15-06-2019, 2:09 PM
ಅಕ್ಷಯದ ಮನೆಯಿಂದ ಅಕ್ಷರದವರೆಗೆ, ಪುತ್ತೂರಿನಿಂದ ಹತ್ತೂರವರೆಗೆ, ನನ್ನವರು ಎನ್ನುವುದರಿಂದ ನಮ್ಮವರು ಎನ್ನುವವರೆಗೆ ಒಂದು ಅದ್ಭುತ ಯುವ ಪ್ರಪಂಚದಲ್ಲಿ 365 ದಿನಗಳ ನಡಿಗೆ ಆರಂಭಿಸಿದ್ದೆ. ಇನ್ನು 60 ದಿನ ಮಾತ್ರ ಅಷ್ಟರಲ್ಲಿ ನನ್ನ ನಡಿಗೆ ಗುರಿ ಸೇರಬೇಕಿದೆ. ಸಾಕಷ್ಟು ಅನುಭವದೊಂದಿಗೆ, ಸಾಕಷ್ಟು ಮಂದಿಯ ಸ್ನೇಹವನ್ನು ಗಳಿಸಿಕೊಂಡು ಯುವವಾಹಿನಿಯಲ್ಲಿ 10 ತಿಂಗಳ ಪಯಣ ಮುಗಿಸಿದೆ. ಯುವವಾಹಿನಿ ನನ್ನನ್ನು ಎತ್ತರಕ್ಕೆ ಏರಿಸಿದೆ, ಹರಿತಗೊಳಿಸಿದೆ, ಸಾವಿರಾರು ಜನರ ಪ್ರೀತಿ ನೀಡಿದೆ, ಮರೆಯಲಸಾಧ್ಯವಾದ ಒಂದು ಹೊಸ ಅನುಭವವನ್ನು ನೀಡಿದೆ. ಯುವವಾಹಿನಿ ಎಲ್ಲರಿಗೂ ಸಮಾನವಾದ ಅವಕಾಶ […]
Read More
17-02-2019, 3:49 PM
ಮಂಗಳೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಫೆಬ್ರವರಿ ತಿಂಗಳ ಸಂಚಿಕೆಯನ್ನು ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ, ವಕೀಲರಾದ ವಿಜಯಲಕ್ಷ್ಮಿ ವಿಶುಕುಮಾರ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಂ ಪೂಜಾರಿ, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್, […]
Read More
15-02-2019, 2:49 PM
ಸಾದ್ವಿಯೊಬ್ಬರ ಮಾತು ನೆನಪಾಗುತ್ತಿದೆ, ಎಲೆಯೊಂದು ಉದುರುತ್ತಾ ಹೇಳಿತು ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಅರಿತು ನಡೆಯುವುದೇ ಜೀವನ’ ಹೌದು, ಒಂದು ಮರಕ್ಕೆ ಮಣ್ಣಿನಿಂದ ಪೋಷಕಾಂಶಗಳು ಯಾವತ್ತಿನವರೆಗೆ ದೊರೆಯುತ್ತದೊ ಅಲ್ಲಿಯವರೆಗೆ ಮರ ಸುದೃಡವಾಗಿ ಬೆಳೆಯುತ್ತದೆ, ನಮ್ಮ ಸಮಾಜದ ನೊಂದ ಮನಕ್ಕೆ ಸಾಂತ್ವಾನದ ನೆರಳ ನೀಡಲು ಬಿತ್ತಿದ ಬೀಜ ಗಿಡವಾಗಿ, ಮರವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದೆಷ್ಟೋ ವರುಷದಿಂದ ಎಲ್ಲರೂ ಜೊತೆಯಾಗಿ ಧಾರೆ ಎರದ ನೀರಿನಿಂದ ನಳನಳಿಸುತ್ತಿದೆ. ನಮಗಿರುವುದು ಒಂದೇ ಬಳಲಿದವರಿಗೆ ನೆರಳು, ಹಸಿದವರಿಗೆ ಹಣ್ಣು, ಸಮಾಜದ ಯುವಕರು […]
