
ಮೂಡುಬಿದಿರೆ : ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ ಆರಂಭಿಸಲ್ಪಟ್ಟ “ಯುವಸ್ಪಂದನ” ಸೇವಾ ಯೋಜನೆಗೆ ಆರ್ಥಿಕ ನೆರವಿಗಾಗಿ ಹಲವಾರು ಸಮಾಜದ ವಿಧ್ಯಾರ್ಥಿಗಳು ಆರ್ಥಿಕ ನೆರವಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಇದರಲ್ಲಿ ಚೆನ್ನಪ್ಪ ಪೂಜಾರಿ ಇವರ ಸುಪುತ್ರಿ ಕು.ಶ್ರದ್ಧಾ ಅಯ್ಯಪ್ಪ ಮಂದಿರ ಹತ್ತಿರ ಪ್ರಾಂತ್ಯ ವಿಲೇಜ್.ಕೊಡಂಗಲ್ಲು ಇವರು ಈಗಾಗಲೇ ಡಿಗ್ರಿ ಮುಗಿಸಿ ಪ್ರಥಮ ವರ್ಷದ ಎಂ.ಕಾಂ ಅನ್ನು ಆಳ್ವಾಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದು ಈಗ ದ್ವಿತೀಯ ವರ್ಷದ ಎಂ.ಕಾಂ ನ್ನು ಮುಂದುವರಿಸಲು ಅಸಾಧ್ಯವಾಗಿದೆ ಕಾರಣ ಆರ್ಥಿಕ ಸಮಸ್ಯೆಯಾಗಿದ್ದು.ತಾಯಿ ಅಕ್ಷರದಾಸೋಹದ ಕೆಲಸಕ್ಕೆ ಹೋಗುತ್ತಿದ್ದು..ಆದ್ದರಿಂದ ಇವರ ಕುಟುಂಬಕ್ಕೆ ರೂ.5000/- ಚೆಕ್ ನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ “ಜಯಂತ್ ನಡುಬೈಲ್” ಇವರು ವಿಧ್ಯಾರ್ಥಿ ಕು.ಶ್ರದ್ಧಾ ಇವರಿಗೆ ಹಸ್ತಾಂತರಿಸಿದರು.
JUL 13, 2019 8.56 AM IST


