ಅಧ್ಯಕ್ಷರಾಗಿ ಅರುಣ್ ಕುಮಾರ್, ಕಾರ್ಯದರ್ಶಿಯಾಗಿ ರಾಜೇಶ್ವರಿ ಆಯ್ಕೆ
07-04-2019, 4:09 AM
05-04-2019, 2:26 PM
ಕೂಳೂರು : ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ಲಕ್ಷ್ಮಿ ಎಂಬ ವಿದ್ಯಾರ್ಥಿನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ಮೊತ್ತವನ್ನು ನೀಡಲು ಅಸಾಧ್ಯವಾಗಿರುವುದರಿಂದ ಯುವವಾಹಿನಿ ಕೂಳೂರು ಘಟಕದ ವತಿಯಿಂದ ವಿದ್ಯಾರ್ಥಿನಿಗೆ ಆಸ್ಪತ್ರೆ ಶುಲ್ಕ ಭರಿಸಲು 20,000 /- ರೂಪಾಯಿ ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್
04-04-2019, 1:36 PM
ಮಾಣಿ : ಜೀವನ ಪಯಣದ ಹಾದಿಯಲ್ಲಿ ಸಂಬಂಧಗಳು ಬಲು ಮಹತ್ವ ಪಡೆದಿದೆ. ಸಂಬಂಧಗಳು ಉಳಿಯಬೇಕಾದರೆ ಸ್ಪಂದನೆಯ ಅಗತ್ಯವಿದೆ. ಅದಕ್ಕೆ ಸಕಾಲ ಎಂಬಂತೆ ದುರ್ದೈವವಸಾತ್ ನಮ್ಮಘಟಕದ ಸದಸ್ಯರಾದ ನಮ್ಮ ಹತ್ತಿರದ ನಿವಾಸಿ ಬರಿಮಾರ್ ಗ್ರಾಮದ, ಬಲ್ಯ ಬಳಿ ವಾಸವಾಗಿರುವ ಸದಾನಂದ ಪೂಜಾರಿ ಹಾಗೂ ಜಯಂತಿ ದಂಪತಿಗಳ ಪುತ್ರ, “ಅಶ್ವಥ್” ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಏ.ಜೆ ಹಾಸ್ಪಿಟಲ್ ನ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದರು ಹಾಗೂ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದೆ . ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ […]
31-03-2019, 4:59 PM
ಕಾರ್ಕಳ : ಯುವವಾಹಿನಿ (ರಿ) ಕಾರ್ಕಳ ಘಟಕದ 2019-20 ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ್ ಕಾರ್ಕಳ ಹಾಗೂ ಕಾರ್ಯದರ್ಶಿಯಾಗಿ ಗಣೇಶ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ
31-03-2019, 2:41 PM
ಉಡುಪಿ : ಉಡುಪಿ ಯುವವಾಹಿನಿ ಘಟಕದಲ್ಲಿ ದಿನಾಂಕ 31/03/2019 ರಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಸ್ವ ಉದ್ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಮಹಿಳೆಯರಿಗೆ – ಸಾಂಬಾರು ಪುಡಿ, ಸಾರಿನ ಪುಡಿ, ಪುಳಿಯೋಗರೆ ಮಿಕ್ಸ್, ಪೇಪರ್ ಬ್ಯಾಗ್ ತಯಾರಿಸುವ ವಿಧಾನ, ಮ್ಯಾಟ್ ತಯಾರಿಸುವ ಬಗ್ಗೆ ತರಬೇತಿ ನೀಡಿದರು. ಸುಮಾರು 20 ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡುರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮತಿ ಲಕ್ಷ್ಮೀಬಾಯಿ ಹಾಗೂ ಶ್ರೀಮತಿ ಸುಮಂಗಲಾ ರವರು ಭಾಗವಹಿಸಿದ್ದರು.ಶಕುಂತಳ ಎಸ್ […]
31-03-2019, 1:03 PM
