ಕಡಬ ಅಗಸ್ಟ್ 28 : ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಪ್ರಯುಕ್ತ ನೆಟ್ಟಣ ಗುರುಮಂದಿರಕ್ಕೆ ಭೇಟಿ ನೀಡಿ ಗುರುಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷರಾದ ಸರಿತಾ ಉಂಡಿಲ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಿರ್ದೇಶಕರಾದ ಶಿವಪ್ರಸಾದ್ ನೂಚಿಲ, ಘಟಕದ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಎನ್.ಎಸ್. ಕಡಬ ಹಾಗೂ ಸದಸ್ಯರಾದ ಸುವರ್ಣ ಉಂಡಿಲ ಉಪಸ್ಥಿತರಿದ್ದರು.
ಗುರುಜಯಂತಿಯ ಅಂಗವಾಗಿ ಮಧ್ಯಾಹ್ನದ ಅನ್ನಸಂತರ್ಪಣೆಯ ಸಂದರ್ಭದಲ್ಲಿ ಘಟಕದ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನೆಟ್ಟಣ ಗುರುಮಂದಿರದ ಅಧ್ಯಕ್ಷರು, ಕೋಶಾಧಿಕಾರಿ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.







