19-07-2026, 8:00 PM
ಸುಳ್ಯ, ಜುಲೈ 19 : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಜೂನ್ ತಿಂಗಳ ‘ಗುರುಸ್ಪೂರ್ತಿ’ ಕಾರ್ಯಕ್ರಮವು ಘಟಕದ ಪೂರ್ವಾಧ್ಯಕ್ಷ ಸುನಿಲ್ ಪೂಜಾರಿ ಕಳಂಜಪಟ್ಟೆ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಹೊನ್ನಪ್ಪ ಕೈಂದಾಡಿ ಅವರು ನಾರಾಯಣಗುರುಗಳ ಸಂದೇಶವನ್ನು ನೀಡುತ್ತಾ, ಗುರುಗಳ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದು ಕರೆ ನೀಡಿದರು. ಯುವವಾಹಿನಿ (ರಿ.) ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ […]
Read More
19-07-2026, 6:00 PM
ಬೆಂಗಳೂರು, ಜುಲೈ 19: ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ “ಕೋಟಿ ಚೆನ್ನಯ್ಯ ಟ್ರೋಫಿ – ಸೀಸನ್ 2” ಬ್ಯಾಡ್ಮಿಂಟನ್ ಕ್ರೀಡಾಕೂಟವು ಭಾನುವಾರ ಬೆಂಗಳೂರಿನ ದಾಸರಹಳ್ಳಿ ಸಮೀಪದ ಎಎಂ ಸ್ಪೋರ್ಟ್ಸ್ ಅರೆನಾದಲ್ಲಿ ಸಂಭ್ರಮ, ಉತ್ಸಾಹ ಮತ್ತು ಕ್ರೀಡಾಸ್ಫೂರ್ತಿಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿತ್ಯಾನಂದ ಶೆಟ್ಟಿ ಹಾಗೂ ನಂಜುಂಡ ಪೂಜಾರಿ ಅವರು, ಘಟಕದ ಅಧ್ಯಕ್ಷ ವಿಜೇತ್ ವಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. […]
Read More
19-07-2026, 3:00 PM
ಬಜಪೆ ಜುಲೈ 19 : ಯುವವಾಹಿನಿ(ರಿ.) ಬಜಪೆ ಘಟಕದ ವತಿಯಿಂದ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ -ಕರಂಬಾರು ಇವರ ಸಹಕಾರದಲ್ಲಿ “ಆಟಿದ ನೆಂಪು -2026” ಕಾರ್ಯಕ್ರಮವು ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನ ಬಜಪೆ ಇಲ್ಲಿ 19.07.2026 ರಂದು ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಊರಿಗೆ ಬಂದ ಮಾರಿ ರೋಗದ ಕಳೆ ರುಜಿನದ ಕೊಳೆಯ ಕಳೆಯುತ್ತಾ ಮನೆಯಂಗಳಕ್ಕೆ […]
Read More
19-07-2026, 2:00 PM
