ಉಪ್ಪಿನಂಗಡಿ, ಜುಲೈ 16: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ, ಉಪ್ಪಿನಂಗಡಿ ಸರ್ಕಲ್‌ಗೆ ಸ್ವಾತಂತ್ರ್ಯ ಹೋರಾಟಗಾರ ಮಂಜ ಬೈದ್ಯ ಅವರ ಹೆಸರನ್ನು ನಾಮಕರಣ ಮಾಡುವುದರ ಜೊತೆಗೆ, ಅವರ ಪ್ರತಿಮೆಯನ್ನು ನಿರ್ಮಿಸಿ ಮುಂದಿನ ಪೀಳಿಗೆಗೆ ಅವರ ದೇಶಸೇವೆ ಹಾಗೂ ತ್ಯಾಗವನ್ನು ಶಾಶ್ವತವಾಗಿ ಪರಿಚಯಿಸುವಂತೆ ಮನವಿ ಸಲ್ಲಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮನೋಜ್ ಎನ್. ಸಾಲ್ಯಾನ್, ಗೌರವ ಸಲಹೆಗಾರ ವರದರಾಜ್ ಎಂ., ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ. ಬಿ., ಮಾಜಿ ಅಧ್ಯಕ್ಷ ಚಂದ್ರಶೇಖರ್ ಸನಿಲ್, ಕಾರ್ಯದರ್ಶಿ ರಮೇಶ್ ಎಸ್. ಸಾಂತ್ಯ, ಉಪಾಧ್ಯಕ್ಷರಾದ ಅಂಕಿತ್ ಎಂ.ಜೆ., ವಿಕ್ರಮ್ ಬಿಳಿಯೂರು, ರಕ್ಷಿತ್ ಸುಣ್ಣಾನ, ಶೇಖರ್ ಪೂಜಾರಿ ಹಾಗೂ ಘಟಕದ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


