
16-09-2026, 8:00 PM
ಮಂಗಳೂರು, ಸೆ. 16: ಯುವಕರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ, ಅವರೊಳಗಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಲು ಯುವವಾಹಿನಿ ಸಂಸ್ಥೆಯು ಉತ್ತಮ ವೇದಿಕೆಯನ್ನು ನಿರ್ಮಿಸುತ್ತಿದೆ ಎಂದು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ವ್ಯವಸ್ಥಾಪಕ ಹಾಗೂ ಮುಖ್ಯ ತರಬೇತುದಾರ, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಹೇಳಿದರು. ಯುವವಾಹಿನಿ (ರಿ.) ಮಂಗಳೂರು ಘಟಕದ ಸಾಪ್ತಾಹಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದ ಅವರು, ಇಂದಿನ ಯುವಕರಿಗೆ ತಮ್ಮ […]
Read More

15-09-2026, 8:00 PM
ಎಡಪದವು, ಸೆ. 15: ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಎಡಪದವು ಇದರ ಆಶ್ರಯದಲ್ಲಿ ನಡೆಯುತ್ತಿರುವ 17ನೇ ವರ್ಷದ ಎಡಪದವು ಗಣೇಶೋತ್ಸವದ ಅಂಗವಾಗಿ ಯುವವಾಹಿನಿ (ರಿ.) ಕುಪ್ಪೆಪದವು–ಎಡಪದವು ಘಟಕದ ವತಿಯಿಂದ ಸೆ. 15ರಂದು ಒಂದು ದಿನದ ಸ್ವಯಂಸೇವಾ ಕಾರ್ಯ ನಡೆಸಲಾಯಿತು. ಮಧ್ಯಾಹ್ನ 1 ಗಂಟೆಯಿಂದ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಗಣೇಶೋತ್ಸವದ ವಿವಿಧ ಸೇವಾ ಕಾರ್ಯಗಳಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸೇವಾ ಮನೋಭಾವದಿಂದ ಕೈಜೋಡಿಸುವ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ […]
Read More

15-09-2026, 8:00 PM
ಮಾಣಿ, ಸೆ. 15: ಸಂಘಟನೆಯ ಮೂಲಕ ಸಮಾಜದ ಎಲ್ಲ ವರ್ಗಗಳನ್ನೂ ಉನ್ನತಿಯತ್ತ ಕೊಂಡೊಯ್ಯುವ ಪ್ರಯತ್ನ ನಡೆಯಬೇಕು. ಸಮಾಜದ ಪ್ರತಿಯೊಬ್ಬರೂ ಸಮಾನತೆ ಹಾಗೂ ಗೌರವದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಹೇಳಿದರು. ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 15ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರುಗಳ ತತ್ತ್ವ ಹಾಗೂ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವುದರೊಂದಿಗೆ […]
Read More

15-09-2026, 4:01 PM
ಪ್ರಧಾನ ಕಾರ್ಯದರ್ಶಿಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು
Read More

15-09-2026, 3:56 PM
ಯುವವಾಹಿನಿ ಸಂಸ್ಥೆಯು ಯುವ ಪ್ರತಿಭೆಗಳನ್ನು ಗುರುತಿಸಿ, ಅವರಲ್ಲಿರುವ ಸೃಜನಶೀಲತೆ, ಕಥನ, ಅಭಿನಯ ಹಾಗೂ ತಾಂತ್ರಿಕ ಕೌಶಲ್ಯಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ “ಯುವ ಸಿನಿ ದನಿ” ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯ ನಿಯಮಾವಳಿ ಕಿರುಚಿತ್ರದಲ್ಲಿ ಯಾವುದೇ ಜಾತಿ/ಧರ್ಮ ನಿಂದನೆ, ವೈಯಕ್ತಿಕ ನಿಂದನೆ ಅಥವಾ ಅವಹೇಳನ, ರಾಜಕೀಯ ಹಾಗೂ ಅಸಭ್ಯ/ಅಶ್ಲೀಲ ವಿಷಯಗಳಿಗೆ ಅವಕಾಶವಿರುವುದಿಲ್ಲ. ಶ್ರೇಷ್ಠ ಕಿರುಚಿತ್ರ ಪ್ರಶಸ್ತಿಗಳು ಶ್ರೇಷ್ಠ ಕಿರುಚಿತ್ರ – ಪ್ರಥಮಶ್ರೇಷ್ಠ ಕಿರುಚಿತ್ರ – ದ್ವಿತೀಯಶ್ರೇಷ್ಠ ಕಿರುಚಿತ್ರ – ತೃತೀಯ ಅಗ್ರ ಮೂರು ತಂಡಗಳಿಗೆ ವಿಶೇಷ ನಗದು ಬಹುಮಾನ […]
Read More