ಕೊಲ್ಯ ಜುಲೈ19 : ಯುವವಾಹಿನಿ (ರಿ) ಕೊಲ್ಯ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಪೂಜೆಯೊಂದಿಗೆ ಘಟಕದ ಅಧ್ಯಕ್ಷ ನಿತಿನ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 19.07.2026ರಂದು ನಡೆಯಿತು ಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ) ಕೊಲ್ಯ–ಸೋಮೇಶ್ವರದ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಕಳೆದ ಒಂದು ವರ್ಷದ […]
Read More
19-07-2026, 2:00 PM
ಸುರತ್ಕಲ್, ಜುಲೈ 19 : ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ “ಆಟಿದ ಐಸಿರ -2026” ಕಾರ್ಯಕ್ರಮವು 19-07-2026ರಂದು ಗುಡ್ಡೆಕೊಪ್ಲದ “ಮಾತೃಕೃಪಾ”ದಲ್ಲಿ ಘಟಕದ ಅಧ್ಯಕ್ಷೆ ರೇವತಿ ನವೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮನೆಯಂಗಳಕ್ಕೆ ಆಗಮಿಸಿದ ಆಟಿಕಳೆಂಜನಿಗೆ ಪುಷ್ಪ ಅವರು ಪಡಿಯಕ್ಕಿ ಸುರಿಯುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿಕ್ಷಕಿ, ನಿರೂಪಕಿ ಹಾಗೂ ಜೈ ತುಳುನಾಡು (ರಿ.) ಬಂಟ್ವಾಳ ಘಟಕದ ಸಂಘಟನಾ ಕಾರ್ಯದರ್ಶಿ ರೇಣುಕಾ ಕಾಣಿಯೂರ್ ಅವರು ಮಾತನಾಡಿ, “ಆಟಿದ […]
Read More
19-07-2026, 2:00 PM
ಕೊಲ್ಯ, ಜುಲೈ 19: ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ಲೇಖಕರಾದ ವಿದ್ವಾನ್ ದಿ. ರಮನಾಥ್ ಕೋಟೆಕಾರ್ ಅವರ ಜನ್ಮದಿನದ ಅಂಗವಾಗಿ ರಾಜ್ಯ ಮಟ್ಟದ ಆನ್ಲೈನ್ ಕಥೆ ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ಕಥಾ ವಿಭಾಗದಲ್ಲಿ 133 ಹಾಗೂ ಕವನ ವಿಭಾಗದಲ್ಲಿ 231 ಕೃತಿಗಳು ಸಲ್ಲಿಕೆಯಾಗಿದ್ದವು. ಕಥಾ ವಿಭಾಗದಲ್ಲಿ ಡಾ. ಸುರೇಶ್ ನೆಗಳಗುಳಿ (ಮಂಗಳೂರು) ಅವರ […]
Read More
19-07-2026, 2:00 PM
ಅನಾವರಣಮಂಗಳೂರಿನಲ್ಲಿ ಜುಲೈ ಎಂದರೆ ಮಳೆಗೊಂದು ಹಬ್ಬ. ಕುದ್ರೋಳಿಯ ಕಿರಿದಾದ ಗಲ್ಲಿಗಳಲ್ಲಿ ನೀರು ಹರಿಯುತ್ತಿತ್ತು, ಆಟೋಗಳ ಹಾರ್ನ್, ತರಕಾರಿ ಮಾರುವವರ ಕೂಗು, ದೇವಸ್ಥಾನದ ಗಂಟೆ – ಎಲ್ಲವೂ ಸೇರಿ ಒಂದು ರಾಗ. ಆ ರಾಗದ ನಡುವೆ “ಕಲಾದರ್ಶಿನಿ” ಆರ್ಟ್ ಗ್ಯಾಲರಿ ಮಾತ್ರ ಮೌನವಾಗಿತ್ತು.ಸಂಜೆ 6:15. ಗ್ಯಾಲರಿಯೊಳಗೆ ಮೀರಾ ಒಬ್ಬಳೇ. ವಯಸ್ಸು 32, ಆದರೆ ಕಣ್ಣುಗಳಲ್ಲಿ 50 ವರ್ಷದ ಆಯಾಸ. ಮುಂದೆ 6 ಅಡಿ ಎತ್ತರದ ಖಾಲಿ ಕ್ಯಾನ್ವಾಸ್. ಪಕ್ಕದ ಟೇಬಲ್ ಮೇಲೆ ಒಣಗಿ ಬಿರುಕು ಬಿಟ್ಟ ಬ್ರಶ್ಗಳು, ಅಕ್ರಿಲಿಕ್ […]
