21-06-2026, 11:00 AM
ಬಜಪೆ, ಜೂನ್ 21 : ಯುವವಾಹಿನಿ (ರಿ.) ಬಜಪೆ ಘಟಕ ಹಾಗೂ ಲೈಟ್ ಹೌಸ್ ರಾಜಯೋಗ ಮೆಡಿಟೇಶನ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಜೂನ್ 21ರಂದು ದುರ್ಗಾ ಬಜಪೆ,ರೆಸಿಡೆನ್ಸಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಯುವವಾಹಿನಿ (ರಿ.) ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಗ ಸಮಿತಿಯ ಸಂಚಾಲಕಿ ರೇವತಿ ಸನಿಲ್ ಅವರು, ಇಂದಿನ ಒತ್ತಡದ ಜೀವನಶೈಲಿಯಿಂದ ದೂರ […]
Read More
21-06-2026, 10:00 AM
ಉಪ್ಪಿನಂಗಡಿ, ಜೂನ್ 21: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ನೇತೃತ್ವದಲ್ಲಿ, ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ “ಮರ ಬೆಳೆಸಿ – ಭವಿಷ್ಯ ಉಳಿಸಿ” ಅಭಿಯಾನವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಕ್ರೀಡಾಂಗಣದ ಸುತ್ತಮುತ್ತ ವಿವಿಧ ಬೆಲೆಬಾಳುವ ಮರಗಳು ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು, ಅವುಗಳ ಪೋಷಣೆಯ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಘಟಕದ ಗೌರವ ಸಲಹೆಗಾರ ವರದರಾಜ್ ಎಂ. ಅವರು ಪರಿಸರ […]
Read More
20-06-2026, 11:00 PM
ಮಂಗಳೂರು, ಜೂನ್ 20 : ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 20ರಂದು ಸಂಜೆ 4 ಗಂಟೆಗೆ ಯುವವಾಹಿನಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ಅವರು ಯೋಗ ತರಬೇತಿ ನೀಡಲು ಆಗಮಿಸಿದ ಯೋಗಗುರು ಶೈಲಜಾ ನವೀನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶೈಲಜಾ ನವೀನ್ ಅವರು, ಯೋಗವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೇ ಪ್ರತಿದಿನದ ಜೀವನದ ಅವಿಭಾಜ್ಯ […]
Read More
18-06-2026, 9:00 PM
ಶಕ್ತಿನಗರ : ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದರೆ ಹೆತ್ತ ತಾಯಿ ಮತ್ತು ಹುಟ್ಟಿದ ನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು. ಇಂತಹ ಪವಿತ್ರವಾದ ಮಾತ್ರಭೂಮಿಯ ಸೇವೆಯನ್ನು ಮಾಡಲು ಸಿದ್ಧರಾದ ಶರತ್ ಶಕ್ತಿನಗರ ಇವರಿಗೆ, ನಿನ್ನೆ ಸಂಜೆ ದಿನಾಂಕ 18/06/2026 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹ ಪ್ರಸಾದವನ್ನು ನೀಡಿ ನಮ್ಮ ಘಟಕದ ವತಿಯಿಂದ ಅಧ್ಯಕ್ಷರ, ಮಾಜಿ ಅಧ್ಯಕ್ಷರುಗಳ ,ಹಾಗೂ ಎಲ್ಲಾ ಸದಸ್ಯರ ಶುಭಾಶೀರ್ವದದೊಂದಿಗೆ ಗೌರವಿಸಿ ಅಭಿನಂದಿಸಲಾಯಿತು. ಅಧ್ಯಕ್ಷರಾದ ತೇಜಸ್ ವಿ […]
Read More
18-06-2026, 8:00 PM
ಮಂಗಳೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಯ ಅಂಚೆ ರವಾನೆ ಪೂರ್ವ ಸಿದ್ಧತಾ ಕಾರ್ಯವು ಇಂದು ಯಶಸ್ವಿಯಾಗಿ ನಡೆಯಿತು. ಚಂದಾದಾರರು ಹಾಗೂ ಹಿತೈಷಿಗಳಿಗೆ ಯುವಸಿಂಚನ ಪತ್ರಿಕೆಯನ್ನು ತಲುಪಿಸುವ ಉದ್ದೇಶದಿಂದ ಸುಮಾರು 4,000 ಪತ್ರಿಕೆಗಳಿಗೆ ವಿಳಾಸ ಅಂಟಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಕಾರ್ಯದಲ್ಲಿ ಯುವವಾಹಿನಿ ಮಂಗಳೂರು ಘಟಕ, ಯುವವಾಹಿನಿ ಮಂಗಳೂರು ಮಹಿಳಾ ಘಟಕ ಹಾಗೂ ಯುವಸಿಂಚನ ಸಂಪಾದಕೀಯ ಮಂಡಳಿಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸಹಕಾರ ನೀಡಿದರು.
