26-01-2026, 1:00 PM
ಮಾಣಿ : ಕ್ರೀಡೆ ಎಂಬುದು ಕೇವಲ ದೈಹಿಕ ಚಟುವಟಿಕೆಗೆ ಸೀಮಿತವಲ್ಲ; ಅದು ಯುವ ಮನಸ್ಸುಗಳನ್ನು ಒಗ್ಗೂಡಿಸುವ ಬಾಂಧವ್ಯದ ಶಕ್ತಿಯಾಗಿದ್ದು, ಸಂಘಟನಾ ಬಲವರ್ಧನೆಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಹೇಳಿದರು.ಅವರು ಗಣರಾಜ್ಯೋತ್ಸವದ ಅಂಗವಾಗಿ ದಿನಾಂಕ 26/01/2026 ರಂದು ಬಂಟ್ವಾಳ ತಾಲೂಕಿನ ಅನಂತಾಡಿಯ ಚಿತ್ತರಿಗೆ ಗದ್ದೆಯಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಲೀಗ್ ಮಾದರಿಯ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ “ಯುವ ಫ್ಯಾಮಿಲಿ ಚಾಂಪಿಯನ್ಸ್ ಕ್ರಿಕೆಟ್ […]
Read More
04-12-2025, 5:23 PM
ಯುವವಾಹಿನಿ(ರಿ)ಕೇಂದ್ರಸಮಿತಿಯ ಸಹಕಾರದೊಂದಿಗೆ ಯುವವಾಹಿನಿ ಅಶ್ರಯ ಯೋಜನೆಯಡಿಯಲ್ಲಿ ನಿರ್ಮಿಸಿದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಪೆಲತ್ತಡಿ ಕಮಲ ಪೂಜಾರ್ತಿಯವರಿಗೆ ಮನೆಯ ಹಸ್ತಾಂತರ ಕಾರ್ಯಕ್ರಮ ಹಾಗೂ ತುಳಸಿ ಪೂಜಾ ಆಚರಣೆ ದಿನಾಂಕ 12.11.2025 ಬುಧವಾರ . ಸಂಜೆ ಭಜನಾ ಕಾರ್ಯಕ್ರಮದ ಜೊತೆಗೆ ತುಳಸಿ ಪೂಜೆಯ ನಂತರ ಸಭಾ ಕಾರ್ಯಕ್ರಮವನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ಕುದ್ರೋಳಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಯುತ ನವೀನ್ ಚಂದ್ರ ಡಿ ಸುವರ್ಣ ಇವರು ಉದ್ಘಾಟಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕೇಶ್ […]
Read More
21-07-2024, 4:53 PM
ಮಾಣಿ: ಆಟಿ ತಿಂಗಳನ್ನು ಹಿಂದಿನವರು ಹೇಗೆ ಆಚರಿಸುತ್ತಿದ್ದರು, ಆಟಿ ತಿಂಗಳ ವಿವಿಧ ಬಗೆಯ ತಿನಿಸುಗಳು ಆಗಿರಬಹುದು, ಆಟಿ ಅಮವಾಸ್ಯೆಯ ಆಚರಣೆ ಆಗಿರಬಹುದು, ಆಟಿ ಕಳೆಂಜನು ಆ ತಿಂಗಳಲ್ಲಿ ಯಾಕೆ ಬರುವನು, ಅದರ ವಿಶೇಷತೆ ಏನು ಎಂಬುದನ್ನು ನಮ್ಮ ಮುಂದಿನ ಮಕ್ಕಳಿಗೆ ತಿಳಿಸಬೇಕು. ತುಳುವ ಸಂಸ್ಕೃತಿ,ಆಚರಣೆ ಉಳಿಸುವ ಪ್ರಯತ್ನ ನಮ್ಮಿಂದಲೇ ಆಗಬೇಕು, ನಮ್ಮ ಹಿರಿಯರು ತುಳುನಾಡಿನ ಪ್ರತಿಯೊಂದು ಆಚರಣೆಗೂ ಮಹತ್ವವನ್ನು ನೀಡಿ ಅದನ್ನು ಆಚರಿಸುತ್ತಿದ್ದರು ಮತ್ತು ಪ್ರತಿಯೊಂದು ಆಚರಣೆಗೂ ಅದರದೇ ಆದ ವಿಶೇಷತೆ, ಸಂಸ್ಕೃತಿ, ಸಂಪ್ರದಾಯ ಇತ್ತು ಎಂದು […]
Read More
09-06-2024, 3:01 PM
