Yuvavahini

ಘಟಕಗಳು

ರಾಜ್ ಕುಮಾರ್ ಬೆಹರೈನ್ ಇವರಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ

ಮುಲ್ಕಿ:- ದಿನಾಂಕ 25 ಡಿಸೆಂಬರ್ 2022 ರಂದು ಮುಲ್ಕಿಯ ವಿಜಯಾ ಕಾಲೇಜಿನ, ಅರ್ಪಣ ತೆರೆದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶದಲ್ಲಿ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಾಲಿನ ಯುವವಾಹಿನಿ ಸಾಧನಾಶ್ರೀ ಪ್ರಶಸ್ತಿಯನ್ನು 2022ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಜ್ ಕುಮಾರ್ ಬೆಹರೈನ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಇಂಧನ , ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ […]

Read More

ಡಾ.ಸದಾನಂದ ಪೂಜಾರಿ ಇವರಿಗೆ ಯುವವಾಹಿನಿ ವಿಶೇಷ ಪುರಸ್ಕಾರ ಪ್ರದಾನ

ಮುಲ್ಕಿ:- ದಿನಾಂಕ 25 ಡಿಸೆಂಬರ್ 2022 ರಂದು ಮುಲ್ಕಿಯ ವಿಜಯಾ ಕಾಲೇಜಿನ, ಅರ್ಪಣ ತೆರೆದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶದಲ್ಲಿ ಯುವವಾಹಿನಿ ವಿಶೇಷ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಾಲಿನ ಯುವವಾಹಿನಿ ವಿಶೇಷ ಪುರಸ್ಕಾರವನ್ನು ಭಾರತೀಯ ವೈದ್ಯಕೀಯ ಸಂಘದ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಪುರಸ್ಕೃತರಾದ ಡಾ.ಸದಾನಂದ ಪೂಜಾರಿ ಇವರಿಗೆ ವಿಶೇಷ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಇಂಧನ , ಕನ್ನಡ ಮತ್ತು ಸಂಸ್ಕೃತಿ […]

Read More

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022 ಡಿಸೆಂಬರ್ 25 ರಂದು ಭಾನುವಾರದಂದು ಅರ್ಪಣ ತೆರೆದ ಸಭಾಂಗಣ ವಿಜಯಾ ಕಾಲೇಜು ಮುಲ್ಕಿನಲ್ಲಿ ಸಂಪನ್ನಗೊಂಡಿತು. ಯುವಸಮುದಾಯದ ಪ್ರೇರಕ ಶಕ್ತಿಯಾಗಿರುವ ಯುವವಾಹಿನಿಗೆ ಅರ್ಹವಾಗಿಯೇ ಪ್ರಶಸ್ತಿ ಲಭಿಸಿದೆ : ವಿ.ಸುನೀಲ್ ಕುಮಾರ್ ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಉದ್ಯೋಗ […]

Read More

ಅಧ್ಯಕ್ಷರಾಗಿ ರಾಜೇಶ್ ಬಿ.ಸಿ.ರೋಡ್ ಆಯ್ಕೆ

ಮಂಗಳೂರು :- ರಾಜ್ಯಾದ್ಯಂತ 33 ಘಟಕಗಳು ಹಾಗೂ ಮೂರು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ 2022-23ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ. ಅವರು ಡಿ.25 ರಂದು ಮುಲ್ಕಿ ಯಲ್ಲಿ ನಡೆದ ಯುವವಾಹಿನಿಯ 35 ನೇ ವಾರ್ಷಿಕ ಸಮಾವೇಶದಲ್ಲಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಹರೀಶ್ ಕೆ. ಪೂಜಾರಿ ಮಂಗಳೂರು, ಲೋಕೇಶ್ ಕೋಟ್ಯಾನ್ ಕೂಳೂರು , ಪ್ರಧಾನ ಕಾರ್ಯದರ್ಶಿಯಾಗಿ ಕುಸುಮಾಕರ ಕುಂಪಲ , ಕೋಶಾಧಿಕಾರಿಯಾಗಿ ಎಂ […]

Read More

ನೇತ್ರ ತಪಾಸಣಾ ಉಚಿತ ಶಿಬಿರ

ಮಂಗಳೂರು:- ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್‌ ಲಿಮಿಟೆಡ್ (ಎಂಸಿಎಫ್), ಪಣಂಬೂರು ಸಾರಥ್ಯದಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ದೇರಳಕಟ್ಟೆ, ಧೂಮಾವತಿ ಫ್ರೆಂಡ್ಸ್ ಸರ್ಕಲ್ ಕೃಷ್ಣಾಪುರ ಮತ್ತು ಯುವವಾಹಿನಿ ಸುರತ್ಕಲ್ ಘಟಕದ ಸಹಯೋಗದಲ್ಲಿ ದಿನಾಂಕ 18 ಡಿಸೆಂಬರ್ ಭಾನುವಾರದಂದು ನೇತ್ರ ತಪಾಸಣಾ ಉಚಿತ ಶಿಬಿರ ನಡೆಯಿತು. ಎಂಸಿಎಫ್‌ನ ಸಿಎಂ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಸಾರಾಳ ಧೂಮಾವತಿ ದೈವಸ್ಥಾನ ಅಧ್ಯಕ್ಷ ಹರೀಶ್ ಸುವರ್ಣ ಶಿಬಿರವನ್ನು ಉದ್ಘಾಟಿಸಿದರು. ಧೂಮಾವತಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅರುಣ್ ಅಂಚನ್, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ […]

Read More

ಸಹಾಯಾರ್ಥ ನಾಟಕ ಪ್ರದರ್ಶನ

ಉಡುಪಿ:- ಯುವವಾಹಿನಿ ಉಡುಪಿ ಘಟಕದಿಂದ ತಲೆಗೊಂದು ಸೂರು ಯೋಜನೆಯ ಬಡ ಕುಟುಂಬದ ಮನೆ ಕಟ್ಟಿ ಕೊಡುವ ಸಹಾಯಾರ್ಥ ದಿನಾಂಕ 17 ಡಿಸೆಂಬರ್ 2022 ಶನಿವಾರದಂದು ಅಜ್ಜರಕಾಡು ಬಯಲು ರಂಗ ಮಂದಿರದಲ್ಲಿ ಅಭಿನಯ ಕಲಾವಿದರು ಉಡುಪಿ ತಂಡದ “ಶಾಂಭವಿ” ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ರಾಜಕುಮಾರ್ ಅಂಬಲಪಾಡಿ ಇವರನ್ನು ಗೌರವಿಸಲಾಯಿತು, ಅತಿಥಿಗಳಾಗಿ ಆಗಮಿಸಿದಂತ ಕೃಷ್ಣ ಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಪೊಲೀಸ್ ಅಧಿಕಾರಿಗಳಾದ ರಾಮಚಂದ್ರ ಬೈಂದೂರು , ಅಭಿನಯ ತಂಡದ ಅಧ್ಯಕ್ಷರಾದ […]

Read More

ಸ್ವಚ್ಚತಾ ಕಾರ್ಯಕ್ರಮ

ಪಣಂಬೂರು ಕುಳಾಯಿ :- ಯುವವಾಹಿನಿ (ರಿ.) ಪಣಂಬೂರು – ಕುಳಾಯಿ ಘಟಕ ಹಾಗು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಇವರ ಜಂಟಿ ಆಶ್ರಯದಲ್ಲಿ ಎಂ ಆರ್ ಪಿ ಎಲ್ ಪ್ರಾಯೋಜಕತ್ವದಲ್ಲಿ ಕುಳಾಯಿ ಪರಿಸರದಲ್ಲಿ, ಇತ್ತೀಚಿಗೆ ನಮ್ಮನ್ನಗಲಿದ ಘಟಕದ ಗೌರವ ಸದಸ್ಯರಾದ ದಿl ಮಹಾಬಲ ಟಿ. ಸಾಲ್ಯಾನ್ ರವರ ಸ್ಮರಣಾರ್ಥವಾಗಿ ದಿನಾಂಕ 04 ಡಿಸೆಂಬರ್ 2022 ರಂದುಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದ ಸಮಾಜ ಸೇವಾ ನಿರ್ದೇಶಕರಾದ ಸುಧೀರ್ ರವರ ನಾಯಕತ್ವದಲ್ಲಿ, ಆರಂಭವಾದ ಸ್ವಚ್ಛತಾ ಕಾರ್ಯದಲ್ಲಿ ಅಧ್ಯಕ್ಷರಾದ ರಂಜನ್ ಕೆ.ಕೋಟ್ಯಾನ್, […]

