23-05-2026, 4:00 PM
ಮಂಗಳೂರು: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಸದಸ್ಯೆಯರಿಗಾಗಿ ಆಯೋಜಿಸಲಾಗಿದ್ದ “ಉಪನಿಬಂಧನೆ (ಬೈಲಾ) ಮಾಹಿತಿ ಕಾರ್ಯಾಗಾರವು ಮೇ 23ರಂದು ಸಂಜೆ ಯುವವಾಹಿನಿ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ಅವರು ಕಾರ್ಯಾಗಾರಕ್ಕೆ ಆಗಮಿಸಿದ್ದ ಸರ್ವರನ್ನೂ ಸ್ವಾಗತಿಸಿದರು. ಬಳಿಕ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಘಟಕದ ಮಾಜಿ ಅಧ್ಯಕ್ಷೆ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಮಹಿಳಾ ಸಬಲೀಕರಣಕ್ಕೆ ಪೂರಕ ಚಿಂತನೆ: […]
Read More
22-05-2026, 10:00 PM
ವಿಟ್ಲ: ಯುವವಾಹಿನಿ(ರಿ) ವಿಟ್ಲ ಘಟಕದ ವತಿಯಿಂದ ದಿನಾಂಕ 22/05/2026, ಶುಕ್ರವಾರದಂದು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು. ಭಜನಾ ಸಂಕೀರ್ತನೆ. ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿದ್ದು, ಭಾಗವಹಿಸಿದ ಭಕ್ತಾದಿಗಳ ಮನಸೂರೆಗೊಂಡಿತು. ಈ ಭಜನಾ ಸೇವೆಯಲ್ಲಿ ಯುವವಾಹಿನಿ ಘಟಕದ ಕಾರ್ಯದರ್ಶಿಗಳಾದ ಧನಲಕ್ಷ್ಮೀ ರಾಜೇಶ್ ಹಾಗೂ ಘಟಕದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
Read More
21-05-2026, 9:00 PM
ಉಡುಪಿ : ಯುವವಾಹಿನಿ (ರಿ ) ಉಡುಪಿ ಘಟಕದ ಗುರು ಸತ್ಸಂಗ ಕಾರ್ಯ ಕ್ರಮವು ಘಟಕದ ಜೊತೆಕಾರ್ಯದರ್ಶಿ ಸಚೇಂದ್ರ ಅಂಬಾಗಿಲುರವರ ಅಥಿತ್ಯದಲ್ಲಿ ಅವರ ಮನೆಯಲ್ಲಿ ಅವರ ಮನೆಯವರು ಸೇರಿ ದೀಪ ಬೆಳಗಿಸಿ ಪ್ರಾರಂಭಗೊಂಡಿತು. ಘಟಕದ ಸದಸ್ಯರು ಸೇರಿ ಭಜನಾ ಕಾರ್ಯಕ್ರಮ ನೆರವೇರಿಸಿದರು. ಮಾಜಿ ಅಧ್ಯಕ್ಷರಾದ ಭಾಸ್ಕರ್ ಸುವರ್ಣರವರು ಗುರುಗಳಿಗೆ ಮಹಾಪೂಜೆ ನೆರವೇರಿಸಿ. ಆಗಮಿಸಿದ ಎಲ್ಲರಿಗೂ ಹಾಗೂ ಮನೆಯವರಿಗೂ ಗುರುಗಳು ಒಳಿತು ಮಾಡುವಂತೆ ಪ್ರಾರ್ಥಿಸಿ ಮಹಾ ಪ್ರಸಾದವನ್ನು ನೀಡಿದರು.ಗುರು ಸಂದೇಶವನ್ನು ಖ್ಯಾತ ನಿರೂಪಕರಾದ ರಾಜೇಂದ್ರ ಪ್ರಸಾದ್ ಎಕ್ಕರ್ ರವರು […]
Read More
18-05-2026, 8:00 PM
ಮಂಗಳೂರು: ಯುವವಾಹಿನಿ ಮಂಗಳೂರು ಘಟಕದ ಸಂಯೋಜನೆಯಲ್ಲಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ನಡೆಯುತ್ತಿರುವ ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ 18-05-2026 ರಂದು ಸಂಜೆ 5.30 ಗಂಟೆಗೆ ಭಕ್ತಿಭಾವದಿಂದ ನೆರವೇರಿತು. ಈ ಭಜನಾ ಕಾರ್ಯಕ್ರಮವು ಬಿಲ್ಲವ ಮಹಿಳಾ ಸಂಘ SNDP ಕೋಡಿಕಲ್ ಇವರ ಸಹಯೋಗದೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಘಟಕದ ಅಧ್ಯಕ್ಷರು ಹಾಗೂ ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ಉಪಸ್ಥಿತರಿದ್ದು, ಭಜನಾ ಸೇವೆಗೆ ವಿಶೇಷ ಮೆರುಗು ನೀಡಿದರು.