Read More
15-02-2019, 2:39 PM
ಒಮ್ಮೆ ಸೂರ್ಯ ಕೇಳಿದನಂತೆ ನಾನು ಮಾಡುವ ಕೆಲಸ ಯಾರು ಮಾಡ ಬಲ್ಲಿರಿ’ ಎಂದು, ಆಗ ಭೂಮಿಯೂ ಸೇರಿ ಎಲ್ಲವೂ ಸ್ತಬ್ದವಾಗಿತ್ತು ಚಿತ್ರಪಟದಂತೆ. ಅಷ್ಟರಲ್ಲಿ ಭೂಮಿಯಲ್ಲಿದ್ದ ಪುಟ್ಟ ಹಣತೆಯೊಂದು ಹೇಳಿತು. ಸೂರ್ಯ ನೀನು ಮಾಡುವ ಕೆಲಸ ನಾನು ಮಾಡಬಲ್ಲೆನು ಎಂದು. ಹೌದು ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ, ಯುಗಯುಗಗಳು ಸೇರಿ ಮಹಾಯುಗವಾಗುವಂತೆ ಶಕ್ತಿಗಳ ಕ್ರೋಡೀಕರಣ ಅಶ್ವಶಕ್ತಿಯ ಹುಟ್ಟಿಗೆ ಕಾರಣವಾಗುತ್ತದೆ. ಇಂದು ಯುವವಾಹಿನಿಯಲ್ಲೂ ಇದೇ ನಡೆದು ಹೋಗಿದೆ. ಸೂರ್ಯನೇ ನಾಚುವಂತಹ ಸೇವಾ ದೀವಿಗೆಯನ್ನು ನಮ್ಮ ಘಟಕಗಳು ಹಚ್ಚಿದೆ. ಯಡ್ತಾಡಿಯಿಂದ ಬೆಂಗಳೂರಿನವರೆಗೆ […]
Read More
15-11-2018, 2:10 PM
1987ರಲ್ಲಿ ಜನ್ಮತಾಳಿದ ಬಿಲ್ಲವ ಸಮಾಜದ ಯುವಶಕ್ತಿಯ ಸಂಚಯವಾದ ಯುವವಾಹಿನಿ ಇಂದು 31ರ ಹರೆಯದಲ್ಲಿ ರಾಜ್ಯಾದ್ಯಂತ 32 ಘಟಕಗಳನ್ನು ಸ್ಥಾಪಿಸುವ ಮೂಲಕ ಬಿಲ್ಲವ ಸಮಾಜದ ಭರವಸೆಯಾಗಿ ಬೆಳೆಯುತ್ತಿರುವುದು ಸಮಾಜದ ಬಂಧುಗಳೆಲ್ಲರೂ ಸಂತೋಷ ಮತ್ತು ಅಭಿಮಾನ ಪಡುವಂತಾಗಿದೆ. ನಮ್ಮ ಸಮಾಜದಲ್ಲಿ 1908ರ ವರೆಗೆ ಸಂಘಟನೆಯೆಂಬುದು ಇರಲಿಲ್ಲ. ಊರಲ್ಲಿ ಪರಂಪರಾಗತವಾಗಿ ಬಂದ ಗುರಿಕಾರರೇ ಆಯಾಯ ಊರು, ಗ್ರಾಮಗಳಲ್ಲಿನ ಸಮಾಜದಲ್ಲಿನ ಸಮಸ್ಯೆಗಳನ್ನು ಅಧಿಕಾರಯುತವಾಗಿ ಪರಿಹರಿಸುತ್ತಿದ್ದರು. ಇಂತಹ ಗುರಿಕಾರರ ಗುತ್ತು ಬರ್ಕೆ ಮನೆಗಳು ಸಾಮಾಜಿಕ ಮತ್ತು ಧಾರ್ಮಿಕ ವ್ಯಾಜ್ಯಗಳಿಗೆ ನ್ಯಾಯದಾನವನ್ನು ಮಾಡುತ್ತಿದ್ದರು. ಆಚಾರ, ವಿಚಾರ, […]
Read More
15-11-2018, 2:00 PM
