Yuvavahini

ಮಾಣಿ

ಶ್ರೇಷ್ಠ ಕಿರುಚಿತ್ರ ಪ್ರಶಸ್ತಿ ಯುವವಾಹಿನಿ ಕೂಳೂರು ಘಟಕದ ‘ಬದ್‌ಕ್ ಮಾಯೆ’ಗೆ

ಉಡುಪಿ ನ 01 : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ನವೆಂಬರ್ 1ರಂದು ಉಡುಪಿಯ ಯಕ್ಷಕಲಾರಂಗದಲ್ಲಿ ನಡೆದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಅಂತರ್‌ಘಟಕ ಕಿರುಚಿತ್ರ ಸ್ಪರ್ಧೆ ‘ಯುವಸಿನಿದನಿ–2026’ ಯಶಸ್ವಿಯಾಗಿ ಸಂಪನ್ನಗೊಂಡಿತು. ಸ್ಪರ್ಧೆಯಲ್ಲಿ ಯುವವಾಹಿನಿ ಕೂಳೂರು ಘಟಕದ ‘ಬದ್‌ಕ್ ಮಾಯೆ’ ಕಿರುಚಿತ್ರವು ಪ್ರಥಮ ಸ್ಥಾನ ಪಡೆದು ಶ್ರೇಷ್ಠ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬಜಪೆ ಘಟಕದ ‘ಬದಲಾವಣೆ’ ದ್ವಿತೀಯ ಹಾಗೂ ಬೆಳ್ತಂಗಡಿ ಘಟಕದ ‘ಮೈಮೆ’ ಕಿರುಚಿತ್ರ ತೃತೀಯ ಸ್ಥಾನ ಗಳಿಸಿತು. […]

Read More

ಮಂಗಳೂರು ದಸರಾ ಸ್ವಯಂಸೇವೆ; ಅನ್ನದಾನಕ್ಕೆ ₹15,000 ದೇಣಿಗೆ

ಮಂಗಳೂರು, ಅ. 19: ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ನಡೆಸಲಾಯಿತು. ಕಾರ್ಯಕ್ರಮದ ಸಂಚಾಲಕಿ ಶಶಿಪ್ರಭಾ ಮಿತ್ತೂರು ಅವರ ಸಂಪೂರ್ಣ ಸಹಕಾರದೊಂದಿಗೆ ಘಟಕದ ಸದಸ್ಯರು ಸ್ವಯಂಸೇವೆ ಹಾಗೂ ಅನ್ನದಾನ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹15,000 ಮೊತ್ತದ ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ […]

Read More

‘ಪುದ್ದಾರ್ದ ಪೊರ್ಲು’ ಮೂಲಕ ತುಳುನಾಡಿನ ಸಂಸ್ಕೃತಿಗೆ ಮೆರುಗು

ಮಾಣಿ, ಅ. 17: ತುಳುನಾಡಿನ ಮಣ್ಣಿನ ಸೊಗಡು, ಕೃಷಿ ಸಂಸ್ಕೃತಿ ಹಾಗೂ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಅಕ್ಟೋಬರ್ 17ರಂದು ಬಿಲ್ಲವ ಕಿರೋಡಿಯನ್ಸ್ ಕುಟುಂಬದ ಚಾವಡಿಯಲ್ಲಿ ‘ಪುದ್ದಾರ್ದ ಪೊರ್ಲು’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಮಾತುಗಾರರಾಗಿ ಭಾಗವಹಿಸಿದ ಲೋಕನಾಥ್ ತಿಮರಾಜೆ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಭತ್ತ ಮತ್ತು ಅನ್ನಕ್ಕೆ ನೀಡಲಾಗುತ್ತಿದ್ದ ಮಹತ್ವವನ್ನು ವಿವರಿಸಿದರು. ಭತ್ತವನ್ನು ದೈವಸ್ವರೂಪವಾಗಿ ಕಂಡು, ಅನ್ನವನ್ನು ದೇವರ ಪ್ರಸಾದವೆಂದು ಗೌರವಿಸುವ […]