Read More
17-05-2026, 9:00 PM
ಕೊಲ್ಯ : ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರದಲ್ಲಿ, ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ವಿಶೇಷ ‘ಗುರು ಪೂಜೆ’ ಹಾಗೂ ಭಜನಾ ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಂಭ್ರಮದೊಂದಿಗೆ 17.05.2026ರಂದು ಜರುಗಿತು. ಘಟಕದ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡ ಸತತ ಎರಡನೇ ವರ್ಷದ “ಶಿವಗಿರಿ ಯಾತ್ರೆ” ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ, ಕೊಲ್ಯ ಘಟಕದ ಆತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿಬಂದ ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷಿ “ಸಖೀ ಸಂವಾದ – 2026” ಕಾರ್ಯಕ್ರಮಗಳ ಯಶಸ್ಸಿನ ಕೃತಜ್ಞತಾ ರೂಪವಾಗಿ […]
Read More
17-05-2026, 8:30 PM
ಪೆರ್ಮಂಕಿ : ಯುವವಾಹಿನಿ (ರಿ.) ಪೆರ್ಮಂಕಿ ಘಟಕದ ವತಿಯಿಂದ ಗೆಜ್ಜೆಗಿರಿ ಶ್ರೀ ಆದಿ ಧೂಮಾವತಿ ಶ್ರೀದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲ್ಕುಡ-ಕಲ್ಲುರ್ಟಿ ದೈವದ ಮಹಾತ್ಮೆ ಸಾರುವ ‘ನಾಗರತಿ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನವು ಪೆರ್ಮಂಕಿಯ ವಿಶಾಲ್ ಗಾರ್ಡನ್‌ನಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು. ಸನ್ಮಾನ ಮತ್ತು ಆರ್ಥಿಕ ನೆರವು:ಇದೇ ಸಂದರ್ಭದಲ್ಲಿ ಉದ್ಯಮ ರಂಗದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪ್ರಮುಖ ಉದ್ಯಮಿ, ಸಮಾಜ ಸೇವಕ ಶೈಲೇಂದ್ರ ವೈ. ಸುವರ್ಣ ಅವರನ್ನು ಘಟಕದ ವತಿಯಿಂದ ಅತ್ಯಂತ […]
Read More
17-05-2026, 8:00 PM
ಬಜಪೆ: ಯುವವಾಹಿನಿ ಬಜಪೆ ಘಟಕದ ವತಿಯಿಂದ ಮೇ ತಿಂಗಳ ‘ಮನೆ ಮನೆ ಭಜನಾ ಸಂಕೀರ್ತನೆ’ ಕಾರ್ಯಕ್ರಮವು ದಿನಾಂಕ 17.05.2026 ರಂದು ಸಂಜೆ 6.00 ರಿಂದ 7.30 ರವರೆಗೆ ಅತ್ಯಂತ ಶ್ರದ್ಧಾ-ಭಕ್ತಿಭಾವದಿಂದ ಜರಗಿತು. ಘಟಕದ ಮಾಜಿ ಅಧ್ಯಕ್ಷರಾದ ದೇವರಾಜ್ ಅಮೀನ್ ಹಾಗೂ ಕಾರ್ಯದರ್ಶಿ ಸುಚಿತ ದೇವರಾಜ್ ದಂಪತಿಗಳ ನಿವಾಸವಾದ ಬಜಪೆ-ಕಟೀಲ್ ರಸ್ತೆಯ “ಶಿವಗಿರಿ” ಯಲ್ಲಿ ಈ ಭಕ್ತಿಪೂರ್ವಕ ಭಜನಾ ಸೇವೆ ನೆರವೇರಿತು. ದೇವರಾಜ್ ಅಮೀನ್ ಅವರ ತಂದೆ-ತಾಯಿಯವರ 45ನೇ ವಿವಾಹ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಈ ವಿಶೇಷ ಭಜನಾ […]
