
10-11-2026, 9:34 AM
ಬಜಪೆ ನ 01 : ಕ್ರೀಡಾಸ್ಫೂರ್ತಿ, ಸಂಘಟನಾ ಶಕ್ತಿ ಹಾಗೂ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಯುವವಾಹಿನಿ (ರಿ.) ಬಜಪೆ ಘಟಕದ ಮಹಿಳಾ ಸದಸ್ಯರು ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದು ಘಟಕಕ್ಕೆ ಹೆಮ್ಮೆ ತಂದಿದ್ದಾರೆ. ನವೆಂಬರ್ 1, 2026ರಂದು ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ಕಿನ್ನಿಪದವು, ಬಜಪೆ ಇಲ್ಲಿ ಗುರುಕುಲ ಬಾಲ ಸಂಸ್ಕಾರ ಕೇಂದ್ರ ಕಿನ್ನಿಪದವು ಇದರ ಚತುರ್ಥ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಲಾಗಿದೆ. ಶ್ರೀ ಶನಿಮಹಾತ್ಮೆ ತಾಳಮದ್ದಳೆ ಹಾಗೂ […]
Read More

08-11-2026, 7:00 PM
ಕಡಬ ನ. 08 : ದೀಪಾವಳಿ ಎಂದರೆ ಕೇವಲ ಹಣತೆ ಬೆಳಗಿಸಿ ಪಟಾಕಿ ಸಿಡಿಸುವ ಹಬ್ಬವಲ್ಲ; ಮತ್ತೊಬ್ಬರ ಬದುಕಿನಲ್ಲಿ ಪ್ರೀತಿ, ವಿಶ್ವಾಸ ಹಾಗೂ ಸಂತೋಷದ ಬೆಳಕು ಮೂಡಿಸುವ ಮಾನವೀಯತೆಯ ಹಬ್ಬ ಎಂಬುದನ್ನು ಯುವವಾಹಿನಿ (ರಿ.) ಕಡಬ ಘಟಕವು ವಿಶಿಷ್ಟವಾಗಿ ಸಾರಿತು. ದೀಪಾವಳಿ ಪ್ರಯುಕ್ತ ಕಡಬದ ಉಮ್ಮಕ್ಕ ಯಾನೆ ದೋಳದ ಅಪ್ಪೆ ಅವರ ಮನೆಯಲ್ಲಿ ನವೆಂಬರ್ 8ರಂದು ‘ಕರುಣೆಯ ಬೆಳಕು’ ಎಂಬ ಶೀರ್ಷಿಕೆಯಡಿ ಅರ್ಥಪೂರ್ಣ ದೀಪಾವಳಿ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು. ದೋಳದ ಅಪ್ಪೆ ಅವರು ಹಣತೆ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ […]
Read More

25-10-2026, 11:00 PM
ಕಡಬ, ಅ. 25: ಯುವವಾಹಿನಿ (ರಿ.) ಕಡಬ ಘಟಕದ 2026–27ನೇ ಸಾಲಿನವಾರ್ಷಿಕ ಮಹಾಸಭೆಯು ಕಡಬದ ಜಯದುರ್ಗಾ ವಿಲಾಸ ಸಭಾಭವನದಲ್ಲಿ ಘಟಕದ ಅಧ್ಯಕ್ಷ ಉಮೇಶ್ ಬಳ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತುಈ ಸಭೆಯಲ್ಲಿ ಯುವವಾಹಿನಿ ಕಡಬ ಘಟಕದ 2026-27 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಿಸಲಾಯಿತು ಅಧ್ಯಕ್ಷರು : ಸರಿತಾ ಉಂಡಿಲಪ್ರಥಮ ಉಪಾಧ್ಯಕ್ಷರು : ಜಯಪ್ರಕಾಶ್ ದೋಳದ್ವಿತೀಯ ಉಪಾಧ್ಯಕ್ಷರು : ಸತೀಶ್ ಬಳ್ಪಕಾರ್ಯದರ್ಶಿ : ಧನಂಜಯ ಮರ್ದಾಳಜೊತೆ ಕಾರ್ಯದರ್ಶಿ : ತುಳಸಿ ಪಡ್ಕಿಲಾಯಕೋಶಾಧಿಕಾರಿ : ಸವಿತಾ ಸುಬ್ರಹ್ಮಣ್ಯ ನಿರ್ದೇಶಕರು […]
Read More

21-10-2026, 8:00 PM
ಮಂಗಳೂರು, ಅ. 21: ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಘಟಕದ ಅಧ್ಯಕ್ಷ ಉಮೇಶ್ ಬಳ್ಪ ಅವರ ನೇತೃತ್ವದಲ್ಲಿ ಘಟಕದ ಸದಸ್ಯರು ಹಾಗೂ ಸಮಾಜದ ಬಂಧುಗಳ ಸಂಪೂರ್ಣ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಸ್ವಯಂಸೇವೆ ಸಲ್ಲಿಸಿ ಅನ್ನದಾನ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹7,000 ಮೊತ್ತದ ದೇಣಿಗೆಯನ್ನು […]
Read More

19-10-2026, 9:00 PM
ಕಡಬ, ಅ. 19: ಯುವವಾಹಿನಿ (ರಿ.) ಕಡಬ ಘಟಕದ ಭಜನಾ ತಂಡದ ವತಿಯಿಂದ ಸೋಮವಾರ ಬಲ್ಯ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಭಜನಾ ಸೇವೆ ಭಕ್ತಿಭಾವದಿಂದ ನೆರವೇರಿತು. ರಾತ್ರಿ 7ರಿಂದ 8 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ಭಕ್ತಿಯಿಂದ ಭಜನೆಗಳನ್ನು ಹಾಡಿ ದೇವರ ಸನ್ನಿಧಿಯಲ್ಲಿ ಭಕ್ತಿಮಯ ವಾತಾವರಣವನ್ನು ನಿರ್ಮಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಎನ್. ಎಸ್. ಕಡಬ, ನಾರಾಯಣ ಗುರು ತತ್ವ ಅನುಷ್ಠಾನ ನಿರ್ದೇಶಕ ಜಯಪ್ರಕಾಶ್ ದೋಳ ಸೇರಿದಂತೆ […]
Read More

