ಸುಳ್ಯ : “ಮನುಷ್ಯರೆಲ್ಲರೂ ಒಂದೇ ಜಾತಿ ಎಂಬ ಸಂದೇಶವನ್ನು ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶಗಳನ್ನು ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ. ಗುರು ತತ್ವಗಳನ್ನು ಆಧಾರವಾಗಿಟ್ಟುಕೊಂಡು ಸಂಘಟಿತರಾದರೆ ಯಶಸ್ಸು ಖಂಡಿತ,” ಎಂದು ಯುವವಾಹಿನಿ ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ ಕುಂಪಲ ಹೇಳಿದರು.
ಅವರು ದಿನಾಂಕ 18.01.2026 ರಂದು ಯುವವಾಹಿನಿ ಸುಳ್ಯ ಘಟಕದ ವತಿಯಿಂದ, ಸುಳ್ಯ ಘಟಕದ ಸ್ಥಾಪಕಾಧ್ಯಕ್ಷ ಶಿವಪ್ರಸಾದ್ ಕೆ.ವಿ. ಅವರ ಮನೆಯಲ್ಲಿ ಆಯೋಜಿಸಲಾದ ಗುರುಸ್ಫೂರ್ತಿ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಮಾತನಾಡಿದರು. ನಾರಾಯಣಗುರುಗಳ ಸಂದೇಶಗಳು ಕೇವಲ ಮಾತಲ್ಲ, ಅವು ಜೀವನದ ಮಾರ್ಗದರ್ಶಕ ಸೂತ್ರಗಳಾಗಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ವಹಿಸಿದ್ದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ, ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಲೋಹಿತ್ ರೆಂಜಾಳ, ಯುವವಾಹಿನಿ ಸುಳ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ರಮೇಶ್ ಜಯನಗರ ಹಾಗೂ ಸುಳ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು

ಯುವವಾಹಿನಿ ಸುಳ್ಯ ಘಟಕದ ಉಪಾಧ್ಯಕ್ಷೆ ನೂತನ ಪ್ರವೀಣ್ ನೆಟ್ಟಾರ್ ವಂದಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ ಹೈದಂಗೂರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಭಜನಾ ಸಂಕೀರ್ತನೆ ನಡೆಯಿತು.