Read More
19-07-2026, 1:00 PM
ಊರ್ಮಿಳೆಯ ವ್ಯಥೆ ಅರಮನೆಯ ವೈಭೋಗ ಸಾಕೆನಿಸಿತು ಊರ್ಮಿಳೆಗೆ |ಪತಿಯ ಸಾಂಗತ್ಯ ಬೇಕೆನಿಸಿತು ಬಾಳ್ವೆಗೆ ||ಕೋಸಲದ ಕನ್ಯಾಮಣಿ ಬೆದರಿ ನಿಂತಳು |ಅಲಗಿನರಮನೆಯಲ್ಲಿ ಬೆಂದoತಾದಳು.|| ಲಕ್ಷ್ಮಣನ ಸಹಚಾರಿಣಿಯೆoಬ ಹೆಸರಿಲ್ಲ |ಸಂಬಂಧಗಳ ಹೊರತಾಗಿ ಅಸ್ಮಿತೆಯ ವರವಿಲ್ಲ ||ಜಗದ ಕಣ್ಣಿಗೆ ದುರಂತ ನಾಯಕಿ ಇವಳು |ಮೌನದಲ್ಲೇ ಸಹಿಸಿ ಕನಸುಗಳ ಬಲಿಕೊಟ್ಟವಳು || ಇವಳು ಬಯಸದೆ ಬಂದದ್ದು ಚಿರನಿದ್ರೆಯೋಗ |ಚಿರತಪಸ್ವಿಯಾಗಿ ಕಳೆದಳು ಜೀವನದ ಬಹುಭಾಗ ||ಒಡೆಯನ ಕರ್ತವ್ಯಪಾಲನೆಗೆ ಅಡ್ಡಿಬರುತ್ತಿರಲಿಲ್ಲ |ಆಲಸ್ಯತನದ ನಿದ್ದೆಗೆ ಮನವೊಪ್ಪುತ್ತಿರಲಿಲ್ಲ || ಪಾತ್ರದ ಹಿಂದಿದೆ ಮೌನ ಸಂಭಾಷಣೆಯ ದೃಶ್ಯಾವಳಿಗಳು |ಸಂಸಾರ ಬೆಳಗುವ […]
Read More
19-07-2026, 9:00 AM
ನಿಯಮಾವಳಿ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ, 2026ರ ಆಗಸ್ಟ್ 23ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಯುವವಾಹಿನಿ ಭಜನಾ ಸ್ಪರ್ಧೆ–2026ರ ನಿಯಮಾವಳಿ ಈ ಕೆಳಗಿನಂತಿದೆ. 🔹 ಅರ್ಹತೆ ಮತ್ತು ಸದಸ್ಯತ್ವ1) ಇದು ಯುವವಾಹಿನಿಯ ಅರ್ಹ ಸದಸ್ಯರಿಗೆ ಮಾತ್ರ ಸೀಮಿತವಾದ ಅಂತರ್ಘಟಕ ಭಜನಾ ಸ್ಪರ್ಧೆಯಾಗಿದೆ.2) ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರು ನಿಗದಿತ ಅವಧಿಯೊಳಗೆ ವಾರ್ಷಿಕ ಸದಸ್ಯತ್ವ ಶುಲ್ಕ ಪಾವತಿಸಿ, ಕೇಂದ್ರ ಸಮಿತಿಯಿಂದ ಅನುಮೋದನೆಗೊಂಡ ಸದಸ್ಯತ್ವ ಸಂಖ್ಯೆ […]
Read More
16-07-2026, 8:30 PM
ಬಂಟ್ವಾಳ, ಜುಲೈ 16: “ಶ್ರೀ ನಾರಾಯಣಗುರುಗಳ ಸಂದೇಶಗಳು ಇಂದಿನ ಸಮಾಜ ಮತ್ತು ಜೀವನ ಮೌಲ್ಯಗಳಿಗೆ ಅತ್ಯಂತ ಪ್ರಸ್ತುತವಾಗಿವೆ. ಸಮಾನತೆ, ಮಾನವೀಯತೆ, ಶಿಕ್ಷಣ ಹಾಗೂ ಸೌಹಾರ್ದತೆಯ ಕುರಿತು ಗುರುದೇವರು ನೀಡಿದ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ,” ಎಂದು ಶಿಕ್ಷಕಿ ತ್ರಿವೇಣಿ ರಮೇಶ್ ಹೇಳಿದರು. ಅವರು ದಿನಾಂಕ 16-07-2026 ರಂದು ನರಹರಿನಗರ, ಕಲ್ಲಡ್ಕದ ಶೇಖರ ಪೂಜಾರಿ ಅವರ ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಗುರುತತ್ವವಾಹಿನಿ ಮಾಲಿಕೆ–71ರ ಭಜನಾ […]
Read More