28-05-2026, 9:00 PM
ಮಂಗಳೂರು, ಮೇ 28: ಯುವವಾಹಿನಿ (ರಿ.) ಕಂಕನಾಡಿ ಘಟಕವು ತನ್ನ ಸಮಾಜಮುಖಿ ಕಾರ್ಯಚಟುವಟಿಕೆಗಳ ಅಂಗವಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರಿನ ಉಜ್ಜೋಡಿ ನಿವಾಸಿ ರಾಜೇಶ್ ಅವರಿಗೆ ಆರ್ಥಿಕ ನೆರವು ನೀಡಿದೆ. ರಾಜೇಶ್ ಅವರ ವೈದ್ಯಕೀಯ ಚಿಕಿತ್ಸೆಗೆ ಸಹಕಾರಿಯಾಗುವ ಉದ್ದೇಶದಿಂದ ಘಟಕದ ಸದಸ್ಯರು ಮತ್ತು ಹಿತೈಷಿಗಳ ಸಹಯೋಗದೊಂದಿಗೆ ಸಂಗ್ರಹಿಸಲಾದ Rs. 30,000/- ಮೊತ್ತದ ಧನಸಹಾಯವನ್ನು 28-05-2026 ರಂದು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ರಾಜೇಶ್ ಅವರು ಶೀಘ್ರವಾಗಿ ಸಂಪೂರ್ಣ ಆರೋಗ್ಯವನ್ನು […]
Read More
28-05-2026, 8:00 PM
ಕಲ್ಲಡ್ಕ: “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ” ಎಂಬ ಸಂದೇಶದ ಮೂಲಕ ಸಂಸ್ಕಾರಯುತ ಶಿಕ್ಷಣ ಹಾಗೂ ಸಂಘಟಿತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳು ಇಂದಿಗೂ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ ಎಂದು ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅಭಿಪ್ರಾಯಪಟ್ಟರು. ಅವರು ಕಲ್ಲಡ್ಕ ಪೂರ್ಲಿಪಾಡಿಯ ಚಂದ್ರಶೇಖರ್ ಸಾಲಿಯಾನ್ ಅವರ ನಿವಾಸದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ‘ಗುರುತತ್ವವಾಹಿನಿ ಭಜನಾ ಸಂಕೀರ್ತನೆ–69’ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡುತ್ತಾ ಮಾತನಾಡಿದರು.ಬ್ರಹ್ಮಶ್ರೀ ನಾರಾಯಣ ಗುರುಗಳು ಆಧ್ಯಾತ್ಮಿಕ […]
Read More
28-05-2026, 6:00 PM
ಸುರತ್ಕಲ್, ಮೇ 28: ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ ಸದಸ್ಯರ ನಡುವಿನ ಒಡನಾಟ ಹಾಗೂ ಸಂಘಟನಾ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 2026ರ ಮೇ 28ರಂದು ಒಂದು ದಿನದ ಕಿರು ಪ್ರವಾಸವನ್ನು ಮುರುಡೇಶ್ವರ ದೇವಸ್ಥಾನ, ಇಡಗುಂಜಿ ಮಹಾಗಣಪತಿ ದೇವಸ್ಥಾನ ಹಾಗೂ ಹೊನ್ನಾವರದ ಜೋಯ್ ಎಂಜಾಯ್ ವಾಟರ್ ಪಾರ್ಕ್ಗೆ ಆಯೋಜಿಸಲಾಗಿತ್ತು. ಈ ಪ್ರವಾಸದಲ್ಲಿ ಸುರತ್ಕಲ್ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 50 ಮಂದಿ ಭಾಗವಹಿಸಿದ್ದರು. ಬೆಳಿಗ್ಗೆ 6.00 […]
Read More
28-05-2026, 1:00 PM
ಮೂಡುಬಿದಿರೆ, ಮೇ 28: ಯುವವಾಹಿನಿ (ರಿ.) ಮೂಡುಬಿದಿರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ನೋಮಿ ನೆಟ್ವರ್ಕ್ ಪ್ರಾಯೋಜಕತ್ವದಲ್ಲಿ ವಿಚೀಸ್ ಕೌಶಲ್ಯ ಕೇಂದ್ರ ಮೂಡುಬಿದಿರೆ ಸಹಯೋಗದೊಂದಿಗೆ ಆಯೋಜಿಸಲಾದ 15 ದಿನಗಳ ಉಚಿತ ಫ್ಯಾಷನ್ ಡಿಸೈನ್ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವು 28-05-2026 ರಂದು ವಿಚೀಸ್ ಕೌಶಲ್ಯ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಅವರು, ಮಹಿಳೆಯರು ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆದು […]
Read More
27-05-2026, 9:00 PM
ಮಂಗಳೂರು, ಮೇ 27: ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ತುಳುನಾಡಿನ ಅಪ್ರತಿಮ ಕ್ರಾಂತಿವೀರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮಂಜ ಬೈದ್ಯರ ಸಂಸ್ಮರಣಾ ಕಾರ್ಯಕ್ರಮವನ್ನು ಮೇ 27, 2026 ರಂದು ಕುಂಟಲ್ಪಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಯೋಜಿಸಲಾಯಿತು. ಬ್ರಿಟಿಷರ ದಾಸ್ಯದಿಂದ ಜನರನ್ನು ಮುಕ್ತಗೊಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಂಜ ಬೈದ್ಯರು, ತಮ್ಮ ಧೈರ್ಯಶಾಲಿ ಹೋರಾಟದ ಪರಿಣಾಮವಾಗಿ 1837 ರ ಮೇ 27 ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟು ವೀರಮರಣವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅವರ […]
