ಕೊಲ್ಯ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ಆಯೋಜಿಸಲಾದ ಬಿಲ್ಲವಾಸ್ ವುಮೆನ್ಸ್ ಪ್ರೀಮಿಯರ್ ಲೀಗ್ – 2026 ಕ್ರಿಕೆಟ್ ಪಂದ್ಯಾಟದಲ್ಲಿ ಯುವವಾಹಿನಿ (ರಿ.) ಕೊಲ್ಯ ಘಟಕದ ತಂಡವು ಭಾಗವಹಿಸಿ, ಅತ್ಯುತ್ತಮ ಪ್ರದರ್ಶನ ನೀಡಿತು.

ಪಂದ್ಯಾಟದ ಅವಧಿಯಲ್ಲಿ ಕೊಲ್ಯ ಘಟಕದ ಮಹಿಳಾ ಆಟಗಾರ್ತಿಯರು ತಮ್ಮ ಆಟದ ಮೂಲಕ ಕೌಶಲ್ಯ, ಆತ್ಮವಿಶ್ವಾಸ ಮತ್ತು ತಂಡಾತ್ಮಕ ಮನೋಭಾವವನ್ನು ಪ್ರದರ್ಶಿಸಿ, ಪ್ರೇಕ್ಷಕರ ಹಾಗೂ ಸಂಘಟಕರ ಮೆಚ್ಚುಗೆಗೆ ಪಾತ್ರರಾದರು.


