ಬಜಪೆ ಸೆ 14 : ವಿಜಯ ವಿಠ್ಠಲ ಭಜನಾ ಮಂದಿರ, ಬಜಪೆಯಲ್ಲಿ ಸೆಪ್ಟೆಂಬರ್ 14ರಿಂದ 16ರವರೆಗೆ 58ನೇ ಸಾರ್ವಜನಿಕ ಗಣೇಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಗಣೇಶ ಚತುರ್ಥಿಯ ದಿನವಾದ ಸೆಪ್ಟೆಂಬರ್ 14ರಂದು ಮಂದಿರದಲ್ಲಿ ಕಣಿಶೋತ್ಸವ, ಶ್ರೀ ವಿಜಯ ಗಣಪತಿ ಪ್ರತಿಷ್ಠೆ, ಗಣಹೋಮ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನದ ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ, ಸಂಗೀತ ಕಾರ್ಯಕ್ರಮ, ಯಕ್ಷಗಾನ ಹಾಗೂ ಭಜನಾ ಸಂಕೀರ್ತನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು.
ಉತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಫಲಾಹಾರ ಹಾಗೂ ಅನ್ನಪ್ರಸಾದ ವಿತರಣೆಯ ಸ್ವಯಂಸೇವಾ ಜವಾಬ್ದಾರಿಯನ್ನು ಯುವವಾಹಿನಿ (ರಿ.) ಬಜಪೆ ಘಟಕದ ಸದಸ್ಯರು ವಹಿಸಿಕೊಂಡರು. ಸದಸ್ಯರು ಉತ್ಸಾಹದಿಂದ ಸೇವೆಯಲ್ಲಿ ತೊಡಗಿಸಿಕೊಂಡು ಪ್ರಸಾದ ವಿತರಣಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು.
ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಮನೋಭಾವದೊಂದಿಗೆ ನಡೆದ ಈ ಸ್ವಯಂಸೇವಾ ಕಾರ್ಯದ ಮೂಲಕ ಯುವವಾಹಿನಿ ಬಜಪೆ ಘಟಕವು ಭಕ್ತಾದಿಗಳಿಗೆ ಸೇವೆ ಸಲ್ಲಿಸಿ, ಶ್ರೀ ದೇವರ ಕೃಪೆಗೆ ಪಾತ್ರವಾಯಿತು.