ಮಾಣಿ: ಪರಿಸರ ದಿನಾಚರಣೆ ಕಾರ್ಯಕ್ರಮ ಮಾಡುವ ಮೂಲಕ ಪರಿಸರವನ್ನು ಉಳಿಸಿ, ಬೆಳೆಸುವಂತ ಕೆಲಸವಾಗಬೇಕು. ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸಿಮಿತವಾಗದೆ ಪ್ರತಿದಿನವು ಪರಿಸರವನ್ನು ಪೋಷಿಸುವಂತ ಕೆಲಸ ಆಗಬೇಕು. ಜಗದ ಪ್ರತಿಯೊಬ್ಬನಿಗೂ ಪರಿಸರ ಅತ್ಯಮೂಲ್ಯ ಮತ್ತು ಅತ್ಯಗತ್ಯ. ಪ್ರಕೃತಿಯಿಂದ ನಮಗೆ ಉಪಯೋಗವಿದೆ, ಗಾಳಿ, ನೆರಳು, ಹೀಗೆ ವಿವಿಧ ರೀತಿಯಲ್ಲಿ ಪರಿಸರವು ನಮಗೆ ಸಹಕಾರಿಯಾಗಿದೆ ಎಂದು ಬಂಟ್ವಾಳದ ವಲಯ ಅರಣ್ಯಾಧಿಕಾರಿಯಾದ ಪ್ರಫುಲ್ ಶೆಟ್ಟಿ ಹೇಳಿದರು. ಅವರು ದಿನಾಂಕ 09-06-2024ರ ಆದಿತ್ಯವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೆರಾಜೆ ಇಲ್ಲಿ […]
Read More
12-05-2024, 4:20 PM
ಮಾಣಿ: ದಿನಾಂಕ 12-05-2024 ಆದಿತ್ಯವಾರದಂದು ಬೆಳಿಗ್ಗೆ 7.00ಕ್ಕೆ ಮಾಣಿಯಿಂದ ಬಸ್ಸಿನಲ್ಲಿ ಹೊರಟ ಘಟಕದ ಪಯಣ ಅತ್ಯಂತ ಸಡಗರದಿಂದ, ಖುಷಿಯಿಂದ, ಅಂತ್ಯಾಕ್ಷರಿ, ಒಗಟು ಬಿಡಿಸೋದು, ಇನ್ನಿತರ ಹಲವು ಗೇಮ್ಸ್ ನಲ್ಲಿ ಎಲ್ಲರೂ ಪಾಲ್ಗೊಂಡು ಕಾಲ ಕಳೆದರು. ದಾರಿ ಮದ್ಯದಲ್ಲಿ ಬೆಳಗ್ಗಿನ ಉಪಹಾರವನ್ನು ಮುಗಿಸಿಕೊಂಡು ಪುನಹ ಬಸ್ಸಿನಲ್ಲಿ ವಿವಿಧ ಮನರಂಜನೆಯನ್ನು ಪ್ರಾರಂಭಿಸಿ ಎಲ್ಲರೂ ನಕ್ಕು ನಲಿದು ಸಂತೋಷ ದಿಂದ ಪ್ರಯಾಣ ಮಾಡಿ 11.30 ಕ್ಕೆ ಕಣ್ಣೂರು ತಲುಪಿದೆವು. ಅಲ್ಲಿ ಎಲ್ಲರಿಗೂ ಟಿಕೆಟನ್ನು ಪಡೆದು ಬ್ಯಾಗನ್ನು ಲಾಕರಿನಲ್ಲಿ ಇಟ್ಟು ಮಕ್ಕಳಿಗೆ ಆಟ ಆಡಲು […]
Read More
08-03-2024, 3:19 PM
ಬಂಟ್ವಾಳ: ಮಕ್ಕಳಿಗೆ ಜೀವನ ಶಿಕ್ಷಣ ನೀಡಿ, ಸಂಸ್ಕಾರ ಕಲಿಸುವಲ್ಲಿ ತಾಯಿ ಪಾತ್ರ ಬಹಳ ಮುಖ್ಯ, ಕುಟುಂಬದ ಅಳಿವು ಉಳಿವು ಮಹಿಳೆ ಕೈಯಲ್ಲಿದೆ ಎಂದು ಕೊಡಪದವು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕಿ ಆರತಿ ದಾಸಪ್ಪ ಹೇಳಿದರು. ಯುವವಾಹಿನಿ (ರಿ.) ಮಾಣಿ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ 08/03/2024 ಶುಕ್ರವಾರದಂದು ಮಾಣಿ ನಾರಾಯಣ ಗುರು ಸಭಾಭವನ ದಲ್ಲಿ ಜರುಗಿದ ಮಾತೆಯ ಮಡಿಲು ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ […]
Read More
06-11-2022, 4:40 PM
