ಬಂಟ್ವಾಳ ಸೆ 25 : “ನಾರಾಯಣಗುರುಗಳು ಪ್ರತಿಪಾದಿಸಿದ ಅದ್ವೈತ ತತ್ವ ಕೇವಲ ವಿಚಾರದ ಮಟ್ಟದಲ್ಲಿ ಉಳಿಯದೆ, ‘ಮಾನವರು ಸಮಾನರು’ ಎಂಬ ಮಾನವೀಯ ಸಂದೇಶದ ರೂಪದಲ್ಲಿ ಸಮಾಜದಲ್ಲಿ ಅನುಷ್ಠಾನಗೊಂಡಿತು. ಮಾನವ ವಿಚಾರದಲ್ಲಿ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುವುದೇ ಧರ್ಮಗಳ ಮೂಲ ಆಶಯವಾಗಿದೆ. ಹಿಂದುಳಿದ ಸಮಾಜದಲ್ಲಿ ಆತ್ಮವಿಶ್ವಾಸ ಹಾಗೂ ಹೋರಾಟದ ಕಿಚ್ಚನ್ನು ಮೂಡಿಸಿ, ಸಾಮಾಜಿಕ ಪರಿವರ್ತನೆಗೆ ದಾರಿ ತೋರಿದ ಮಹಾನ್ ಚಿಂತಕರೇ ನಾರಾಯಣಗುರುಗಳು” ಎಂದು ಉಪನ್ಯಾಸಕ ಹರೀಶ್ ಎಸ್. ಕೋಟ್ಯಾನ್ ತಿಳಿಸಿದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಸದಸ್ಯರಾದ ಪ್ರಕಾಶ್ ಪೂಂಜಾರೆ ಕೊಡಿ, ಇವರ ಮನೆಯಲ್ಲಿ ಗುರುತತ್ತ್ವ ವಾಹಿನಿ ಮಾಲಿಕೆ 79 ನಡೆಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಾಗೇಶ್ ಕೊಂಕಣ ಪದವು , ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಹರೀಶ್ ಅಜೆಕಲ, ಕೋಶಾಧಿಕಾರಿ ಪ್ರಜಿತ್ ಅಮೀನ್ ಎರಮಲೆ, ನಿರ್ದೇಶಕರಾದ ನವೀನ್ ಕಾರಜೆ, ಬ್ರಿಜೇಶ್ ಕಂಜತ್ತೂರು, ಅಶ್ವಿನ್ ಅಮೀನ್ ಸದಸ್ಯರಾದ ಪ್ರಶಾಂತ್ ಎರಮಲೆ,ಯೋಗೀಶ್ ಪೂಂಜಾರೆ ಕೋಡಿ, ಸುದೀಪ್ ರಾಯಿ, ನಾರಾಯಣ ಪಲ್ಲಿಕಂಡ, ಉದಯ್ ಮೇನಾಡ್, ಯಶೋಧರ್ ಕಡಂಬಳಿಕೆ, ಭವ್ಯಶ್ರೀ ಪ್ರಜಿತ್ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ಗಣೇಶ್ ಪೂಂಜಾರೆ ಕೋಡಿ, ನಾಗೇಶ್ ಪೊಂನ್ನೊಡಿ , ಹರೀಶ್ ಎಸ್ ಕೋಟ್ಯಾನ್, ಶಿವಾನಂದ, ಅರುಣ್ ಮಹಾಕಾಳಿ ಬೆಟ್ಟು ಉಪಸ್ಥಿತರಿದ್ದರು.
ಆತಿಥ್ಯ ವಹಿಸಿದ್ದ ಪ್ರಕಾಶ್ ಪೂಂಜಾರೆಕೋಡಿ ಆಗಮಿಸಿದ ಸರ್ವರಿಗೂ ಕ್ರತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ ಪ್ರಜಾರ ಅನುಷ್ಠಾನ ನಿರ್ದೇಶಕರಾದ ಮಹೇಶ್ ಬೊಳ್ಳಯಿ ಧನ್ಯವಾದ ನೀಡಿದರು. ಅಧ್ಯಕ್ಷರಾದ ಕಿರಣ್ ಪೂಂಜಾರೆ ಕೋಡಿ ಕಾರ್ಯಕ್ರಮ ನಿರೂಪಿಸದರು.