Read More
18-06-2026, 6:00 PM
ಶಂಭೂರಿನ ದಕ್ಷಿಣ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ದಿನಾಂಕ 18-06-2026ರಂದು ಸಂಜೆ 6.00 ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೆ “ಸಾಯಿ ಭಕ್ತಿ ಸುಧೆ” ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು. ಕಾರ್ಯಕ್ರಮದ ಆರಂಭದಲ್ಲಿ ಮಂದಿರದ ಅರ್ಚಕರಾದ ಶ್ರೀ ಕೇಶವ ಶಾಂತಿ ಹಾಗೂಆಡಳಿತ ಮುಖ್ಯಸ್ಥರು ಸುರಜ್ ಸಾಯಿಅವರ ಮಾರ್ಗದರ್ಶನ ಹಾಗೂ ಸಮ್ಮುಖದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಭಜನಾ ತಂಡದ ಸದಸ್ಯರು ಮಂದಿರದ ಪರಿಸರದಲ್ಲಿ ಎರಡು ಸಂಪಿಗೆ ಗಿಡಗಳನ್ನು ನೆಡುವುದರ […]
Read More
18-06-2026, 3:22 PM
ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಯುವ ವೃಕ್ಷೋತ್ಸವ – 2026ರ ನಾಲ್ಕನೇ ಹಂತದ ಅಂಗವಾಗಿ ಕೆದಿಲ ಗ್ರಾಮ ಪಂಚಾಯಿತಿಯ ರುದ್ರಭೂಮಿಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. “ಇಂದು ನೆಡುವ ಗಿಡ ನಾಳೆಯ ಪೀಳಿಗೆಗೆ ನೀಡುವ ಅಮೂಲ್ಯ ಉಡುಗೊರೆ” ಎಂಬ ಸಂದೇಶದೊಂದಿಗೆ ನಡೆದ ಕಾರ್ಯಕ್ರಮದಲ್ಲಿ, “ಅಂತಿಮ ಯಾತ್ರೆಯ ತಾಣವಾಗಿರುವ ರುದ್ರಭೂಮಿಯೂ ಹಸಿರಿನಿಂದ ಕಂಗೊಳಿಸಿದಾಗ, ಅದು ಜೀವನದ ನಿರಂತರತೆಯ ಸಂಕೇತವಾಗುತ್ತದೆ” ಎಂಬ ಪರಿಸರ ಕಾಳಜಿಯ ಸಂದೇಶವನ್ನು ಸಾರಲಾಯಿತು. ಈ ಸಂದರ್ಭದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು […]
Read More
17-06-2026, 11:00 AM
ವಿಟ್ಲ :“ದೇಶ ಸೇವೆಯೇ ಈಶ ಸೇವೆ” ಎಂಬ ಉದಾತ್ತ ಧ್ಯೇಯದೊಂದಿಗೆ ಭಾರತೀಯ ಭೂಸೇನೆಗೆ ಆಯ್ಕೆಯಾದ ವಿಟ್ಲ ಪರಿಸರದ ಆರು ಮಂದಿ ಸಾಧಕ ಯುವಕರಿಗೆ ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ದಿನಾಂಕ 17-06-2026ರಂದು ಬಿಲ್ಲವ ಸಂಘದ ವಿಟ್ಲ ದೇಯಿ ಬೈದಿತಿ ಸಭಾಭವನದಲ್ಲಿ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಯುವವಾಹಿನಿ ವಿಟ್ಲ ಘಟಕದ ಅಧ್ಯಕ್ಷ ಕೆ.ಟಿ. ಆನಂದ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಜಯಪ್ರಕಾಶ್ ಪಾಣೆಮಜಲು, ನಿವೃತ್ತ ಕ್ಯಾಪ್ಟನ್ ಹಾಗೂ ಅಗ್ನಿವೀರ […]
Read More
16-06-2026, 7:30 PM
ಮಂಗಳೂರು : ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವು ಜೂನ್ 16ರಂದು ನಡೆಯಿತು. ಕಾರ್ಯಕ್ರಮವು ಗುರು ಪೂಜೆಯೊಂದಿಗೆ ಆರಂಭಗೊಂಡು, ಗುರು ಸ್ತುತಿಯ ಬಳಿಕ ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಧ್ಯಕ್ಷರು ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅರೋಲಿನ್ ಡಿ’ಸೋಜ ಅವರು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವ ಹಾಗೂ […]
Read More
15-06-2026, 8:00 PM
ಮಂಗಳೂರು: ದಿನಾಂಕ: 15-06-2026 ರಂದು ಸೋಮವಾರ ಸಂಜೆ 5.30 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ಯುವವಾಹಿನಿ (ರಿ.) ಕೂಳೂರು ಘಟಕ ಇವರ ಸಹಯೋಗದೊಂದಿಗೆ ನಡೆಯಿತು. ಕೂಳೂರು ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರ ತಂಡವು ಭಕ್ತಿ ಭಾವದಿಂದ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳಿಗೆ ಸಮರ್ಪಿಸಿದರು. ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ […]
Read More