Read More

ಗೆಜ್ಜೆಗಿರಿ ಸನ್ನಿಧಾನದಲ್ಲಿ ಭಕ್ತಿಭಾವದ ಭಜನಾ ಸಂಕೀರ್ತನೆ

ಮಾಣಿ, ಅ. 12: ನವರಾತ್ರಿ ಉತ್ಸವದ ಅಂಗವಾಗಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಅಕ್ಟೋಬರ್ 12ರಂದು ಗೆಜ್ಜೆಗಿರಿ ನಂದನ ಬಿತ್ತಿಲು ಸನ್ನಿಧಾನದಲ್ಲಿ ಭಜನಾ ಸಂಕೀರ್ತನೆಯನ್ನು ಭಕ್ತಿಭಾವದಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ಘಟಕದ ಮಹಿಳಾ ನಿರ್ದೇಶಕಿ ಪುಷ್ಪಶ್ರೀ ನಾಗೇಶ್, ಮಾಜಿ ಅಧ್ಯಕ್ಷರಾದ ನಾಗೇಶ್ ಪೂಜಾರಿ ಕೊಂಕಣಪದವು, ಜನಾರ್ದನ ಪೂಜಾರಿ ಕೊಡಂಗೆ, ಯಶೋಧರ, ಲೋಕೇಶ್ ಕೋರ್ಯಾ, ಸುಜಿತ್ ಬಾಕಿಲ ಹಾಗೂ ಪುಟಾಣಿ ಮಕ್ಕಳು ಭಾಗವಹಿಸಿ ಭಜನಾ ಸೇವೆ ಸಲ್ಲಿಸಿದರು. ಭಕ್ತಿಗೀತೆಗಳ ಗಾಯನ, ನಾಮಸ್ಮರಣೆ ಹಾಗೂ ಪುಟಾಣಿ ಮಕ್ಕಳ ಉತ್ಸಾಹಭರಿತ […]

Read More

ತ್ರಿವೇಣಿ ಸಂಗಮದಲ್ಲಿ ಪವಿತ್ರ ತೀರ್ಥಸ್ನಾನ, ದೇವಾಲಯಗಳಿಗೆ ಭೇಟಿ

ಪ್ರಯಾಗರಾಜ್, ಅ. 7: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾದ ಅಯೋಧ್ಯೆ–ಕಾಶಿ–ಪ್ರಯಾಗರಾಜ್ ಧಾರ್ಮಿಕ ಯಾತ್ರೆಯ ಅಂಗವಾಗಿ ಯಾತ್ರಾರ್ಥಿಗಳು ಪ್ರಯಾಗರಾಜ್‌ನ ಪವಿತ್ರ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ನೆರವೇರಿಸಿ ಪುಣ್ಯಾನುಭವ ಪಡೆದರು. ಗಂಗಾ, ಯಮುನಾ ಹಾಗೂ ಅಂತರ್ವಾಹಿನಿ ಸರಸ್ವತಿ ನದಿಗಳ ಪವಿತ್ರ ಸಂಗಮವೆಂದು ಪ್ರಸಿದ್ಧವಾಗಿರುವ ತ್ರಿವೇಣಿ ಸಂಗಮದಲ್ಲಿ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡಿ ಭಕ್ತಿಭಾವ ಮೆರೆದರು. ಬಳಿಕ ಪ್ರಸಿದ್ಧ ಹನುಮಾನ್ ಮಂದಿರ ಹಾಗೂ ಶಕ್ತಿಪೀಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಯುವವಾಹಿನಿ ಮಾಣಿ ಘಟಕದ […]

Read More

ಮನೆ ಮನೆಗೆ ಗುರುತತ್ತ್ವದ ಬೆಳಕು – ಯುವವಾಹಿನಿ ಮಾಣಿ ಘಟಕದ ಅಭಿಯಾನಕ್ಕೆ ಸಮಾರೋಪ

ಮಾಣಿ ಅ 01 : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಒಂದು ತಿಂಗಳ ಕಾಲ ನಡೆದ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದ ಸಮಾರೋಪ ಸಮಾರಂಭವು ನಿರೂಪಕಿ ಲೋಕೇಶ್–ರೇಣುಕಾ ಅವರ ಐಸಿರಿ ಮನೆಯಲ್ಲಿ ನಡೆಯಿತು. “ಗುರುತತ್ತ್ವದ ಸತ್ವವನ್ನು ನೆನಪಿಸುವ ಕಾಲ ಕೂಡಿ ಬಂದಿದೆ” ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ, ನಿರೂಪಕ ದಿನೇಶ್ ಸುವರ್ಣ ರಾಯಿ ಹೇಳಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವು ಜಾತಿ, ಧರ್ಮ ಹಾಗೂ ಭಾಷೆಯ ಎಲ್ಲ ಗಡಿಗಳನ್ನು ಮೀರಿ ಮಾನವೀಯತೆಯನ್ನು […]

Read More

ಕನ್ನಡಿಯಲ್ಲಿ ದೇವರನ್ನು ಕಂಡ ನಾರಾಯಣ ಗುರುಗಳು ಆತ್ಮದರ್ಶನದ ದಾರಿ ತೋರಿದರು – ಸಚಿನ್ ಅಮೀನ್ ಪೆರಾಜೆ