18-10-2026, 9:00 PM
ಕಡಬ, ಅ. 18: ಪಾಲ್ತಿಮಾರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಕಡಬ ಘಟಕದ ಭಜನಾ ತಂಡದಿಂದ ಭಾನುವಾರ ರಾತ್ರಿ ಭಜನಾ ಸೇವೆ ಭಕ್ತಿಭಾವದಿಂದ ನೆರವೇರಿತು. ರಾತ್ರಿ 7.30ರಿಂದ 9 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ಸುಮಧುರ ಭಜನೆಗಳನ್ನು ಹಾಡುವ ಮೂಲಕ ಶ್ರೀ ದೇವಿಯ ಸನ್ನಿಧಿಯಲ್ಲಿ ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿದರು. ಭಜನಾ ಸಂಕೀರ್ತನೆಯು ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸಿ ನವರಾತ್ರಿ ಉತ್ಸವದ ಸಂಭ್ರಮಕ್ಕೆ ಮೆರುಗು ನೀಡಿತು. ಈ ಸಂದರ್ಭದಲ್ಲಿ […]
Read More

11-10-2026, 9:00 PM
ಕಡಬ, ಅ. 11: ಕಡಬದ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಕಡಬ ಘಟಕದ ಭಜನಾ ತಂಡದ ವತಿಯಿಂದ ಭಾನುವಾರ ಬೆಳಿಗ್ಗೆ 10.30ರಿಂದ ಭಜನಾ ಸೇವೆ ನಡೆಯಿತು. ಭಜನಾ ತಂಡದ ಸದಸ್ಯರು ಭಕ್ತಿಭಾವದಿಂದ ಭಜನೆಗಳನ್ನು ಹಾಡುವ ಮೂಲಕ ದೇವಿಯ ಸನ್ನಿಧಿಯಲ್ಲಿ ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿದರು. ನವರಾತ್ರಿ ಉತ್ಸವದ ಧಾರ್ಮಿಕ ಸಂಭ್ರಮಕ್ಕೆ ಭಜನಾ ಸೇವೆಯು ವಿಶೇಷ ಮೆರುಗು ನೀಡಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ನಾರಾಯಣ ಗುರು ತತ್ವ ಅನುಷ್ಠಾನ ನಿರ್ದೇಶಕ […]
Read More

02-10-2026, 2:00 PM
ಕಡಬ, ಅ. 2: ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಜಯದುರ್ಗ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶ್ರಮದಾನ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ಉದ್ದೇಶದಿಂದ ಬೆಳಿಗ್ಗೆ 10 ಗಂಟೆಯಿಂದ ನಡೆದ ಸೇವಾ ಕಾರ್ಯದಲ್ಲಿ ಘಟಕದ ಅಧ್ಯಕ್ಷ ಉಮೇಶ್ ಬಳ್ಪ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಅಂಙನ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಎನ್.ಎಸ್., ಮಾಜಿ ಅಧ್ಯಕ್ಷ ಕೃಷ್ಣಪ್ಪ ಅಮೈ, ಉಪಾಧ್ಯಕ್ಷೆ ಸರಿತಾ ಉಂಡಿಲ, […]
Read More

13-09-2026, 2:00 PM
ಕಡಬ, ಸೆ. 13: ಕಡಬ, ಸೆ. 13: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ 172ನೇ ಜನ್ಮದಿನಾಚರಣೆಯ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ.) ಕಡಬ ತಾಲೂಕು ಇದರ ಆಶ್ರಯದಲ್ಲಿ ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವವಾಹಿನಿ (ರಿ.) ಕಡಬ ಘಟಕದ ಸಹಕಾರದೊಂದಿಗೆ ಗುರುಪೂಜೆ, ಭಜನೆ, ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮವು ಸೆ. 13ರಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮವು ಭವ್ಯಮೆರವಣಿಗೆಯೊಂದಿಗೆ ಆರಂಭಗೊಂಡು,ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರು ಇದರ ಪರಮಪೂಜ್ಯ ಶ್ರೀ […]
Read More

28-08-2026, 2:00 PM
ಕಡಬ ಅಗಸ್ಟ್ 28 : ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಪ್ರಯುಕ್ತ ನೆಟ್ಟಣ ಗುರುಮಂದಿರಕ್ಕೆ ಭೇಟಿ ನೀಡಿ ಗುರುಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷರಾದ ಸರಿತಾ ಉಂಡಿಲ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಿರ್ದೇಶಕರಾದ ಶಿವಪ್ರಸಾದ್ ನೂಚಿಲ, ಘಟಕದ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಎನ್.ಎಸ್. ಕಡಬ ಹಾಗೂ ಸದಸ್ಯರಾದ ಸುವರ್ಣ ಉಂಡಿಲ ಉಪಸ್ಥಿತರಿದ್ದರು. ಗುರುಜಯಂತಿಯ ಅಂಗವಾಗಿ ಮಧ್ಯಾಹ್ನದ ಅನ್ನಸಂತರ್ಪಣೆಯ ಸಂದರ್ಭದಲ್ಲಿ ಘಟಕದ […]
Read More