ಕಾರ್ಕಳ : ಯುವವಾಹಿನಿಯ 34 ನೇ ನೂತನ ಘಟಕ ಯುವವಾಹಿನಿ (ರಿ) ಕಾರ್ಕಳ ಘಟಕ ಉದ್ಘಾಟನೆ ದಿನಾಂಕ 31.03.2019 ರಂದು ಕಾರ್ಕಳದ ಬಿಲ್ಲವ ಸಂಘದ ಸಭಾಭವನದಲ್ಲಿ ಬಿಲ್ಲವ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಡಿ. ಆರ್ ರಾಜು ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡುತ್ತಾ ವಿದ್ಯೆ ಉದ್ಯೋಗ ಸಂಪರ್ಕ ಧ್ಯೇಯದೊಂದಿಗೆ ಸ್ಥಾಪಿಸಲ್ಪಟ್ಟ ಯುವಾಹಿನಿ ಸಂಸ್ಥೆಯು ಬಿಲ್ಲವ ಸಮಾಜದ ಯುವಕರನ್ನು ಎಲ್ಲ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದರು ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ […]
30-03-2019, 4:44 PM
ಪಡುಬಿದ್ರಿ : ಯುವವಾಹಿನಿ ಸಂಘಟನೆಯು ಸಾಕಷ್ಟು ಬೆಳೆದು ನಿಂತು ಸಮಾಜಕ್ಕೆ ತನ್ನಿಂದಾದ ಸಹಾಯ ನೀಡುತ್ತಿದೆ. ಸಮಾಜದ ಅಭಿವೃದ್ಧಿಗಾಗಿ ನಿಸ್ವಾರ್ಥತೆಯಿಂದ ದುಡಿಯುತ್ತಿರುವ ಯುವಕರ ಭಲಾಡ್ಯ ಸಂಘಟನೆಯೇ ಯುವವಾಹಿನಿ ಎಂದು ಯುವವಾಹಿನಿಯ ಕಾರ್ಯ ಸಾಧನೆಗಳನ್ನು ಅರಿತುಕೊಂಡ ಮುಂಬೈ ಆನಂದ್ ರಾಠಿ ಆಂಡ್ ಗ್ರೂಪ್ ಸಂಸ್ಥೆಯ ಸದಾನಂದ ಪೂಜಾರಿ ಮಾದುಮನೆ ಇವರು ಹರ್ಷ ವ್ಯಕ್ತಪಡಿಸಿದರು. ಇವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ದಿನಾಂಕ 24.03.2019 ರಂದು ಜರಗಿದ ಯುವವಾಹಿನಿ(ರಿ.) ಪಡುಬಿದ್ರಿ ಘಟಕದ 2019-20 ನೇ ಸಾಲಿನ ಪದಗ್ರಹಣ […]
27-03-2019, 4:48 PM
ಬಜಪೆ : ಯುವವಾಹಿನಿ(ರಿ.) ಬಜಪೆ ಘಟಕ ,ಲಯನ್ಸ್ ಕ್ಲಬ್ ಮುಚ್ಚೂರು – ನೀರುಡ್ಡೆ ,ನಿರಂಜನ ಸ್ವಾಮಿ ಪಾಲಿಟೆಕ್ನಿಕ್ (ಅನುದಾನಿತ ) ಸುಂಕದಕಟ್ಟೆ , ಹಾಗೂ ವೆನ್‌ಲಾಕ್ ಆಸ್ಪತ್ರೆ ಮಂಗಳೂರು, ಇವರ ಸಂಯುಕ್ತ ಅಶ್ರಯದಲ್ಲಿ, ಬೃಹತ್ ರಕ್ತದಾನ ಶಿಬಿರ ತಾರೀಕು 27/03/2019 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಸುಂಕದಕಟ್ಟೆ ಇಲ್ಲಿ ಯಶಶ್ವಿಯಾಗಿ ನಡೆಯಿತು . ಎಸ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಜ್ಯೋತಿ ನಾರಾಯಣ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು .ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾದ […]
24-03-2019, 4:24 PM
ಮೂಡಬಿದಿರೆ : ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್ ಲಿಮಿಟೆಡ್ ಪಣಂಬೂರು,ಮಂಗಳೂರು, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮಂಗಳೂರು ಹಾಗೂ ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹರಿಪ್ರಸಾದ್ ಪಿ. ನಿಯೋಜಿತ ಉಪಾಧ್ಯಕ್ಷರು ಯುವವಾಹಿನಿ ರಿ. ಮೂಡಬಿದಿರೆ ಘಟಕ ಇವರ ನೇತ್ರತ್ವದಲ್ಲಿ ದಿನಾಂಕ 24-3-2019 ಭಾನುವಾರ ಫ್ರೆಂಡ್ಸ್ ಕ್ಲಬ್ ಸಭಾ ಭವನ ಹೊಸಂಗಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಸುಮಾರು 211 ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದಿರುತ್ತಾರೆ…