14-09-2026, 10:00 PM
ಪಲಿಮಾರು, ಸೆ. 14: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪಲಿಮಾರು ವತಿಯಿಂದ ಆಯೋಜಿಸಲಾದ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಸೆ. 14ರಂದು ರಾತ್ರಿ 8 ಗಂಟೆಗೆ ‘ತುಳುನಾಡ ನೃತ್ಯ ವೈಭವ’ ಎಂಬ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಲಾಸಂಭ್ರಮ ಸೂರಿಂಜೆ ತಂಡದ ಕಲಾವಿದರಿಂದ ನಡೆದ ನೃತ್ಯ ಪ್ರದರ್ಶನದಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆ, ಜನಪದ ಕಲೆ ಹಾಗೂ ವೈವಿಧ್ಯಮಯ ನೃತ್ಯರೂಪಗಳು ಅನಾವರಣಗೊಂಡವು. ಪ್ರೇಕ್ಷಕರ ಗಮನ […]
Read More

14-09-2026, 8:00 PM
ಮಂಗಳೂರು ಸೆ 14: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 14-09-2026 ರಂದು ಸಂಜೆ ನಡೆಯಿತು. ಈ ವಾರದ ಭಜನಾ ಸೇವೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬೊಕ್ಕಪಟ್ಣ ಬೊಳೂರು ಮಂಗಳೂರು ಇವರ ಸಹಯೋಗದಲ್ಲಿ ನೆರವೇರಿತು. ದೇವರ ನಾಮ ಸ್ಮರಣೆಯಿಂದ ಭಕ್ತರ ಮನದಲ್ಲಿ ಆಧ್ಯಾತ್ಮಿಕ ವಾತಾವರಣ ತುಂಬುವ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ […]
Read More

14-09-2026, 8:00 PM
ಮಾಣಿ, ಸೆ. 14: ಗತಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಕಣ್ಣಾರೆ ಕಂಡು, ಅವುಗಳ ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ‘ಚೌತಿ ಚಿತ್ತಾರ’ ಕಾರ್ಯಕ್ರಮವು ಲೋಕೇಶ್ ಬಂಗೇರ ಪಳ್ಳತ್ತಿರ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕೇಶ್ ಬಂಗೇರ ಅವರು, ಹಿಂದಿನ ಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸುವ ಯುವವಾಹಿನಿಯ ಪ್ರಯತ್ನ ಶ್ಲಾಘನೀಯ. ಇಂತಹ ವಿನೂತನ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದರೊಂದಿಗೆ […]
Read More

14-09-2026, 7:00 PM
ಬಜಪೆ ಸೆ 14 : ವಿಜಯ ವಿಠ್ಠಲ ಭಜನಾ ಮಂದಿರ, ಬಜಪೆಯಲ್ಲಿ ಸೆಪ್ಟೆಂಬರ್ 14ರಿಂದ 16ರವರೆಗೆ 58ನೇ ಸಾರ್ವಜನಿಕ ಗಣೇಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಗಣೇಶ ಚತುರ್ಥಿಯ ದಿನವಾದ ಸೆಪ್ಟೆಂಬರ್ 14ರಂದು ಮಂದಿರದಲ್ಲಿ ಕಣಿಶೋತ್ಸವ, ಶ್ರೀ ವಿಜಯ ಗಣಪತಿ ಪ್ರತಿಷ್ಠೆ, ಗಣಹೋಮ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನದ ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ, ಸಂಗೀತ ಕಾರ್ಯಕ್ರಮ, ಯಕ್ಷಗಾನ ಹಾಗೂ ಭಜನಾ ಸಂಕೀರ್ತನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು. […]
Read More

14-09-2026, 6:00 PM
ಅಡ್ವೆ, ಸೆ. 14: ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಗಣೇಶ ಚತುರ್ಥಿಯ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿ ಕ್ರೀಡಾಕೂಟವನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಅಡ್ವೆ ಆವರಣದಲ್ಲಿ ಆಯೋಜಿಸಲಾಯಿತು. ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡ ಕ್ರೀಡಾಕೂಟದಲ್ಲಿ ಯುವವಾಹಿನಿ ಸದಸ್ಯರು ಹಾಗೂ ಗ್ರಾಮಸ್ಥರಿಗಾಗಿ ಮಕ್ಕಳ ವಿಭಾಗ, ಮಹಿಳಾ ವಿಭಾಗ ಮತ್ತು ಪುರುಷರ ವಿಭಾಗಗಳಲ್ಲಿ ವಿವಿಧ ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರು, […]
Read More