
25-09-2026, 8:00 PM
ಬಂಟ್ವಾಳ ಸೆ 25 : “ನಾರಾಯಣಗುರುಗಳು ಪ್ರತಿಪಾದಿಸಿದ ಅದ್ವೈತ ತತ್ವ ಕೇವಲ ವಿಚಾರದ ಮಟ್ಟದಲ್ಲಿ ಉಳಿಯದೆ, ‘ಮಾನವರು ಸಮಾನರು’ ಎಂಬ ಮಾನವೀಯ ಸಂದೇಶದ ರೂಪದಲ್ಲಿ ಸಮಾಜದಲ್ಲಿ ಅನುಷ್ಠಾನಗೊಂಡಿತು. ಮಾನವ ವಿಚಾರದಲ್ಲಿ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುವುದೇ ಧರ್ಮಗಳ ಮೂಲ ಆಶಯವಾಗಿದೆ. ಹಿಂದುಳಿದ ಸಮಾಜದಲ್ಲಿ ಆತ್ಮವಿಶ್ವಾಸ ಹಾಗೂ ಹೋರಾಟದ ಕಿಚ್ಚನ್ನು ಮೂಡಿಸಿ, ಸಾಮಾಜಿಕ ಪರಿವರ್ತನೆಗೆ ದಾರಿ ತೋರಿದ ಮಹಾನ್ ಚಿಂತಕರೇ ನಾರಾಯಣಗುರುಗಳು” ಎಂದು ಉಪನ್ಯಾಸಕ ಹರೀಶ್ ಎಸ್. ಕೋಟ್ಯಾನ್ ತಿಳಿಸಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಸದಸ್ಯರಾದ ಪ್ರಕಾಶ್ […]
Read More

25-09-2026, 8:00 PM
ಮಾಣಿ, ಸೆ. 25: “ಸಮಾಜದಲ್ಲಿ ನೆಲೆಸಿದ್ದ ಅನಕ್ಷರತೆ, ಅಜ್ಞಾನ, ಮೌಢ್ಯ ಹಾಗೂ ಅಸಮಾನತೆಯನ್ನು ದೂರಗೊಳಿಸಿ, ಶಿಕ್ಷಣ ಮತ್ತು ಜ್ಞಾನದ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು” ಎಂದು ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಕಾರ್ಯದರ್ಶಿ ರಾಜೇಶ್ ಬಲ್ಯ ಹೇಳಿದರು. ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 25ರಂದು ಧರ್ಮಣ ಪೂಜಾರಿ ಕನಪಾದೆ, ಬಿ.ಸಿ.ರೋಡು ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು […]
Read More

24-09-2026, 8:00 PM
ಮಾಣಿ, ಸೆ. 24: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮವು ಸುಜಿತ್ ಬಾಕಿಲ ಅವರ ಮನೆಯಲ್ಲಿ ನಡೆಯಿತು. “ಒಂದು ಜಾತಿ, ಒಂದು ಮತ, ಒಬ್ಬ ದೇವರು – ಮನುಷ್ಯನಿಗೆ” ಎಂಬ ಶ್ರೀ ನಾರಾಯಣ ಗುರುಗಳ ದೂರದೃಷ್ಟಿಯ ತತ್ತ್ವಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಜೀವಂತ ಸಾಕ್ಷಿಯಾಗಿದೆ ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು. ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ, ಧಾರ್ಮಿಕತೆಯೊಂದಿಗೆ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಕುದ್ರೋಳಿ ಕ್ಷೇತ್ರದ ಬೆಳವಣಿಗೆಯು […]
Read More

