ಸಾದ್ವಿಯೊಬ್ಬರ ಮಾತು ನೆನಪಾಗುತ್ತಿದೆ, ಎಲೆಯೊಂದು ಉದುರುತ್ತಾ ಹೇಳಿತು ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಅರಿತು ನಡೆಯುವುದೇ ಜೀವನ’ ಹೌದು, ಒಂದು ಮರಕ್ಕೆ ಮಣ್ಣಿನಿಂದ ಪೋಷಕಾಂಶಗಳು ಯಾವತ್ತಿನವರೆಗೆ ದೊರೆಯುತ್ತದೊ ಅಲ್ಲಿಯವರೆಗೆ ಮರ ಸುದೃಡವಾಗಿ ಬೆಳೆಯುತ್ತದೆ, ನಮ್ಮ ಸಮಾಜದ ನೊಂದ ಮನಕ್ಕೆ ಸಾಂತ್ವಾನದ ನೆರಳ ನೀಡಲು ಬಿತ್ತಿದ ಬೀಜ ಗಿಡವಾಗಿ, ಮರವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದೆಷ್ಟೋ ವರುಷದಿಂದ ಎಲ್ಲರೂ ಜೊತೆಯಾಗಿ ಧಾರೆ ಎರದ ನೀರಿನಿಂದ ನಳನಳಿಸುತ್ತಿದೆ. ನಮಗಿರುವುದು ಒಂದೇ ಬಳಲಿದವರಿಗೆ ನೆರಳು, ಹಸಿದವರಿಗೆ ಹಣ್ಣು, ಸಮಾಜದ ಯುವಕರು ಜರಿದು ಹೋಗದಂತೆ ಅವರನ್ನು ಬಿಗಿಯಾಗಿ ಹಿಡಿದುಕೊಂಡು ಸಮಜವನ್ನು ಬಲಿಷ್ಠಗೊಳಿಸುವ ಚಿಂತನೆ. ನಮ್ಮೀ ಕನಸು ನನಸಾಗಿದೆ, ಯುವವಾಹಿನಿ ಎಂಬ ಮರದ ಅಗತ್ಯತೆ ಮತ್ತು ಆಶ್ರಯ ಅವಶ್ಯವಗಿದೆ. ಹೀಗಾಗಿ ನಮ್ಮೊಳಗೆ ಸೇರುವವರು ಹೆಚ್ಚಾಗಿದ್ದಾರೆ. ಈ ಹಂತದಲ್ಲಿ ನಮ್ಮ ಜವಬ್ದಾರಿಗಳು ಹೆಚ್ಚುತ್ತಿದೆ ಎನ್ನುವುದು ಸತ್ಯ.
ನಮ್ಮ ಯುವವಾಹಿನಿಯ ಘಟಕಗಳ ಹುರುಪು ಕಂಡಾಗ ನನಗೆ ಆಶ್ಚರ್ಯವಾಗುತ್ತಿದೆ, ಏನನ್ನಾದರೂ ಸಾಧಿಸಿ ಬಿಡೋಣ ಅನ್ನುವ ಛಲ ಮೂಡುತ್ತಿದೆ. ಈ ಯುವ ಕುಟುಂಬ ನಮ್ಮ ಜೊತೆಗಿರುವಾಗ ನಮ್ಮಿಂದ ಅಸಾದ್ಯವಾದುದಾರೂ ಏನು? ಎನ್ನುವ ಪ್ರಶ್ನೆ ಮೂಡುತ್ತಿದೆ. ನಮ್ಮ ಕರೆಗೆ ಸ್ಪಂದಿಸುತ್ತಿರುವ ಘಟಕಗಳು ನಮಗೆ ವಿಶ್ರಾಂತಿಯನ್ನೇ ನೀಡುತ್ತಿಲ್ಲ, ವಾರದ ಏಳು ದಿನವೂ ಒಂದೇ ರೀತಿ ಕಾಣುತ್ತಿದೆ. ಯಾವ ಭಾನುವಾರ ಬಿಡುವು ಇದೆ ಎಂದು ಕ್ಯಾಲೆಂಡರ್ ನೋಡಿದರೆ ಮುಂದಿನ ಆಗಸ್ಟ್ ವರೆಗೆ ಬಿಡುವೇ ಇಲ್ಲ, ಎಲ್ಲಾ ದಿನವೂ ಯುವವಾಹಿನಿ ಬಂಧುಗಳೇ ಪಡೆದುಕೊಂಡಿದ್ದಾರೆ. ನಿರಂತರ ಕಾರ್ಯಕ್ರಮಗಳು, ಕ್ರಿಯಾಶೀಲ ಯೋಚನೆಗಳು, ಸಮಾಜಮುಖಿ ಚಿಂತನೆಗಳು, ಸಮಸ್ಯೆಗೆ ಸ್ಪಂದಿಸುವ ತುಡಿತಗಳು ಹೀಗೆ ಯುವವಾಹಿನಿ ಎಗ್ಗೆಗಳು ಒಂದಲ್ಲ ಒಂದು ಕಾರ್ಯಕ್ರಮ ನಡೆಸುತ್ತಲೇ ಇದೆ. ಎಲ್ಲಾ ಘಟಕಗಳಿಗೂ ಒಂದು ಆಸೆ ನನ್ನ ಯುವವಾಹಿನಿ ಕುಟುಂಬವನ್ನು ನಮ್ಮ ಊರಿಗೆ ಆಹ್ವಾನಿಸಬೇಕು ಆತಿಥ್ಯ ನೀಡಬೇಕು ಎನ್ನುವ ಹಂಬಲ ಪರಿಣಾಮ ಅಂತರ್‌ಘಟಕ ಕಾರ್ಯಕ್ರಮಗಳ ಸರಮಾಲೆಯೇ ಇದೆ.
