೋಟ್ಯಾನ್ , ಕಾರ್ಯದರ್ಶಿ ದೀಪಕ್ ರಾಜ್ ಯು ಹಾಗೂ ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷೆ ಗುಣವತಿ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಇವರ ಅನುಪಸ್ಥಿತಿಯಲ್ಲಿ ಕಲಾವತಿ ನಡುಬೈಲು ಇವನ ಸನ್ಮಾನಿಸಲಾಯಿತು.
ಸೌಂದರ್ಯ ಸ್ಪರ್ಧೆಯ ವಿಜೇತರು.
ಪ್ರಥಮಾ – ಶ್ರೇಯಾ, ಬಜಪೆ ಘಟಕ,
ದ್ವಿತೀಯ – ಪ್ರತಿಭಾ ಮಂಗಳೂರು ಮಹಿಳಾ ಘಟಕ,
ತೃತೀಯ – ಶ್ರಾವ್ಯ ಬಜಪೆ ಘಟಕ,
ಪ್ರೋತ್ಸಾಕರ – ಪ್ರತೀಕ್ಷಾ – ಕಂಕನಾಡಿ ಘಟಕ
ಏರ್ ಬಿರ್ಸೆರ್ ನಳ ಪರಿವಾರಕೊಡು – ವಿಜೇತರು
ಪ್ರಥಮ – ಮಂಗಳೂರು ಯುವವಾಹಿನಿ ಘಟಕ,
ದ್ವಿತೀಯ – ಅಡ್ವೆ ಯುವವಾಹಿನಿ ಘಟಕ
ತೃತೀಯ – ಕೆಂಜಾರು ಕರಂಬಾರು ಘಟಕ.
ಮಂಗಳೂರು ಘಟಕ, ಮಂಗಳೂರು ಮಹಿಳಾ ಘಟಕ, ಬಂಟ್ವಾಳ ಘಟಕ, ಪಡುಬಿದ್ರೆ ಘಟಕ, ಬಜಪೆ ಘಟಕ, ಕಂಕನಾಡಿ ಘಟಕ, ಕೂಳೂರು ಘಟಕ, ಕೊಲ್ಯ ಘಟಕ, ಪಣಂಬೂರು ಕುಳಾಯಿ ಘಟಕ, ಅಡ್ವೆ ಘಟಕ, ಕೆಂಜಾರು ಕರಂಬಾರು ಘಟಕ, ಎಕ್ಕಾರು ಪೆರ್ಮುದೆ ಘಟಕ, ಪುತ್ತೂರು ಘಟಕಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅಪ್ಪಂದಿರಿಗಾಗಿ ಬಜಪೆ ಘಟಕದ ಗ್ರೀಷ್ಮಾ ಹಾಡಿರುವ ಅರ್ಥಪೂರ್ಣ ಹಾಡು ಸರ್ವರ ಮನಸೂರೆಗೊಂಡಿತು.
.ವಿನೂತನ ಶೈಲಿಯ ಈ ಕಾರ್ಯಕ್ರಮವು ಎಲ್ಲರಿಂದ ಮೆಚ್ಚುಗೆಗಳಿಸಿತು. ಕೇಂದ್ರ ಸಮಿತಿಯ ಹೆಚ್ಚಿನ ಪೂರ್ವಾಧ್ಯಕ್ಷರುಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.ಗುಣವತಿ ರಮೇಶ್ ಸ್ವಾಗತಿಸಿದರು. ಬಾಸ್ಕರ್ ಸಾಲ್ಯಾನ್ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ಸತೀಶ್ ಕೋಟ್ಯಾನ್ ವಂದನಾರ್ಪಣೆ ಗೈದರು.