ಯುವಸಿಂಚನ ಓದುಗ ಮಿತ್ರರೇ, ಒಂದು ಪೇಟೆಯಲ್ಲಿ ಚಿನ್ನದ ಅಂಗಡಿ ಮತ್ತು ಕಬ್ಬಿಣದ ಅಂಗಡಿ ಅಕ್ಕಪಕ್ಕದಲ್ಲಿ ಇದ್ದವು. ಒಂದು ದಿನ ಚಿನ್ನದ ತುಂಡೊಂದು ಕಬ್ಬಿಣದ ಅಂಗಡಿಯ ಮುಂದೆ ಬಂದು ಬಿದ್ದವು. ಇದನ್ನು ಕಂಡು ಕಬ್ಬಿಣ ಚಿನ್ನದ ಬಳಿ ಕೇಳತ್ತೆ ಚಿನ್ನಕ್ಕ ಚಿನ್ನಕ್ಕ ನೀನೇಕೆ ಇಲ್ಲಿಗೆ ಬಂದಿದ್ದೀಯಾ ? ಇದಕ್ಕೆ ಚಿನ್ನ ಉತ್ತರಿಸುತ್ತೆ ಕಬ್ಬಿಣ್ಣಕ್ಕ ಅಲ್ಲಿ ನನ್ನನ್ನು ಬಡಿಯುತ್ತಿದ್ದಾರೆ ಅದರ ನೋವು ತಾಳದೇ ಇಲ್ಲಿಗೆ ಬಂದಿದ್ದೇನೆ. ಇದನ್ನು ಕಂಡು ಕಬ್ಬಿಣ ನಗುತ್ತಾ ಹೇಳತ್ತೆ ಅಯ್ಯೋ ಚಿನ್ನಕ್ಕ ಹೊಡೆತ ಯಾರಿಗೇ ತಾನೇ […]
Read More
15-11-2018, 1:56 PM
ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು ಕಳೆದ ಹಲವು ವರುಷದಲ್ಲಿ ನೂರಾರು ಸಂಘಟನೆಗಳಲ್ಲಿ ಒತ್ತಡದ ಕೆಲಸ, ಆಗೆಲ್ಲ ನನ್ನ ಮಡದಿಯ ಮುನಿಸು ನಿಮಗೆ ಇದೆಲ್ಲ ಬೇಕಾ ? ಆಗೆಲ್ಲಾ ಗೊತ್ತಿಲ್ಲದಿದ್ದರೂ ಹಾಡೊಂದ ಗುಣುಗುತ್ತಿದ್ದೆ ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ …. ಏನಾಶ್ಚರ್ಯ ಈಗ ಒಂದೇ ಒಂದು ದಿನವೂ ವಿಶ್ರಾಂತಿ ಇಲ್ಲ. ನನ್ನ ಯುವವಾಹಿನಿಯ ಕುಟುಂಬ ನನಗೆ ವಿಶ್ರಾಂತಿಯನ್ನೂ ನೀಡದೆ ದಿನಕ್ಕೊಂದು ಮನೆಗೆ (ಘಟಕ) ಆಹ್ವಾನಿಸುತ್ತಲೇ ಇದ್ದಾರೆ. ಒಂದಕ್ಕಿಂತ ಒಂದು ಘಟಕದ ಭಿನ್ನ ಭಿನ್ನ ಕಾರ್ಯಕ್ರಮ, ಪ್ರತಿ […]
Read More
15-11-2018, 1:36 PM
ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಗೆಯಲ್ಲಿ ಕ್ರಾಂತಿಗಳು ನಡೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಅಂಗೈಯಲ್ಲೇ ಅರಮನೆ ಕಟ್ಟಿಸಿಕೊಂಡಿದೆ. ಎಲ್ಲಾ ಬಗೆಯ ಶಿಕ್ಷಣ, ಮಾಹಿತಿ, ಜ್ಞಾನ ಶಾಖೆಗಳು ಈ ಹಿಂದಿಗಿಂತ ಇಂದು ಹೆಚ್ಚು ಸುಲಭವಾಗಿ, ಸರಳವಾಗಿ ಕೈಗೆಟುಕುತ್ತಿದೆ. ಆದರೆ, ಎಲ್ಲಾ ಬಗೆಯ ಶಿಕ್ಷಣವನ್ನು ತನ್ನದಾಗಿಸಿಕೊಂಡ ವಿದ್ಯಾವಂತರೆನಿಸಿಕೊಂಡ ಯುವಜನರು ಕೇವಲ ಅಕ್ಷರಸ್ಥರಾಗುತ್ತಿದ್ದಾರೆಯೇ ? ಅಥವಾ ನಿಜಾರ್ಥದಲ್ಲಿ ವಿಚಾರವಂತರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಯಾವುದೇ ಶಿಕ್ಷಣಗಳು ನಾವು ವೈಚಾರಿಕ ಚಿಂತನೆ ಮತ್ತು ವೈಜ್ಞಾನಿಕ ದೃಷ್ಠಿಕೋನ ಬೆಳೆಸಿಕೊಳ್ಳಲು ಕನಿಷ್ಠ ಪ್ರೇರಣೆಯನ್ನೂ ನೀಡದಿದ್ದರೆ ಅವುಗಳೆಲ್ಲವೂ […]
Read More
15-11-2018, 1:26 PM
ಬಹುಸಂಖ್ಯಾತರಾದ ಹಿಂದುಳಿದ ವರ್ಗದಲ್ಲಿ ಬಿಲ್ಲವರಿಗೊಂದು ವಿಶೇಷ ವಾದ ಅನನ್ಯತೆ ಇದೆ. ಶತಮಾನಗಳ ಹಿಂದೆ ಇವರು ಅಸ್ಪೃಶ್ಯ ಸಮುದಾಯ ದವರಾಗಿದ್ದರು ಎಂಬುದು ಈಗಿನ ಯುವಸಮುದಾಯಕ್ಕೆ ಬಹುಶಃ ತಿಳಿದಿರಲಾರದು. ಭೂತಾರಾಧಕರು ಎಂಬ ಕಾರಣಕ್ಕೆ ಅವರಿಗೆ ದೇವಸ್ಥಾನ ಪ್ರವೇಶ ಇರಲಿಲ್ಲ ಎಂಬ ಮಾತು ನಂಬಲರ್ಹವಲ್ಲ. ಯಾಕೆಂದರೆ ಹಿಂದುಳಿದ ವರ್ಗದ ಬೇರೆ ಸಮುದಾಯದವರು ಭೂತ, ದೈವಗಳನ್ನು ನಂಬುವವರು ಎಂದು ಬಹಿಷ್ಕರಿಸಲಿಲ್ಲ. ಅವರಿಗೆ ದೇವಸ್ಥಾನದ ಅಂಗಳಕ್ಕೆ ಪ್ರವೇಶವಿತ್ತು, ಬಿಲ್ಲವರಿಗೆ ದೇವಸ್ಥಾನದ ಅಂಗಳಕ್ಕೆ ಪ್ರವೇಶ ನಿಷಿದ್ಧ. ಬಿಲ್ಲವರು ದರ್ಶನ ಪಾತ್ರಿಗಳಾದುದರಿಂದ, ಪೂಜಾರಿಗಳೆಂಬ ಗೌರವ ಇರುವುದರಿಂದ ದೇವರಿಗೂ […]
Read More
14-11-2018, 3:04 PM
ಮುಲ್ಕಿ : ಓದಿನಲ್ಲಿ ಸಿಗುವ ಆನಂದ ಅನುಭವ, ಒಳ್ಳೆಯ ವಿಚಾರ ಬೇರೆ ಯಾವ ತಂತ್ರಾಂಶದಿಂದ ಸಿಗಲು ಸಾಧ್ಯವಿಲ್ಲ. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು, ಈ ನಿಟ್ಟಿನಲ್ಲಿ ಯುವವಾಹಿನಿ ಮುಖವಾಣಿ ಯುವಸಿಂಚನ ಪತ್ರಿಕೆಯ ಸಾಧನೆ ಗಮನಾರ್ಹವಾದುದು ಎಂದು ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಅಭಿಪ್ರಾಯ ಪಟ್ಟರು. ಅವರು ದಿನಾಂಕ 14.11.2018 ರಂದು ಮುಲ್ಕಿ ಸಿ. ಎಸ್. ಐ ಬಾಲಿಕಾಶ್ರಮದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ […]
Read More