Read More

ರಾಜಧಾನಿಯಲ್ಲಿ ಮೇಳೈಸಿದ ಯುವ ವೈಭವ

ಬೆಂಗಳೂರು :- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇದರ ಸಹಯೋಗದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ನೇತೃತ್ವದಲ್ಲಿ “ಯುವ ವೈಭವ-2022” ಎಂಬ ಸಾಂಸ್ಕೃತಿಕ ಹಬ್ಬವು ದಿನಾಂಕ 04 ಡಿಸೆಂಬರ್ 2022ರಂದು ಡಾ| ರಾಜಕುಮಾರ್ ಒಳಾಂಗಣ ಕ್ರೀಡಾಂಗಣ, ಮಹಾಲಕ್ಷ್ಮಿ ಲೇಔಟ್ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಬೆಂಗಳೂರು ಘಟಕದ ಅಧ್ಯಕ್ಷರಾದ ಶ್ರೀಧರ ಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕಿಶನ್ […]

Read More

ವಿದ್ಯಾನಿಧಿಯ ಸದ್ಬಳಕೆಯೊಂದಿಗೆ ಸಮಾಜದ ಸತ್ಪ್ರಜೆಗಳಾಗಿ :- ಉದಯ ಅಮೀನ್ ಮಟ್ಟು ಆಶಯ

ಕೂಳೂರು :- ಸಮಾಜದಲ್ಲಿರುವ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಯುವವಾಹಿನಿ (ರಿ.) ಕೂಳೂರು ಘಟಕ ಕಳೆದ 7 ವರುಷಗಳಿಂದ ವಿದ್ಯಾನಿಧಿ ನೀಡುತ್ತಾ ಬಂದಿದೆ . ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉನ್ನತ ಅಂಕ ಗಳಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಕೂಳೂರಿನ ಪಂಪ್ ಹೌಸ್ ಬಳಿ ದಿನಾಂಕ 03 ಡಿಸೆಂಬರ್ 2022ರ ಶನಿವಾರದಂದು ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ನಡೆದ ವಿದ್ಯಾನಿಧಿ […]

Read More

ತುಳುನಾಡಿನ ಜಾನಪದ ಹಾಗೂ ಸಂಸ್ಕ್ರತಿಯ ಉಳಿವಿಗೆ ಯುವವಾಹಿನಿಯ ಕೊಡುಗೆ ಅನನ್ಯ :- ಕೆ. ಎಲ್ ಕುಂಡಂತಾಯ

ಉಡುಪಿ :- ತುಳುನಾಡು ಭಾವನಾತ್ಮಕ ಕುಟುಂಬ ಪದ್ಧತಿಯನ್ನು ಹೊಂದಿದ್ದು ಇಲ್ಲಿನ ಆಚಾರ ವಿಚಾರಗಳು, ಸಂಸ್ಕೃತಿಯ ಉಳಿವಿಗೆ ಇದರ ಪಾತ್ರ ಮಹತ್ವದ್ದಾಗಿದೆ. ಜಾನಪದ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕೆ ಇಂದು ನನಗೆ ಸಾರ್ಥಕ್ಯದ ಕ್ಷಣವಾಗಿದೆ, ಅದೇ ರೀತಿ ತುಳುನಾಡಿನ ಜಾನಪದ ಹಾಗೂ ಸಂಸ್ಕ್ರತಿಯ ಉಳಿವಿಗೆ ಯುವವಾಹಿನಿಯ ಕೊಡುಗೆ ಅನನ್ಯ ಎಂದು ಜಾನಪದ ವಿದ್ವಾಂಸರೂ, ಸಂಶೋಧಕರಾದ ಕೆ.ಎಲ್. ಕುಂಡಂತಾಯ ಇವರು ನುಡಿದರು. ಅವರು ಯುವವಾಹಿನಿ ಉಡುಪಿ ಘಟಕದ ವತಿಯಿಂದ ದಿನಾಂಕ 20 ನವೆಂಬರ್ 2022ರ ರವಿವಾರದಂದು ಉಡುಪಿಯ ಚಿಟ್ಪಾಡಿಯ ಲಕ್ಷ್ಮೀ ಸಭಾ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026 ಎಪ್ರಿಲ್ 19
ಸ್ಥಳ : ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ

ದಿನಾಂಕ : 2026 ಎಪ್ರಿಲ್ 19
ಸ್ಥಳ : ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಡೆನ್ನಾನ ಡೆನ್ನನ 2026

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!