ಮಾಣಿ :- ಯುವವಾಹಿನಿ(ರಿ.) ಮಾಣಿ ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 06ನವೆಂಬರ್ 2022 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನ,ಮಾಣಿ ಇಲ್ಲಿ ಜರುಗಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ ರವರು ಉದ್ಘಾಟಿಸಿದರು. ತದನಂತರ ಅವರು ನೂತನ ತಂಡಕ್ಕೆ ಶುಭ ಹಾರೈಸಿದರು. ಕಾರ್ಯದರ್ಶಿ ರೇಣುಕಾ ಕಣಿಯೂರುರವರು ವಾರ್ಷಿಕ ವರದಿಯನ್ನು ದೃಶ್ಯ – ಶ್ರವ್ಯ ಪರದೆಯ ಮೂಲಕ […]
Read More
09-10-2022, 3:17 AM
ವೇಣೂರು :- ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ “ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಯುವವಾಹಿನಿ ಮಾಣಿ ಘಟಕವು ತನ್ನ ಮುಡಿಗೇರಿಸಿಕೊಂಡಿದೆ. ದಿನಾಂಕ 09 ಅಕ್ಟೋಬರ್ 2022ರಂದು ಜರಗಿದ ಕೆಸರ್ ಡೊಂಜಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತೀ ಹೆಚ್ಚು ವಿಭಾಗದಲ್ಲಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿ ಹೆಚ್ಚು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿ […]
Read More
02-10-2022, 9:01 AM
ಮಾಣಿ :- ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ವಿಶುಕುಮಾರ್ ದತ್ತಿನಿಧಿ ಸಮಿತಿ ವತಿಯಿಂದ ಕೊಡ ಮಾಡುವ 2022ನೇ ಸಾಲಿನ ವಿಶುಕುಮಾರ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 02 ಅಕ್ಟೋಬರ್ 2022 ರ ಆದಿತ್ಯವಾರದಂದು ಯುವವಾಹಿನಿ (ರಿ.)ಮಾಣಿ ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಮಾಣಿ ಇಲ್ಲಿ ನೆರವೇರಿತು. ಸಾಹಿತಿ ಹಾಗೂ ವಿಮರ್ಶಕರಾದ ಡಾ.ಬಿ.ಜನಾರ್ದನ ಭಟ್ ಇವರಿಗೆ ಈ ಬಾರಿಯ ವಿಶುಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೇಖಕ […]
Read More
11-09-2022, 2:08 PM
ಮಾಣಿ :- ಘಟಕದ ಸ್ಪಂದನ ಯೋಜನೆಯಡಿ ಬರಿಮಾರು ಗ್ರಾಮದ ಕೇವ ಎಂಬಲ್ಲಿಯ ಭವಾನಿ ಮಾಧವ ರವರ ಮನೆಯ ದುರಸ್ತಿಯ ಮೊದಲನೇ ಹಂತದ ಶ್ರಮದಾನ ದಿನಾಂಕ 11 ಸೆಪ್ಟೆಂಬರ್ 2022 ರಂದು ನಡೆಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಜಯಂತ್ ಬರಿಮಾರು , ಉಪಾಧ್ಯಕ್ಷರಾದ ರವಿಚಂದ್ರ ಬಾಬನಕಟ್ಟೆ ,ಮಾಜಿ ಅಧ್ಯಕ್ಷರರಾದ ರಾಜೇಶ್ ಬಾಬಾನಕಟ್ಟೆ, ಹರೀಶ್ ಬಾಕಿಲ , ಗೌರವ ಸಲಹೆಗಾರರಾದ ಯಶೋಧರ ಮಾಣಿ, ಮಾಜಿ ಗೌರವ ಸಲಹೆಗಾರರಾದ ಬಾಲಕೃಷ್ಣ ದೇಲಬೆಟ್ಟು , ಕೋಶಾಧಿಕಾರಿ ರಾಜೇಶ್ ಬಲ್ಯ, ಸಮಾಜ ಸೇವಾ […]
Read More