ಮಿತ್ತೂರು ಸೆ 30 : ಕನ್ನಡಿಯಲ್ಲಿ ದೇವರನ್ನು ಕಂಡ ಬ್ರಹ್ಮಶ್ರೀ ನಾರಾಯಣ ಗುರುಗಳು, ಮನುಷ್ಯನು ಮೊದಲು ತನ್ನನ್ನು ತಾನು ಅರಿತುಕೊಳ್ಳಬೇಕು ಎಂಬ ಮಹತ್ವದ ಸಂದೇಶವನ್ನು ಸಮಾಜಕ್ಕೆ ಸಾರಿದರು ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು.

ಸೆಪ್ಟೆಂಬರ್ 30ರಂದು ಶಶಿಪ್ರಭಾ ಮೋಹನ ಮಿತ್ತೂರು ಅವರ ಮನೆಯಲ್ಲಿ ನಡೆದ “ಮನೆಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿ ನಮ್ಮ ಬಾಹ್ಯರೂಪವನ್ನು ತೋರಿಸುವಂತೆ ಆತ್ಮದರ್ಶನವು ನಮ್ಮ ಅಂತರಂಗವನ್ನು ಅರಿಯಲು ದಾರಿದೀಪವಾಗುತ್ತದೆ. ನಮ್ಮೊಳಗಿನ ಶುದ್ಧತೆ, ಸತ್ಯ ಮತ್ತು ಮಾನವೀಯತೆಯನ್ನು ಗುರುತಿಸಿಕೊಂಡು ಆತ್ಮಪರಿಶೀಲನೆಯ ಮೂಲಕ ಉತ್ತಮ ಬದುಕಿನತ್ತ ಸಾಗಬೇಕು. ಇದೇ ನಾರಾಯಣ ಗುರುಗಳು ತೋರಿಸಿದ ಆತ್ಮದರ್ಶನದ ಮಾರ್ಗವಾಗಿದೆ ಎಂದರು.
ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ಜಯಂತ ಬರಿಮಾರು, ನಾಗೇಶ್ ಪೂಜಾರಿ ಕೊಂಕಣಪದವು, ನಿರ್ದೇಶಕರಾದ ಸುರೇಶ್ ಬಾಕಿಲ, ಸತೀಶ್ ಮುರುವ, ರಾಜೇಶ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳಾದ ಸೀತಾ ಲಕ್ಷ್ಮೀ, ಮೋಹನ ಹಾಗೂ ಭಜನಾ ತಂಡದ ಜನಾರ್ದನ, ಯಶೋಧರ, ಬಾಲಕೃಷ್ಣ ಶೇರಾ, ಲೋಕೇಶ್, ಸುಜಿತ್ ಬಾಕಿಲ ಸೇರಿದಂತೆ ಯುವವಾಹಿನಿ ಸದಸ್ಯರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನೀತಾ ಶ್ರೀಧರ್ ಪೂಜಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಪೂಜಾರಿ ವಂದಿಸಿದರು.








