
- ಈ ಸ್ಪರ್ಧೆಯು 9ನೇ ತರಗತಿಯಿಂದ ದ್ವಿತೀಯ ಪಿಯುಸಿ ಒಳಗಿನ ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ.
- ಪ್ರತಿ ಘಟಕದಿಂದ 3 ವಿದ್ಯಾರ್ಥಿಗಳ ಒಂದು ತಂಡ ಭಾಗವಹಿಸಬಹುದು.
- ಪ್ರತೀ ತಂಡದಲ್ಲಿ ಕಡ್ಡಾಯವಾಗಿ ಕನಿಷ್ಠ ಒಬ್ಬ ಪ್ರೌಢ ಶಾಲೆಯ (9/10) ವಿದ್ಯಾರ್ಥಿ ಇರಲೇಬೇಕು.
- ಘಟಕಗಳು ನಾಮನಿರ್ದೇಶಿಸಿದ ತಂಡಗಳಿಗೆ ಮಾತ್ರ ಅವಕಾಶ.
- ಸ್ಪರ್ಧೆಯು 2 ಸುತ್ತುಗಳಲ್ಲಿ ನಡೆಯಲಿದೆ.
- ಮೊದಲ ಸುತ್ತಿನಲ್ಲಿ ಆಯ್ಕೆಯಾದ ಸೀಮಿತ ಸಂಖ್ಯೆಯ ತಂಡಗಳು ಮುಖ್ಯವೇದಿಕೆಯಲ್ಲಿ ನಡೆಯಲಿರುವ ಅದ್ಧೂರಿ ಅಂತಿಮ ಸುತ್ತಿನಲ್ಲಿ ಭಾಗವಹಿಸುತ್ತಾರೆ.
- ನವೆಂಬರ್ 1, 2026 ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ (IYC) ಹವಾನಿಯಂತ್ರಿತ ಸಭಾಂಗಣದಲ್ಲಿ ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಮೊದಲ ಸುತ್ತು ಆರಂಭವಾಗಲಿದೆ. ಆ ಬಳಿಕ ಅಂತಿಮ ಸುತ್ತು ನಡೆಯಲಿದೆ.
- 2 ಸುತ್ತುಗಳೂ ಒಂದೇ ದಿನ ನಡೆಯಲಿದೆ.
- ಭಾಗವಹಿಸುವ ವಿದ್ಯಾರ್ಥಿಗಳು ಶಾಲೆ/ಕಾಲೇಜಿನ ದೃಢೀಕರಣ ಪತ್ರ ಮತ್ತು ಆಧಾರ್ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು.
- ವಿಶುಕುಮಾರ್ ಜೀವನ, ನಾರಾಯಣ ಗುರುಗಳ ಬದುಕು ಮತ್ತು ಸಂದೇಶ ಹಾಗೂ ಸಾಮಾನ್ಯ ಜ್ಞಾನಗಳನ್ನು ಒಳಗೊಂಡಂತಹ ಪ್ರಶ್ನೆಗಳು ಸ್ಪರ್ಧೆಯಲ್ಲಿ ಇರಲಿವೆ.
- ವಿದ್ಯಾರ್ಥಿಗಳ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 11 ಅಕ್ಟೋಬರ್ 2026.
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶ್ರೇಯಸ್ ಕೋಟ್ಯಾನ್ – 87620 80026
ಪ್ರಧಾನ ಕಾರ್ಯದರ್ಶಿ
ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು






