ಉಡುಪಿ ನ 01 : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ನವೆಂಬರ್ 1ರಂದು ಉಡುಪಿಯ ಯಕ್ಷಕಲಾರಂಗದಲ್ಲಿ ನಡೆದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಅಂತರ್‌ಘಟಕ ಕಿರುಚಿತ್ರ ಸ್ಪರ್ಧೆ ‘ಯುವಸಿನಿದನಿ–2026’ ಯಶಸ್ವಿಯಾಗಿ ಸಂಪನ್ನಗೊಂಡಿತು.

ಸ್ಪರ್ಧೆಯಲ್ಲಿ ಯುವವಾಹಿನಿ ಕೂಳೂರು ಘಟಕದ ‘ಬದ್‌ಕ್ ಮಾಯೆ’ ಕಿರುಚಿತ್ರವು ಪ್ರಥಮ ಸ್ಥಾನ ಪಡೆದು ಶ್ರೇಷ್ಠ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬಜಪೆ ಘಟಕದ ‘ಬದಲಾವಣೆ’ ದ್ವಿತೀಯ ಹಾಗೂ ಬೆಳ್ತಂಗಡಿ ಘಟಕದ ‘ಮೈಮೆ’ ಕಿರುಚಿತ್ರ ತೃತೀಯ ಸ್ಥಾನ ಗಳಿಸಿತು.

ಯುವಜನರಲ್ಲಿ ಚಲನಚಿತ್ರ ನಿರ್ಮಾಣದ ಆಸಕ್ತಿ, ಸೃಜನಶೀಲತೆ, ಕಲಾತ್ಮಕ ಅಭಿವ್ಯಕ್ತಿ ಹಾಗೂ ಸಾಮಾಜಿಕ ಕಳಕಳಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ಪಣಂಬೂರು–ಕುಳಾಯಿ, ಕೂಳೂರು, ಮಾಣಿ, ಬಜಪೆ, ಕಾರ್ಕಳ, ಕೊಲ್ಯ, ಬೆಳ್ತಂಗಡಿ, ವಿಟ್ಲ ಹಾಗೂ ಬಂಟ್ವಾಳ ಘಟಕಗಳು ಸೇರಿದಂತೆ ಒಟ್ಟು ಒಂಬತ್ತು ಘಟಕಗಳು ಭಾಗವಹಿಸಿದ್ದವು.

ವೈಯಕ್ತಿಕ ಪ್ರಶಸ್ತಿಗಳ ವಿವರ
- ಶ್ರೇಷ್ಠ ನಿರ್ದೇಶಕ – ಅನೀಶ್ ಪೂಜಾರಿ ವೇಣೂರು (ಬೆಳ್ತಂಗಡಿ ಘಟಕ)
- ಶ್ರೇಷ್ಠ ನಟ – ಹರೀಶ್ (ಕೂಳೂರು ಘಟಕ)
- ಶ್ರೇಷ್ಠ ನಟಿ – ನಯನ ಕೋಟ್ಯಾನ್ (ಕೂಳೂರು ಘಟಕ)
- ಶ್ರೇಷ್ಠ ಪೋಷಕ ನಟ – ರಾಜೇಶ್ ವಿಟ್ಲ (ವಿಟ್ಲ ಘಟಕ)
- ಶ್ರೇಷ್ಠ ಪೋಷಕ ನಟಿ – ಪ್ರತಿಮಾ ಜಿ. ಅಂಚನ್ (ಬಂಟ್ವಾಳ ಘಟಕ)
- ಶ್ರೇಷ್ಠ ಬಾಲ ನಟ – ರಿತೀಶ್‌ರಾಜ್ ವಿಟ್ಲ (ವಿಟ್ಲ ಘಟಕ)
- ಶ್ರೇಷ್ಠ ಬಾಲ ನಟಿ – ಸುಜನ (ಮಾಣಿ ಘಟಕ)
- ಶ್ರೇಷ್ಠ ಬರಹಗಾರ – ಸಂತೋಷ್ ಕೋಟ್ಯಾನ್ (ಕೂಳೂರು ಘಟಕ)
- ಶ್ರೇಷ್ಠ ಛಾಯಾಗ್ರಾಹಕ – ದಿವಾಕರ್ ಬೈಕಂಪಾಡಿ (ಪಣಂಬೂರು–ಕುಳಾಯಿ ಘಟಕ)
- ಶ್ರೇಷ್ಠ ಸಂಕಲನಕಾರ – ಭವಿತ್‌ರಾಜ್ ಪೊರ್ಕೋಡಿ (ಬಜಪೆ ಘಟಕ)
- ಶ್ರೇಷ್ಠ ಸಂಗೀತ ನಿರ್ದೇಶನ – ಸಮರ್ಥನ್ ಎಸ್. ರಾವ್ (ಬೆಳ್ತಂಗಡಿ ಘಟಕ)
ಉತ್ತಮ ಸಂದೇಶಭರಿತ ಕಿರುಚಿತ್ರ ಪ್ರಶಸ್ತಿ : ಕೊಲ್ಯ ಘಟಕದ ‘Some ಬಂಧ’ ಹಾಗೂ ಕಾರ್ಕಳ ಘಟಕದ ‘ಬೂಡು’ ಕಿರುಚಿತ್ರಗಳು ಉತ್ತಮ ಸಂದೇಶಭರಿತ ಕಿರುಚಿತ್ರ ಪ್ರಶಸ್ತಿಗೆ ಭಾಜನವಾದವು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಘಟಕಗಳ ಕಲಾವಿದರು ಹಾಗೂ ತಾಂತ್ರಿಕ ತಂಡದ ಸದಸ್ಯರು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಯುವಸಿನಿದನಿಗೆ ವಿಶೇಷ ಮೆರುಗು ನೀಡಿದರು. ಯುವವಾಹಿನಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿದ ಈ ಸ್ಪರ್ಧೆಯು ಯುವ ಪ್ರತಿಭೆಗಳಿಗೆ ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಯಿತು.

ಜ್ಞಾನ ಮಂಥನ ಸ್ಪರ್ಧೆ
ಜ್ಞಾನ ಮಂಥನ ಸ್ಪರ್ಧೆಯಲ್ಲಿ ಕೊಲ್ಯ ಘಟಕ ಪ್ರಥಮ ಸ್ಥಾನ ಪಡೆದುಕೊಂಡಿತು. ಬಂಟ್ವಾಳ ಘಟಕ ದ್ವಿತೀಯ, ಪಡುಬಿದ್ರಿ ಘಟಕ ತೃತೀಯ ಹಾಗೂ ಪಣಂಬೂರು–ಕುಳಾಯಿ ಘಟಕ ಚತುರ್ಥ ಸ್ಥಾನ ಗಳಿಸಿತು.
ಯುವಜನರಲ್ಲಿ ಜ್ಞಾನಾರ್ಜನೆ, ವಿಷಯ ಗ್ರಹಿಕೆ, ಬೌದ್ಧಿಕ ಸಾಮರ್ಥ್ಯ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.
ಕಲೆ, ಸಂಸ್ಕೃತಿ ಹಾಗೂ ಜ್ಞಾನದ ಸಂಗಮವಾಗಿ ಮೂಡಿಬಂದ ಈ ಎರಡೂ ಸ್ಪರ್ಧೆಗಳು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಯುವವಾಹಿನಿಯ ಸಾಂಸ್ಕೃತಿಕ ಮತ್ತು ಬೌದ್ಧಿಕ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿದವು.