Read More
17-05-2026, 8:00 PM
ಕೆಂಜಾರು : ಯುವವಾಹಿನಿ (ರಿ.) ಕೆಂಜಾರು – ಕರಂಬಾರು ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಮೇ 17ರಂದು ಕೆಂಜಾರು ಶ್ರೀದೇವಿ ಭಜನಾ ಮಂದಿರದ ಸಭಾಂಗಣದಲ್ಲಿ ಜರುಗಿತು.ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಅಧ್ಯಕ್ಷರಾದ ಮಹಾಬಲ ಪೂಜಾರಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ತಂಡದ ಸಮಾಜಮುಖಿ ಚಿಂತನೆಗಳಿಗೆ ಶುಭ ಹಾರೈಸಿದರು. ಘಟಕದ ಅಧ್ಯಕ್ಷರಾದ ಸಂದೀಪ್ ಕೋರೆಮನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು […]
Read More
17-05-2026, 8:00 PM
ಕೆಂಜಾರು : ಯುವವಾಹಿನಿ (ರಿ) ಕೆಂಜಾರು -ಕರಂಬಾರು ಘಟಕದ 2026-27ನೇ ಸಾಲಿನ ಅಧ್ಯಕ್ಷರಾಗಿ ಪ್ರಿತೇಶ್ ಕುಮಾರ್ ಅರ್ಬಿ ಆಯ್ಕೆಯಾಗಿದ್ದಾರೆ 2026-27ನೇ ಸಾಲಿನ ಕಾರ್ಯಕಾರಿ ಸಮಿತಿಅಧ್ಯಕ್ಷರು :- ಪ್ರಿತೇಶ್ ಕುಮಾರ್ ಅರ್ಬಿಒಂದನೇ ಉಪಾಧ್ಯಕ್ಷರು :- ಮಿಥುನ್ ಕುಮಾರ್ ಕರಂಬಾರುಎರಡನೇ ಉಪಾಧ್ಯಕ್ಷರು :- ನವ್ಯ ಜಯಂತ್ಕಾರ್ಯದರ್ಶಿ :- ರಾಜೇಶ್ ಎಸ್ ಪೂಜಾರಿ ಕೆಂಜಾರುಜತೆ ಕಾರ್ಯದರ್ಶಿ :- ರೇಷ್ಮ ಲೋಕೇಶ್ಕೋಶಾಧಿಕಾರಿ :- ಉಷಾ ಶಂಕರ್ವಿದ್ಯಾನಿಧಿ ನಿರ್ದೇಶಕರು : ಮಾಯ ಸಂದೀಪ್ಮಹಿಳಾ ಸಂಘಟನಾ ನಿರ್ದೇಶಕರು :-ಗೀತ ಲಿಂಗಪ್ಪ, ಪ್ರಜ್ಞಾ, ಹೇಮಲತಾ ಹೇಮಂತ್ಪ್ರಚಾರ ನಿರ್ದೇಶಕರು […]
Read More
17-05-2026, 7:00 PM
ಬಂಟ್ವಾಳ: ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಮೇ 17, 2026ರಂದು ಮಂಗಳೂರಿನ ತಣ್ಣೀರುಬಾವಿ ಟ್ರೀ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವವಾಹಿನಿ ಕುಟುಂಬದ ‘ಸ್ನೇಹ ಮಿಲನ’ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಬಂಟ್ವಾಳ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ನೈಬೆಲು ಅವರು ಆಗಮಿಸಿದ ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಬಂಟ್ವಾಳ ಘಟಕದ ಯುವವಾಹಿನಿ ಕುಟುಂಬದ ಒಟ್ಟು 94 ಸದಸ್ಯರು ಈ ಪ್ರಕೃತಿಯ ಮಡಿಲಲ್ಲಿ ನಡೆದ ಸ್ನೇಹಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಸಂಭ್ರಮದ ಆಟೋಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳುಬೆಳಗಿನ […]
Read More