ಕಡಬ, ಅ. 2: ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಜಯದುರ್ಗ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶ್ರಮದಾನ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ಉದ್ದೇಶದಿಂದ ಬೆಳಿಗ್ಗೆ 10 ಗಂಟೆಯಿಂದ ನಡೆದ ಸೇವಾ ಕಾರ್ಯದಲ್ಲಿ ಘಟಕದ ಅಧ್ಯಕ್ಷ ಉಮೇಶ್ ಬಳ್ಪ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಅಂಙನ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಎನ್.ಎಸ್., ಮಾಜಿ ಅಧ್ಯಕ್ಷ ಕೃಷ್ಣಪ್ಪ ಅಮೈ, ಉಪಾಧ್ಯಕ್ಷೆ ಸರಿತಾ ಉಂಡಿಲ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಜಯಪ್ರಕಾಶ್ ದೋಳ ಹಾಗೂ ಘಟಕದ ಸದಸ್ಯರಾದ ಸವಿತಾ ಸುಬ್ರಹ್ಮಣ್ಯ ಮತ್ತು ಪ್ರೇಮ ವಿದ್ಯಾನಗರ ಭಾಗವಹಿಸಿ ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಅರುಣ್ ಅವರು ಶ್ರಮದಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಚಾ-ತಿಂಡಿಯ ವ್ಯವಸ್ಥೆ ಮಾಡಿದರು. ಸೇವಾ ಕಾರ್ಯಕ್ಕೆ ಸಹಕರಿಸಿದ ಹಾಗೂ ಯಂತ್ರೋಪಕರಣ ಒದಗಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
“ಸೇವೆಯೇ ಸಂಘಟನೆಯ ಶಕ್ತಿ – ಒಗ್ಗಟ್ಟೇ ನಮ್ಮ ಬಲ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮವು ಸೇವಾ ಮನೋಭಾವ ಹಾಗೂ ಸಂಘಟನಾ ಒಗ್ಗಟ್ಟಿಗೆ ಸಾಕ್ಷಿಯಾಯಿತು.








