Yuvavahini

ಘಟಕಗಳು

ಧಾರ್ಮಿಕ ಶಿಕ್ಷಣ – ಭಜನಾ ತರಬೇತಿ ಕಮ್ಮಟ

ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 15.10.19 ರಂದು ಧಾರ್ಮಿಕ ಶಿಕ್ಷಣ_ ಭಜನಾ  ತರಬೇತಿ ಕಮ್ಮಟ  ಬ್ರಹ್ಮಶ್ರೀ  ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯದಲ್ಲಿ ಬಿಲ್ಲವ ಸೇವಾ ಸಮಾಜದ ಹಿರಿಯರು  ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು . ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವಯ೯ರಿಗೆ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಹಿರಿಯ ಸದಸ್ಯರಾದ […]

Read More

ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಉಡುಪಿ ಘಟಕದ ಆಶ್ರಯದಲ್ಲಿ “ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರಧಾನ ಸಮಾರಂಭ” ಯುವವಾಹಿನಿಯ ಸಭಾಂಗಣದಲ್ಲಿ ದಿನಾಂಕ 13/10/2019 ರಂದು ಜರಗಿತು. ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಖ್ಯಾತ ಹಿರಿಯ ಲೇಖಕಿ ಯಶವಂತಿ ಎಸ್ ಸುವರ್ಣ, ನಕ್ರೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಪಿ ಎನ್ ಅಚಾರ್ಯ ಕೊಡಂಕೂರು ಇವರಿಗೆ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ಪ್ರಧಾನ ಮಾಡಿದರು. […]

Read More

ಯುವ ಸ್ಪಂದನ ಸೇವಾ ಯೋಜನೆಯ 20ನೇ ಸೇವೆ ಹಸ್ತಾಂತರ

ಯುವವಾಹಿನಿ ರಿ. ಮೂಡಬಿದಿರೆ‌ ಘಟಕದ ವತಿಯಿಂದ ಆರಂಭಿಸಲಾದ ಯುವ ಸ್ಪಂದನ ಸೇವಾ ಯೋಜನೆಯ 20 ನೇ ಸೇವೆಯನ್ನು ಆರ್ಥಿಕ ನೆರವಿಗಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿಶ್ವನಾಥ ಪೂಜಾರಿ ವಿದ್ಯಾ ನಿವಾಸ್ ನಡಿಬೆಟ್ಟು ಮನೆ ಪುಚ್ಚೆಮೊಗರು ಇವರು ಮನವಿಯನ್ನು ಸಲ್ಲಿಸಿರುತ್ತಾರೆ ಈ ಮನವಿಯನ್ನು ಪರಿಶೀಲಿಸಲು ಇಂದು ಸಂಜೆ ಸಮಯ 6.30 ಕ್ಕೆ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಇವರು ಕಡುಬಡತನದಲ್ಲಿದ್ದು ಇವರಿಗೆ ಹೆಂಡತಿ, ಮಗು ಹಾಗೂ ಹೆತ್ತವರಿಗೆ ಇವರೇ ಆಧಾರ ಸ್ತಂಭವಾಗಿದ್ದು ಇದೀಗ ಮನೆಯವರಿಗೆ ದಿಕ್ಕೇ ತೋಚದಂತಗಿದೆ.ತೀರಾ […]

Read More

ಮಂಗಳೂರು ದಸರಾ ಶೋಭಾಯಾತ್ರೆ ಯಲ್ಲಿ ಶರಬತ್ ಸೇವೆ

ಯುವವಾಹಿನಿ (ರಿ) ಮಂಗಳೂರು ಘಟಕ ವತಿಯಿಂದ ವಿಶ್ವ ವಿಖ್ಯಾತ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಸತತ 8ನೇ ವರ್ಷದ ಶರಬತ್ ಸೇವೆಯು ದಿನಾಂಕ 08.10.2019ರಂದು ನಡೆಯಿತು. ಶರಬತ್ ಸೇವೆಯ ಉದ್ಘಾಟನೆಯನ್ನು ನಮಗೆ ಸ್ಥಳಾವಕಾಶ ಒದಗಿಸಿಕೊಟ್ಟ ಎಸ್ಎಲ್ ಶೇಟ್ ಡೈಮಂಡ್ಸ್ ಹೌಸ್ ನ ಮಾಲಕರಾದ ರವೀಂದ್ರ ಶೇಟ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮಹಾಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಪಾಲಿಸಿಕೊಂಡು ಅತ್ಯುತ್ತಮವಾದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಸಮಾಜದಲ್ಲಿ ಉತ್ತಮವಾದ […]

