ಪಲಿಮಾರು, ಸೆ. 14: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪಲಿಮಾರು ವತಿಯಿಂದ ಆಯೋಜಿಸಲಾದ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಸೆ. 14ರಂದು ರಾತ್ರಿ 8 ಗಂಟೆಗೆ ‘ತುಳುನಾಡ ನೃತ್ಯ ವೈಭವ’ ಎಂಬ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಲಾಸಂಭ್ರಮ ಸೂರಿಂಜೆ ತಂಡದ ಕಲಾವಿದರಿಂದ ನಡೆದ ನೃತ್ಯ ಪ್ರದರ್ಶನದಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆ, ಜನಪದ ಕಲೆ ಹಾಗೂ ವೈವಿಧ್ಯಮಯ ನೃತ್ಯರೂಪಗಳು ಅನಾವರಣಗೊಂಡವು. ಪ್ರೇಕ್ಷಕರ ಗಮನ ಸೆಳೆದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.







