Yuvavahini

JUN 15, 2019 2.19 PM IST

ಸಂಪಾದಕೀಯ : ರಾಜೇಶ್ ಸುವರ್ಣ

ಚಿಂತಕರೊಬ್ಬರ ಆಶಯವಿದೆ, ಸಾಧ್ಯವಾದಷ್ಟು ಓಡು, ಓಡಲು ಸಾದ್ಯವಾಗದೇ ಹೋದರೆ ನಡಿ, ನಡೆಯಲು ಆಗದೇ ಇದ್ದರೆ ತೆವಳಿಕೊಂಡಾದರೂ ಸಾಗು, ಆದರೆ ನಿಲ್ಲಬೇಡ ಎಲ್ಲೂ, ಹೌದು ಹರಿಯುವ ನದಿಯಾಗಲಿ, ಬೆಳೆಯುವ ಸಿರಿಯಾಗಲಿ ನಡೆಯುವ ಮನುಜನೇ ಆಗಲಿ ಎಲ್ಲಿ ತನ್ನ ನಡಿಗೆಯನ್ನು ನಿಲ್ಲಿಸುತ್ತವೆಯೋ ಅಲ್ಲಿ ಜಡತ್ವ ಅಡರಿಕೊಳ್ಳುತ್ತದೆ. ಎಲ್ಲಿಯವರೆಗೆ ನದಿಗೆ ಕ್ರಿಯಾಶೀಲ ಹರಿವು ಇರುತ್ತದೋ, ಎಲ್ಲಿ ಬೆಳೆಯುವ ಸಿರಿಯಲ್ಲಿ ಸೂರ್ಯ ರಶ್ಮಿಯತ್ತ ಮುಖ ಮಾಡುವ ಚಿಂತನೆ ಇರುತ್ತದೋ, ಎಲ್ಲಿಯವರೆಗೆ ಮನುಜನಲ್ಲಿ ದುಡಿಯುವ ಸಕ್ರೀಯವಾಗುವ ಹಂಬಲವಿರುತ್ತದೋ ಅಲ್ಲಿಯ ತನಕ ಆತ ತನ್ನ ಬೆಲೆಯನ್ನು ಉಳಿಸಿಕೊಳ್ಳುತ್ತಾನೆ. ಇಲ್ಲವಾದರೆ ಚಲಾವಣೆ ಇಲ್ಲದ ಹೆಣದಂತಾಗುತ್ತಾನೆ. ಮೌಲ್ಯ ಇದ್ದರೂ, ಬೆಲೆ ಇಲ್ಲದಂತಾಗುತ್ತದೆ.
ಆದರೆ ಯುವವಾಹಿನಿ ಇದಕ್ಕೆ ಹೊರತಾಗಿದೆ. ಇದು ಮೌಢ್ಯ, ಸಾಮಾಜಿಕ ಪಿಡುಗು, ಬಡತನ, ಅನಕ್ಷರತೆಯನ್ನು ಹೊಡೆದುರಳಿಸಲು ಹೋರಾಡುವ ಸೇನಾನಿಗಳ ಪಡೆ. ಇಲ್ಲಿ ನಮಗೆ ವಿಶ್ರಾಂತಿ ಎನ್ನುವುದು ಇಲ್ಲ, ವಿಶ್ರಾಂತಿ ಬಯಸಿದರೆ ವೈರಿ ವಿಜೃಂಭಿಸುತ್ತಾನೆ, ಗುರಿಯಿಂದ ದೃಷ್ಟಿ ತಪ್ಪಿಸಿದರೆ ಶತ್ರು ಮುನ್ನುಗುತ್ತಾನೆ, ಆಗದು ಎಂದರೆ ಹಿಂದಿರುಗಿದರೆ ಗೆಲುವನ್ನು ಬಲಿಕೊಟ್ಟಂತೆ ಸರಿ. ಹಾಗಾಗಿ ಯುವವಾಹಿನಿಯ ಘಟಕದ ಸಾಮಾನ್ಯ ಸದಸ್ಯನಿಂದ ಕೇಂದ್ರ ಸಮಿತಿಯ ಪದಾಧಿಕಾರಿಗಳ ವರೆಗೂ ಎಲ್ಲರದ್ದೂ ಬಿಡುವಿಲ್ಲದ ಫುಲ್ ಟೈಮ್ ದುಡಿಮೆ. ನಮ್ಮ ದುಡಿಮೆಯಲ್ಲಿ ನಮಗೆ ಸಂಬಳ ಇಲ್ಲ, ರಜೆ ಇಲ್ಲ, ಸಮಯದ ಗಡಿ ರೇಖೆ ಇಲ್ಲ, ಇರುವುದೊಂದೇ ಉದಾತ್ತ ಚಿಂತನೆ. ಅದು ನಮ್ಮ ಕಾರ್ಯಕರ್ತರಲ್ಲಿದೆ ಎನ್ನುವುದನ್ನು ನಾ ಎರಡು ವರುಷದಲ್ಲಿ ಅರ್ಥೈಸಿಕೊಂಡಿದ್ದೇನೆ. ಕಳೆದ ವರುಷದ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಈ ವರುಷ ಯುವಸಿಂಚನ ಪತ್ರಿಕೆ ಸಂಪಾದಕನಾಗಿ ಘಟಕ ಘಟಕಗಳ ಒಳ ಹೊರ ಚಿತ್ರಣವನ್ನು ತಿಳಿದುಕೊಂಡಿದ್ದೇನೆ. ಎಲ್ಲರದ್ದೂ ಸಂತೃಪ್ತ ದುಡಿಮೆ. ಯಾಕೆ ಮಾಡಬೇಕು?, ನನಗೇನು ಸಿಗುತ್ತದೆ? ಎಲ್ಲವನ್ನೂ ನಾನೇ ಮಾಡಬೇಕೆ? ಇಂತಹ ಯಾವೊಂದು ಉದ್ಗಾರವೂ ಇಲ್ಲದೆ ನಮ್ಮದು ಎನ್ನುವ ಸತ್‍ಚಿಂತನೆಯಿಂದ 34 ಘಟಕಗಳೂ ದುಡಿಯುತ್ತಿರುವ ಕಾರಣದಿಂದ ಯುವ ಸಿಂಚನ ದಿನೇ ದಿನೇ ತನ್ನ ಗಾತ್ರವನ್ನು ಹಿಗ್ಗಿಸುತ್ತಿದೆ.