ಮಿತ್ತೂರು ಸೆ 30 : ಕನ್ನಡಿಯಲ್ಲಿ ದೇವರನ್ನು ಕಂಡ ಬ್ರಹ್ಮಶ್ರೀ ನಾರಾಯಣ ಗುರುಗಳು, ಮನುಷ್ಯನು ಮೊದಲು ತನ್ನನ್ನು ತಾನು ಅರಿತುಕೊಳ್ಳಬೇಕು ಎಂಬ ಮಹತ್ವದ ಸಂದೇಶವನ್ನು ಸಮಾಜಕ್ಕೆ ಸಾರಿದರು ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು. ಸೆಪ್ಟೆಂಬರ್ 30ರಂದು ಶಶಿಪ್ರಭಾ ಮೋಹನ ಮಿತ್ತೂರು ಅವರ ಮನೆಯಲ್ಲಿ ನಡೆದ “ಮನೆಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿ ನಮ್ಮ ಬಾಹ್ಯರೂಪವನ್ನು ತೋರಿಸುವಂತೆ ಆತ್ಮದರ್ಶನವು ನಮ್ಮ ಅಂತರಂಗವನ್ನು ಅರಿಯಲು ದಾರಿದೀಪವಾಗುತ್ತದೆ. ನಮ್ಮೊಳಗಿನ ಶುದ್ಧತೆ, ಸತ್ಯ ಮತ್ತು ಮಾನವೀಯತೆಯನ್ನು ಗುರುತಿಸಿಕೊಂಡು ಆತ್ಮಪರಿಶೀಲನೆಯ […]

Read More

ಕರುಣೆಯಲ್ಲಿ ಮಾನವೀಯತೆ, ಶಾಂತಿಯಲ್ಲಿ ಸಾರ್ಥಕತೆ – ರೇಣುಕಾ ಕಣಿಯೂರು

ಮಾಣಿ: ಮನುಷ್ಯನ ಬದುಕಿನಲ್ಲಿ ಕರುಣೆ, ಶಾಂತಿ ಮತ್ತು ಸತ್ಯಕ್ಕೆ ಅತ್ಯಂತ ಮಹತ್ವವಿದೆ. ಕರುಣೆಯು ಮಾನವೀಯತೆಯನ್ನು ಬೆಳೆಸಿದರೆ, ಶಾಂತಿಯು ಬದುಕಿಗೆ ಸಾರ್ಥಕತೆಯನ್ನು ನೀಡುತ್ತದೆ. ಸತ್ಯದ ಹಾದಿಯಲ್ಲಿ ನಡೆಯುವುದರಿಂದ ಜೀವನಕ್ಕೆ ನೈಜ ಅರ್ಥ ದೊರೆಯುತ್ತದೆ ಎಂದು ರೇಣುಕಾ ಕಣಿಯೂರು ಹೇಳಿದರು. ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದ ಅಂಗವಾಗಿ ಸೆ. 29ರಂದು ನಿವೃತ್ತ ಸೈನಿಕ ಜಯಕರ ಸುಪ್ರೀತ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ […]

Read More

ಪರಿಶುದ್ಧ ಮನಸ್ಸಿನಿಂದಲೇ ದೇವರನ್ನು ಕಾಣಲು ಸಾಧ್ಯ : ಸಚಿನ್ ಅಮೀನ್ ಪೆರಾಜೆ

ಮಾಣಿ: ಸೆಪ್ಟೆಂಬರ್ 28 : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾದ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮವು ರವಿ ಭಂಡಾರಿ ಕೆದಿಲ ಅವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಅಮೀನ್ ಪೆರಾಜೆ, “ಪರಿಶುದ್ಧ ಮನಸ್ಸು ಮತ್ತು ನಿರ್ಮಲ ಹೃದಯದಿಂದಲೇ ದೇವರನ್ನು ಕಾಣಲು ಸಾಧ್ಯ. ನಾರಾಯಣ ಗುರುಗಳ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು. ಗ್ರಾಮದ ದೈವದ ಚಾಕ್ರಿಯಾಗಿ ಸೇವೆ ಸಲ್ಲಿಸುತ್ತಿರುವ ರವಿ ಭಂಡಾರಿ ಮಾತನಾಡಿ, ನಾರಾಯಣ ಗುರುಗಳ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ

ಯುವವಾಹಿನಿ ಕ್ರೀಡೋತ್ಸವ–2026 : ಪಣಂಬೂರು ಕುಳಾಯಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ...

Sunday, 11-10-2026
ಕ್ರೀಡಾ ಸ್ಫೂರ್ತಿ, ಶಿಸ್ತು ಹಾಗೂ ಸಂಘಟನಾ ಶಕ್ತಿಯ ಅನಾವರಣ

ಯುವವಾಹಿನಿ ಕ್ರೀಡೋತ್ಸವ–2026ಕ್ಕೆ ಸಂಭ್ರಮದ ತೆರೆ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ...

Sunday, 04-10-2026
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
error: Content is protected !!