ಗುರುಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮವು ಸೆ.14 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಶಾಂತಿವರ್ಯರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು.
ಪೂರ್ವಾಹ್ನ ಗಂಟೆ 8.30 ರಿಂದ ಭಜನಾ ಸಂಕೀರ್ತನೆ, 9.30 ರಿಂದ ಗುರುಪೂಜೆ ನಂತರ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಬ್ರಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಎ.ಕೃಷ್ಣಕುಮಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜನಪದ ಚಿಂತಕರಾದ ಶೈಲು ಬಿರ್ವ ದೋಲ ಬಾರಿಕೆ ಇವರು ಗುರುಸಂದೇಶ ನೀಡಿದರು. ಭಾ.ಜ.ಪಾ.ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಅತಿಥಿಗಳಾಗಿ ಉಪಸ್ಥಿತಿ ವಹಿಸಿದರು.
ಸನ್ಮಾನ: ನಿವೃತ್ತ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ, ನಿವೃತ್ತ ಕ್ಯಾಂಪ್ಲೋ ಅಧಿಕಾರಿ ರಾಘವ ಪೂಜಾರಿ ಸಾರಕರೆ, ಆಯುರ್ವೇದ ವೈದ್ಯಕೀಯ ಕ್ಷೇತ್ರದ ಡಾ.ರೂಪಾ ವಿಠಲದಾಸ್ ಬೆಳ್ಳಾರೆಯವರನ್ನು ಸನ್ಮಾನಿಸಲಾಯಿತು.
ಗೌರವಾರ್ಪಣೆ: ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ, ವಾಸ್ತು ರಚನಾ ಕನ್ ಸ್ಟ್ರಕ್ಷನ್ ನ ವಿಶ್ವನಾಥ ಪೂಜಾರಿ ಕೊಳಂಬಳ, ಕುಂದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀ ಮತಿ ರಶ್ಮಿತಾ ಕರ್ಕೇರಾ ಎನ್, ಕಾಣಿಯೂರು ಬ್ಯಾಂಕ್ ಆಫ್ ಬರೋಡಾದ ಶ್ರೀಮತಿ ಅಕ್ಷತಾ ಎಂ. ಮತ್ತು 2024-25 ನೇ ಸಾಲಿನ 10ನೇ ತರಗತಿ ಪರೀಕ್ಷೆ ಯಲ್ಲಿ ರಾಜ್ಯದಲ್ಲಿ 6ನೇ ಸ್ಥಾನ ಪಡೆದ ಕು.ಅಪೇಕ್ಷಾ ಅಲೆಕ್ಕಾಡಿಯವರನ್ನು ಗೌರವಿಸಲಾಯಿತು. 2024 -25ನೇ ಸಾಲಿನ ಶೇ.90ಕ್ಕಿಂತ ಅಧಿಕ ಅಂಕ ಪಡೆದ ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