ಒಮ್ಮೆ ದೇವರಲ್ಲಿಗೆ ಹೋಗುವ ವಿಚಾರವಾಗಿ ದಾಸರುಗಳ ನಡುವೆ ತೀವ್ರ ಚರ್ಚೆ ನಡೆಯುತ್ತಿದ್ದಂತೆ, ಯಾರು ದೇವರ ಬಳಿ ಹೋಗುತ್ತೀರಿ ಎನ್ನುವ ಪ್ರಶ್ನೆ ಎದುರಾಯಿತು. ಆಗ ಅಲ್ಲಿದ್ದ ಕನಕದಾಸರು ಹೇಳಿದರಂತೆ ನಮ್ಮೊಳಗೆ `ನಾನು’ ಹೋದರೆ ಹೋದೇನು ಎಂದು. ಎಲ್ಲರೂ ಸಿಡಿಮಿಡಿಗೊಂಡರು. ಆದರೆ ಅದರ ಒಳಾರ್ಥ ಇದ್ದದ್ದು ನಮ್ಮೊಳಗೆ ನಾನು ಎನ್ನುವ ಅಹಂಕಾರ ಇದ್ದು ಅದು ಹೋದರೆ ಎಲ್ಲರೂ ಹೊಗಬಹುದೆಂದು. ಇಂದು ನಾವೂ ನಾನು ನನ್ನಿಂದ ಎನ್ನುವ ಅಹಂಕಾರದ ಪೊರೆಯನ್ನು ಕಳಚಿಕೊಂಡು ದುಡಿಯಬೇಕಾಗಿದೆ. ಇಂದು ಸಿಕ್ಕ ಅವಕಾಶ ನನ್ನದು ಅದು ನಿನ್ನೆ ಇನ್ನಾರದ್ದೋ ಬಳಿ ಇತ್ತು ಇಂದು ನನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ, ಹಾಗಿರುವಾಗ ನಾವೆಲ್ಲಾ ನನ್ನಿಂದ…. ನನ್ನಿಂದ….. ಎಂದುಕೊಂಡರೇ ಸಮಾಜದಲ್ಲಿ ಹೆಸರಿದ್ದು ಅಸ್ಥಿತ್ವವೇ ಇಲ್ಲದ ಸಂಘಟನೆಗಳಂತಾಗಬಹುದು ನಮ್ಮ ಯುವವಾಹಿನಿ. ಇಂದು ಯುವವಾಹಿನಿ ಎಲ್ಲರಲ್ಲೂ ಅಮರ ಚೇತನದಂತೆ ಇದೆ ಎಂದಾದರೆ ಅದಕ್ಕೆಮುಖ್ಯ ಕಾರಣ ನಮ್ಮಲ್ಲಿರುವ `ನಾವು’ ಅದನ್ನು ಮುಂದೆಯೂ ಉಳಿಸೋಣ.
ಇಂದು ನನ್ನ ಕೈಯಲಿದ್ದ ಯುವ ಸಿಂಚನ ನಾಳೆ ಇನ್ನೊಬ್ಬರ ಕೈಗೆ ಸೇರಬಹುದು. ಅತ್ತಿತ್ತ ಉರುಳುವಷ್ಟರಲ್ಲಿ ನನ್ನ ಅವಧಿ ಮುಗಿದಿದೆ. ಹೇಗಾಯಿತು? ಏನಾಯಿತು? ಎನ್ನುವುದನ್ನು ಯೋಚಿಸಲೂ ಅವಕಾಶ ಇಲ್ಲದಷ್ಟು ವೇಗವಾಗಿ ಸಮಯ ಕಳೆದಿದೆ. ಈ ಅವಧಿಯಲ್ಲಿ ಅಪೂರ್ವವಾದ ಸಂಚಿಕೆಗಳನ್ನು ನಿಮ್ಮ ಕೈಗಿತ್ತಿದ್ದೇನೆ. ಅದೆಷ್ಟೋ ಮಂದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಅದೆಲ್ಲವೂ ನಿಮಗೆ ಸಮರ್ಪಿತ. ಏಕೆಂದರೆ ನಮಗೆ ಬೇಕಾಗಿರುವ ಎಲ್ಲಾ ವಿಷಯ, ವಿಚಾರ, ಸುದ್ದಿಗಳನ್ನು ನೀಡಿದವರು ನೀವು, ಜೋಡಿಸಿ ಮುದ್ರಿಸಿದವರು ದಿನಕರ್ ಅದನ್ನು ಕಲೆ ಹಾಕಿ ಹೊಸ ರೂಪ ನೀಡುವ ಕೆಲಸ ನಾನು ಮಾಡಿದ್ದೇನೆ. ಹಾಗಾಗಿ ಮೆಚ್ಚುಗೆಳೆಲ್ಲವೂ ಯುವವಾಹಿನಿಯ ಪ್ರತಿಯೊಬ್ಬ ಸದಸ್ಯನಿಗೂ ಸಲ್ಲಬೇಕು. ಮಗು ನಡೆಯುವಾಗ ಮೆಟ್ಟಿಲನ್ನು ಎಡವಿ ಬಿದ್ದರೆ ಮೆಟ್ಟಿಲಿಗೆ ಬೈಯ್ಯಬೇಡಿ ಮಗುವಿಗೆ ತಿಳಿಹೇಳಿ ನಾಳೆ ಅದು ಮೆಟ್ಟಿಲ ಬಳಿ ಬರುವಾಗ ಅದನ್ನು ದಾಟಿಕೊಳ್ಳುತ್ತದೆ, ಅತೆಂಯೇ ನಮ್ಮವರೂ ತಪ್ಪಿದರೆ ಅಮ್ಮನಂತೆ ತಿದ್ದಿ, ಗುರುವಿನಂತೆ ದಾರಿ ತೋರಿ. ಆಗ ನಮ್ಮ ಉದ್ದೇಶದ ಗುರಿಯನ್ನು ಬಲು ಬೇಗನೇ ತಲುಪಲು ಸಾಧ್ಯ.
ಯುವಸಿಂಚನದ ಎಲ್ಲಾ ಕೆಲಸಕಾರ್ಯದ ಹಿಂದೆ ಸಹಕಾರ ನೀಡುತ್ತಿರುವ ಸಂಪಾದಕೀಯ ಮಂಡಳಿ ಸದಸ್ಯರು, ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು, ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿಯವರಿಗೆ ಮನದಾಳದ ವಂದನೆಗಳು.