24-09-2026, 8:00 PM
ಮಾಣಿ, ಸೆ. 24: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾದ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮವು ಸುಜಿತ್ ಬಾಕಿಲ ಅವರ ಮನೆಯಲ್ಲಿ ನಡೆಯಿತು. “ಒಂದು ಜಾತಿ, ಒಂದು ಮತ, ಒಬ್ಬ ದೇವರು – ಮನುಷ್ಯನಿಗೆ” ಎಂಬ ನಾರಾಯಣ ಗುರುಗಳ ದೂರದೃಷ್ಟಿಯ ಚಿಂತನೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಜೀವಂತ ಸಾಕ್ಷಿಯಾಗಿದೆ ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು. ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ, ಧಾರ್ಮಿಕತೆಯೊಂದಿಗೆ ಸಾಮಾಜಿಕ ಜಾಗೃತಿಯನ್ನೂ ಮೂಡಿಸುತ್ತಿರುವ ಕುದ್ರೋಳಿ ಕ್ಷೇತ್ರದ ಬೆಳವಣಿಗೆ ನಾರಾಯಣ […]
Read More

24-09-2026, 8:00 PM
ಉಡುಪಿ, ಸೆ. 24: ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಗುರು ಸತ್ಸಂಗ ಕಾರ್ಯಕ್ರಮವು ಘಟಕದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕರ್ಕೆರ ಅವರ ಮನೆಯಲ್ಲಿ ನಡೆಯಿತು. ಮನೆಯವರು ಗುರುಗಳಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಭಜನಾ ಸಂಕೀರ್ತನೆ ನಡೆಯಿತು. ಗುರು ಸಂದೇಶ ನೀಡಿದ ವಿಶ್ರಾಂತ ಪ್ರಾಧ್ಯಾಪಕಿ ಡಾ. ಸುನಿತಾ ವಿ. ಮಾತನಾಡಿ, ಗುರುಗಳ ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ಭಜನೆಯ ಮೂಲಕ ಎಲ್ಲರೂ ಒಂದಾಗಿ ಸೇರುವ ಅವಕಾಶ ಕಲ್ಪಿಸುವ ಇಂತಹ ಗುರು ಸತ್ಸಂಗ […]
Read More

24-09-2026, 8:00 PM
ಕಾರ್ಕಳ ಸೆ 24: ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ಆದರ್ಶ ಮತ್ತು ಸಂದೇಶಗಳನ್ನು ಹರಿಕಥೆಯ ಮಾಧ್ಯಮದ ಮೂಲಕ ಜನಮಾನಸಕ್ಕೆ ಇನ್ನಷ್ಟು ಪರಿಚಯಿಸುವ ಅಗತ್ಯವಿದೆ ಎಂದು ಕರ್ನಾಟಕ ಸರಕಾರದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ ಅಭಿಪ್ರಾಯಪಟ್ಟರು. ಸೆಪ್ಟೆಂಬರ್ 24ರಂದು ಶ್ರೀ ಕೃಷ್ಣ ಕ್ಷೇತ್ರ, ಆನೆಕೆರೆ, ಕಾರ್ಕಳದಲ್ಲಿ ಬಿಲ್ಲವ ಸಂಘ ಕಾರ್ಕಳ, ಶ್ರೀ ಕೃಷ್ಣ ಕ್ಷೇತ್ರ ಕಾರ್ಕಳ, ಯೂತ್ ಬಿಲ್ಲವ (ರಿ.) ಕಾರ್ಕಳ ಹಾಗೂ ಸೇವಾದಳದ ಸಹಕಾರದೊಂದಿಗೆ ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ ಆಯೋಜಿಸಲಾದ […]
Read More

24-09-2026, 2:00 PM
ಮೂಡಬಿದಿರೆ ಸೆ 24 : ಯುವವಾಹಿನಿ (ರಿ.) ಮೂಡಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ, ಮೂಡಬಿದಿರೆ ಇವರ ಸಹಯೋಗದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಮೂಡಬಿದಿರೆಯ ಬಿಲ್ಲವ ಸಂಘದಲ್ಲಿ ಆಯೋಜಿಸಲಾಯಿತು. ಯುವವಾಹಿನಿ (ರಿ.) ಮೂಡಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್, ಬೆಂಗಳೂರು, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಸಹಾಯಕ ಮಹಾ ಪ್ರಬಂಧಕ ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ […]
Read More