Read More
27-05-2026, 8:00 PM
ಕೂಳೂರು : ಸಮಾಜಮುಖಿ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ಸದಾ ಮುಂಚೂಣಿಯಲ್ಲಿರುವ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಮತ್ತೊಂದು ಶ್ಲಾಘನೀಯ ಸೇವಾ ಕಾರ್ಯ ನಡೆದಿದೆ. ಘಟಕದ 26ನೇ ಸೇವಾನಿಧಿ ಯೋಜನೆಯಾದ ಸಹಾಯಹಸ್ತ ಕಾರ್ಯಕ್ರಮದಡಿ, ಇತ್ತೀಚೆಗೆ ಸಂಭವಿಸಿದ ಭೀಕರ ವಾಹನ ಅಪಘಾತದಿಂದ ತೀವ್ರ ತೊಂದರೆಗೆ ಒಳಗಾಗಿದ್ದ ಕಾರ್ಕಳದ ಈದು ನಿವಾಸಿ ದಯಾನಂದ ಪೂಜಾರಿ (26) ಅವರ ಕುಟುಂಬಕ್ಕೆ ತುರ್ತು ಚಿಕಿತ್ಸಾ ವೆಚ್ಚಕ್ಕಾಗಿ ರೂ.16,000/-ಧನಸಹಾಯವನ್ನು ನೀಡಲಾಯಿತು.ದಿನಾಂಕ 27-05-2026ರಂದು ನಡೆದ ಘಟಕದ ಸಾಪ್ತಾಹಿಕ ಸಭೆಯಲ್ಲಿ, ಘಟಕದ ಅಧ್ಯಕ್ಷೆ ಗೀತಾ ವಸಂತ್ […]
Read More
27-05-2026, 8:00 PM
ಕೊಲ್ಯ: ತುಳುನಾಡಿನ ಹೆಮ್ಮೆಯ ಕ್ರಾಂತಿಕಾರಿ ವೀರ, ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ಇತಿಹಾಸ ಪುರುಷ ಮಂಜ ಬೈದ್ಯರ 190ನೇ ಪುಣ್ಯತಿಥಿ ಪ್ರಯುಕ್ತ ಸಂಸ್ಮರಣಾ ಕಾರ್ಯಕ್ರಮವು ಮೇ 27ರಂದು ಇಲ್ಲಿನ ಕೊಲ್ಯ ಬಿಲ್ಲವ ಸಂಘದ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ–ಸೋಮೇಶ್ವರ ಇದರ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್ ಸುವರ್ಣ ಕನೀರುತೋಟ ಅವರು ದೀಪ ಪ್ರಜ್ವಲಿಸಿ, ಮಂಜ ಬೈದ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ […]
Read More
26-05-2026, 1:00 PM
ಬಜಪೆ, ಮೇ 26: ಯುವವಾಹಿನಿ (ರಿ.) ಬಜಪೆ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ–ಕರಂಬಾರು ಹಾಗೂ ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವನ್ನು 26-05-2026 ರಂದು ನಾರಾಯಣ ಗುರು ಸಮುದಾಯ ಭವನ, ಬಜಪೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಗಳೊಂದಿಗೆ ಅಂಚೆ ಕಚೇರಿಯ […]
Read More
24-05-2026, 9:00 PM
ಬಜಪೆ, ಮೇ 24: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಸದಸ್ಯರ ನಡುವಿನ ಬಾಂಧವ್ಯ ವೃದ್ಧಿ ಹಾಗೂ ಸಂಘಟನಾ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ತುಂಬುವ ಉದ್ದೇಶದಿಂದ 24-05-2026 ರಂದು ಒಂದು ದಿನದ ಸ್ನೇಹ ಪ್ರವಾಸವನ್ನು “ಕಿಂಗ್ ಆಫ್ ಕಿಂಗ್ಸ್” ವಾಟರ್ ಪಾರ್ಕ್ಗೆ ಆಯೋಜಿಸಲಾಯಿತು. ಪ್ರವಾಸದಲ್ಲಿ ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 33 ಮಂದಿ ಭಾಗವಹಿಸಿದ್ದರು. ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿವಿಧ ಮನರಂಜನಾ ಚಟುವಟಿಕೆಗಳು […]
Read More
24-05-2026, 8:00 PM
ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಮೇ 24, 2026ರಂದು ಆಯೋಜಿಸಲಾದ “ಯುವ ಸ್ನೇಹ ಸಂಭ್ರಮ – 2026” ಎಂಬ ಒಂದು ದಿನದ ಸ್ನೇಹ ಪ್ರವಾಸವು ಅತ್ಯಂತ ಸಂತೋಷ, ಸೌಹಾರ್ದತೆ ಹಾಗೂ ಸಂಭ್ರಮದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಪ್ರವಾಸ ಆರಂಭಕ್ಕೂ ಮುನ್ನ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಕೊಡಾಜೆ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬೆಳಿಗ್ಗೆ 6.00 ಗಂಟೆಗೆ ಸದಸ್ಯರು ಪ್ರವಾಸಕ್ಕೆ ಚಾಲನೆ ನೀಡಿದರು. ಮೊದಲಿಗೆ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರ ಹಾಗೂ ಬಳಿಕ […]
Read More