ಸುದ್ದಿ ನದಿಯಂತೆ ಹರಿದು ಬರುತ್ತಿದ್ದ ಕಾರಣ ದಿನೇ ದಿನೇ ಪುಟಗಳ ಸಂಖ್ಯೆ ಹೆಚ್ಚಳ ಮಾಡುತ್ತಾ ಇಂದು ಈ ಹಂತಕ್ಕೆ ಯುವಸಿಂಚನ ನಿಂತಿದೆ, ಇನ್ನಷ್ಟು ಉಳಿದು ಹೋದರೆ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುವ ಅದಕ್ಕೆ ಬೇಜಾರು ಬೇಡ. ನಾವೆಲ್ಲ ಒಂದೇ ದೋಣಿಯ ಪಯಣಿಗರು, ಇಂದು ಸೂರ್ಯ ಮುಳುಗಿದರೇನಂತೆ ಮತ್ತೆ ನಾಳೆ ಸೂರ್ಯೋದಯ ಇದೆಯಲ್ಲವೇ? ನಾಳಿನ ದಿನವನ್ನೂ ಹೊಸತನದಿಂದ ಕಳೆಯೋಣ ಎನ್ನುವುದು ನನ್ನ ಆಶಯ.

 —ರಾಜೇಶ್ ಸುವರ್ಣ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!