ಈಗಾಗಲೇ ಹೆಚ್ಚಿನ ಘಟಕಗಳು ಪದಗ್ರಹಣ ಮುಗಿಸಿಕೊಂಡಿದೆ, ಇನ್ನುಳಿದ ಘಟಕಗಳು ಮುಂದಿನ ಎಪ್ರಿಲ್ ಮುಗಿಯುವುದರೊಳಗೆ ಪದಗ್ರಹಣ ಮುಗಿಸುವ ಸಿದ್ಧತೆ ನಡೆಸುತ್ತಿದೆ. ಬೆಳುವಾಯಿ ಘಟಕದ ಆಶ್ರಯದಲ್ಲಿ ನಡೆದ ಹಗ್ಗಜಗ್ಗಾಟ ಉತ್ತಮವಾಗಿ ಮೂಡಿ ಬಂದಿದೆ. ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ನಡೆದ ವಧುವರರ ಅನ್ವೇಷಣೆ ಹೊಸ ಇತಿಹಾಸ ಬರೆದಿದೆ. ಈ ಕಾರ್ಯಕ್ರಮ ಯುವವಾಹಿನಿಯ ಜವಬ್ದಾರಿ ಹೆಚ್ಚಿಸಿದೆ ಸಮಾಜದಲ್ಲಿ ನಿರೀಕ್ಷೆ ಉಂಟುಮಾಡಿದೆ. ಮಾಣಿ ಘಟಕದ ಆತಿಥ್ಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಅದ್ಬುತವಾಗಿ ನಡೆದಿದೆ. ಇದರೊಂದಿಗೆ ಯುವವಾಹಿನಿ ಪದಾಧಿಕಾರಿಗಳ ವ್ಯಕ್ತಿತ್ವ ವಿಕಸನ ಶಿಬಿರ ಚೈತನ್ಯ ಅರ್ಥಪೂರ್ಣವಾಗಿ ಕಾಪು ಘಟಕದ ಆತಿಥ್ಯದಲ್ಲಿ ಮೂಡಿ ಬಂದಿದೆ. ಬಜಪೆ ಘಟಕದ ಆತಿಥ್ಯದಲ್ಲಿ ನಡೆದ ರಸಗೀತಾ ಸ್ಪರ್ಧೆಯು ಹೊಸತನ ನೀಡಿದೆ.
ಬಂಟ್ವಾಳ ಘಟಕ ಆತಿಥ್ಯದಲ್ಲಿ ಅನ್ವೇಷಣಾ ರಾಷ್ಟ್ರೀಯ ತರಬೇತಿ ಕಾರ್ಯಾಗಾರ ಹೊಸತನದಿಂದ ಮೂಡಿ ಬಂದಿದೆ. ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಡೆನ್ನಾನ ಡೆನ್ನನ ಶಿಸ್ತು, ಅಚ್ಚುಕಟ್ಟುತನ, ಸಮಯ ಪ್ರಜ್ಞೆ ಮೂಲಕ ಹೊಸ ಇತಿಹಾಸ ಬರೆದಿದೆ.
ಇನ್ನು ಮುಂದೆ ಯುವವಾಹಿನಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ವಿಶುಕುಮಾರ್ ಸಾಹಿತ್ಯ ಸಮ್ಮೇಳನ ನಡೆಯಲಿದೆ, ಜೊತೆಯೆ ಕೂಳೂರು ಘಟಕ ಯುವವಾಹಿನಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯದ ಭರದ ಸಿದ್ಧತೆಯಲ್ಲಿದೆ. ಇದಲ್ಲದೆ ನಾರಾಯಣಗುರು ತತ್ವಪ್ರಚಾರ ನಿರ್ದೇಶಕರ ಆಲೋಚನೆಯಲ್ಲಿ ಮೂಡಿ ಬಂದಿರುವ, ನಾರಾಯಣಗುರು ಅಂದು ಇಂದು ಮುಂದು ಎಂಬ ಕಾರ್ಯಕ್ರಮ ಮಂಗಳೂರು ವಿಶ್ವವಿದ್ಯಾನಿಲಯ, ನಾರಾಯಣಗುರು ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ಪುರಭವನದಲ್ಲಿ ನಡೆದಿದೆ. ಹಿಂದಿನ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ ತಾವು ಮುಂದೆಯೂ ಜೊತೆಗೂಡಿ ಕಾರ್ಯಸಾಧನೆ ಮಾಡೊಣ ಎಂದು ಆಶಿಸುತ್ತೇನೆ.
ಗೌರವ ಸಂಪಾದಕರ ಮಾತು ತುಂಬಾ ಗೌರವಯುತವಾಗಿದೆ