Read More

ಕುಪ್ಪೆಪದವು ದಸರಾ ಶೋಭಾಯಾತ್ರೆಗೆ ಸ್ತಬ್ಧಚಿತ್ರ

ದಿನಾಂಕ 08/10/2019 ರಂದು ದಸರಾ ಉತ್ಸವದ ಪ್ರಯುಕ್ತ ಶ್ರೀ ದುರ್ಗೆಶ್ವರಿ ದೇಗುಲದಿಂದ ಹೊರಡುವ ಶೋಭಾ ಯಾತ್ರೆಗೆ ಯುವವಾಹಿನಿ ಕುಪ್ಪೆಪದವು ಘಟಕದ ವತಿಯಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀರವರ ಪ್ರತಿಮೆಯನ್ನು ಸ್ತಬ್ಧ ಚಿತ್ರದ ಪ್ರದರ್ಶನ ಮೂಲಕ ಅವರ ಜೀವನ ಚರಿತ್ರೆಯನ್ನು ತಿಳಿಸುವ ಮೂಲಕ ಭವ್ಯ ಮೆರವಣಿಗೆಯಲ್ಲಿ ಸಾಗಲಾಯಿತು. ಮೆರವಣಿಗೆಯ ಉದ್ದಕ್ಕೂ ನಮ್ಮ ಸದಸ್ಯರೆಲ್ಲರೂ ಈ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.(ಈ ಕಾರ್ಯಕ್ರಮಕ್ಕೆ ದಿನೇಶ್ ರಾಯಿರವರು ಹಿನ್ನೆಲೆ ಧ್ವನಿಯಾಗಿ ತೆರೆಯ ಮರೆಯಲ್ಲಿ ಕಾರ್ಯ ನಿರ್ವಹಿಸಿ ಸ್ತಬ್ಧ ಚಿತ್ರಕ್ಕೆ […]

Read More

ಉಚಿತ ಟೈಲರಿಂಗ್ ತರಬೇತಿ ಶಿಬಿರ

ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ,ಸೇವಾಭಾರತಿ ಕನ್ಯಾಡಿಯವರ ಸಹಭಾಗಿತ್ವದಲ್ಲಿ ದಿನಾಂಕ 6/ 10 ಭಾನುವಾರ  ಬಜಿರೆಯಲ್ಲಿ ಮಹಿಳೆಯರಿಗಾಗಿ ಒಂದು ತಿಂಗಳ ಉಚಿತ ಟೈಲರಿಂಗ್ ತರಭೇತಿ ಶಿಬಿರ ಉದ್ಘಾಟನೆಗೊಂಡಿತ್ತು.ಸೇವಾಭಾರತಿ ಕನ್ಯಾಡಿಯ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್ ಉದ್ಘಾಟನೆ ಮಾಡಿದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ವೇಣೂರು ಘಟಕದ ಅಧ್ಯಕ್ಷರಾದ ನವೀನ್ ಪಚ್ಚೇರಿ ವಹಿಸಿದ್ದರು ,ಕಾರ್ಯಕ್ರಮದ ವೇದಿಕೆಯಲ್ಲಿ  ಸೇವಾಭಾರತಿಯ ಗ್ರಾಮಸಮಿತಿಯ ಅಧ್ಯಕ್ಷ ಹರೀಣ್ ಸುವರ್ಣ ಸೇರಿದಂತೆ ಯುವವಾಹಿನಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು

Read More

ಶಿವಗಿರಿ ಯಾತ್ರೆ

  ಯುವವಾಹಿನಿ (ರಿ) ಪಣಂಬೂರು -ಕುಳಾಯಿ ಘಟಕದ ವತಿಯಿಂದ ಅಕ್ಟೋಬರ್ 2ರಿಂದ 5ರ ತನಕ  ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ಸ್ಥಳವಾದ ಕೇರಳದ ಶಿವಗಿರಿಗೆ  50   ಸದಸ್ಯರ ತಂಡ ದೊಂದಿಗೆ ಯಾತ್ರೆಯನ್ನು ಹಮ್ಮಿ ಕೊಂಡು  ಯಶಸ್ವಿಯಾಗಿದೆ

Read More

ಶ್ರೀ ಚಾಮುಂಡಿ ರಾಹು ಗುಳಿಗ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ

ಶ್ರೀ ಚಾಮುಂಡಿ ರಾಹು ಗುಳಿಗ ದೇವಸ್ಥಾನದಲ್ಲಿ ನಮ್ಮ ಯುವವಾಹಿನಿ(ರಿ)ಶಕ್ತಿನಗರ ಘಟಕದ ವತಿಯಿಂದ ಭಜನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು ,ಒಂದು ಘಂಟೆಗಳ ಸುಶ್ರಾವ್ಯ ಗಾಯನದೊಂದಿಗೆ ಶ್ರೀ ಯಶವ0ತ ಕರ್ಕೇರ ಎಲ್ಲಾರ ಮನ ಗೆದ್ದರು ಭಜನೆಯಲ್ಲಿ ಶ್ರೀನಿವಾಸ ಪೂಜಾರಿ, ಜಯರಾಮ ಪೂಜಾರಿ , ಲಕ್ಷ್ಮೀಕಾಂತ್, ಮಾರ್ರಪ್ಪ ಪೂಜಾರಿ, ಭವಾನಿಶಂಕರ, ಭವ್ಯಕುಮಾರ್, ಯೋಗೀಶ್ ಸುವರ್ಣ, ರೋಹಿಣಿ, ರಾಜೀವಿ, ಸುರೇಖಾ, ಶಂಕರ್ ಪೂಜಾರಿ, ಅನನ್ಯ ಮುಂತಾದ ಹಲವೂ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮ ಚಂದಗಾಣಿಸಿದರು..

Read More

ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ದಿನಾಂಕ 2.10.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ 150 ನೇ ಗಾಂಧಿ ಜಯಂತಿ ಪ್ರಯುಕ್ತ ಭಾರತಿ ಪದವಿಪೂರ್ವ ಕಾಲೇಜು, ನಂತೂರು ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತಿ ಸಮೂಹ ಸಂಸ್ಥೆಯ ಸೇವಾ ಸಮಿತಿಯ ಕಾರ್ಯದರ್ಶಿ ಕೃಷ್ಣ ನೀರಮೂಲೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ (ರಿ) ಕೂಳೂರು ಘಟಕದ ಉಪಾಧ್ಯಕ್ಷರಾದ ಪವಿತ್ರ. ಯು. ಅಮೀನ್ ರವರು ದೀಪ ಬೆಳಗಿಸುವುದರ ಮೂಲಕ ಮಾಡಿದರು. ನಂತರ ಮಾತನಾಡಿದ ಇವರು ಸ್ವಚ್ಛತೆ ಎಂಬುದು ನಮ್ಮ ಮನೆಯಲ್ಲಿ ಪ್ರಾರಂಭವಾಗಿ […]

Read More

ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಯುವವಾಹಿ (ರಿ) ಕಟಪಾಡಿ ಘಟಕ ಸ್ಥಳೀಯ ಕಟಪಾಡಿ ಗ್ರಾಮ ಪಂಚಾಯತ್ ವಿವಿಧ ಸಂಘ  ಸಂಸ್ಥೆಗಳ ಮುಖೇನ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಮ್ಮ ಯುವವಾಹಿನಿ ಘಟಕ (ಸಾರ್ವಜನಿಕ ಹಿಂದೂ ರುದ್ರಭೂಮಿ ಸರಕಾರಿ ಗುಡ್ಡೆ ) ಇಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು ಸ್ಥಳೀಯ ಗ್ರಾಮಪಂಚಯತಿನ ಸದಸ್ಯರಾದ ಅಶೋಕ್ ರಾವ್ ,ಉದಯ ಶೆಟ್ಟಿ ಕನ್ಯಾನ ,ಸ್ಥಳೀಯರಾದ ಶೇಕರ್ ಶೆಟ್ಟಿ, ಸರ್ವಾಜನಿಕ ಗಣೇಶೋತ್ಸವ ಸಮಿತಿ ಸರಕಾರಿ ಗುಡ್ಡೆ ಇದರ ಅಧ್ಯಕ್ಷರಾದ ಕಿಶೋರ್ ಕುಮಾರ್ ಯುವವಾಹಿನಿ ಅಧ್ಯಕ್ಷರಾದ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!