23-05-2017, 12:58 PM
ವಿಶುಕುಮಾರ್ – ಯಾವುದೇ ಕೃತಿ ರಚಿಸಲಿ. ಅದು ಸಮಾಜವನ್ನು ಅಲ್ಲೋಲ ಕಲ್ಲೋಲವುಂಟು ಮಾಡುತ್ತದೆ; ಹಾಗೇ ವಿವಾದದ ಸುಳಿಯನ್ನು ಎಬ್ಬಿಸುತ್ತದೆ. ಅವರ ಬರವಣಿಗೆಯ ಶಕ್ತಿಯ ಜತೆಗೆ, ಸಮಾಜದಲ್ಲಿ ನಡೆಯುವ ಸತ್ಯ ಘಟನೆಯ ಒಂದು ಸೂಕ್ಷ್ಮದ ಎಳೆಯನ್ನು ಎತ್ತಿ, ಅದನ್ನು ತನ್ನದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತ, ವಿವರಿಸುವ ಧಾಟಿ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ. ಸುಮಾರು 16 ಕಾದಂಬರಿಗಳನ್ನು ರಚಿಸಿದ್ದಾರೆ. ಎಲ್ಲವೂ ಒಂದಕ್ಕೊಂದು ವಿಭಿನ್ನ. ನಮ್ಮ ಬದುಕಿನ ಸತ್ಯ ಘಟನೆಗಳೇ- “ ಕರಾವಳಿ” ,” ಮದರ್ ” , ” ಪ್ರಜೆಗಳು […]
Read More
17-05-2017, 3:15 PM
ತುಳುನಾಡಿನ ಮೂಲ ಜನಾಂಗಗಳ ಬಗ್ಗೆ ಕೆದಕಲು ಹೊರಟಾಗ ಮೇಲ್ಪಂಕ್ತಿಯಲ್ಲಿ ನಿಲ್ಲುವವರು ಬಿಲ್ಲವ ಜನಾಂಗ. ಇದಕ್ಕೆ ಪೂರಕವಾಗಿ ದೈವಗಳ ಪಾರ್ದನದಲ್ಲಿ ಪೂರಕ ಮೌಖಿಕ ದಾಖಲೆ ಸಿಗುತ್ತವೆ. ಒಂದೊಮ್ಮೆ ತುಳುನಾಡಿನ ಹೆಚ್ಚಿನ ದೈವಗಳು ಬಿಲ್ಲವರ ಭಕ್ತಿಗೆ ಮತ್ತು ಮುಗ್ಧತೆಗೆ ಮೆಚ್ಚಿ ಬೆಂಬತ್ತಿ ಬಂದವುಗಳೇ ಆಗಿದೆ. ತುಳುನಾಡಿನ ಸಂಸ್ಕøತಿಗೆ ಬಿಲ್ಲವರ ಕೊಡುಗೆ ಅನಂತವಾಗಿರುವಂತದ್ದು. ಒಂದೊಮ್ಮೆ ಭವ್ಯತೆಯಿಂದ ಮೆರೆದವರು ಕಾಲನ ಕೈಗೆ ಮತ್ತು ಹೊರಗಿನವರ ದಾಳಿಗೆ ತುತ್ತಾಗಿ ತಮ್ಮ ಅಸ್ಥಿತ್ವವನ್ನೇ ಕಳಕೊಂಡು ಪರಕೀಯರಾದವರು. ಆದರೆ ಒಂದು ಕಾಲದಲ್ಲಿ ತಮ್ಮ ನ್ಯಾಯಪರತೆ, ಸತ್ಯಸಂಧತೆ ಮತ್ತು […]
Read More
17-05-2017, 3:01 PM
ಪ್ರೀತಿಯ ವಾಚಕರೇ, ಇತ್ತೀಚೆಗೆ ನನ್ನ ಬಾಲ್ಯ ಸ್ನೇಹಿತರೊಬ್ಬರನ್ನು ಭೇಟಿಯಾಗುವ ಸಂದರ್ಭ ಒದಗಿ ಬಂತು. ಇವರು ವೃತ್ತಿಯಲ್ಲಿ ದಂತ ವೈದ್ಯರು. ಬಾಲ್ಯ ಜೀವನವನ್ನು ನೆನಪಿಸುತ್ತಾ ಆ ದಿನಗಳ ಮೆಲುಕು ಹಾಕುತ್ತಿದ್ದೆವು. ಈ ಸಂದರ್ಭದಲ್ಲಿ ಯುವಕನೊಬ್ಬ ವೈದ್ಯರಲ್ಲಿಗೆ ಬಂದು ತನ್ನ ಹಲ್ಲು ನೋವಿನ ಸಮಸ್ಯೆಯನ್ನು ತೋಡಿಕೊಂಡರು. ಒಳಗಿನಿಂದಲೇ ವೈದ್ಯರು ಯುವಕನನ್ನು ಪರೀಕ್ಷಿಸಿ ಹೊರಬಂದು ಇನ್ನು ನೀವು ಗಟ್ಟಿ ವಸ್ತುಗಳನ್ನು ತಿನ್ನುವ ಹಾಗಿಲ್ಲ. ಮೆತ್ತಗಿನ ವಸ್ತುಗಳನ್ನು ಮಾತ್ರ ಜಗಿಯಬೇಕು ಎನ್ನುತ್ತಾ ಔಷಧಿ ಬರೆದು ಕಳುಹಿಸಿಕೊಟ್ಟರು. ವೈದ್ಯರು ನನ್ನ ಎದುರುಗಡೆ ಇದ್ದ ಅವರ […]
Read More
17-05-2017, 2:52 PM
ಆತ್ಮೀಯರೇ, ಮಕ್ಕಳ ಪರೀಕ್ಷೆಯ ಸಮಯ ಕಳೆದು ನಾವೆಲ್ಲರೂ ಹಾಯಾಗಿ ಮಕ್ಕಳ ರಜೆಯ ಮಜಾ ಅನುಭವಿಸುತ್ತಿದ್ದೇವೆ. ಈ ಸಮಯದಲ್ಲಿ ಕುಟುಂಬದವರೆಲ್ಲರೂ ಒಟ್ಟುಗೂಡಿಕೊಂಡು ಯಾವುದಾದರೂ ಧಾರ್ಮಿಕ ಕ್ಷೇತ್ರಕ್ಕೆ ಹೋಗಿ, ಪರೀಕ್ಷೆ ಬರೆದ ಮಕ್ಕಳಿಗೆ ಒಳ್ಳೆಯ ಅಂಕ ದೊರೆಯುವಂತೆ ಹಾಗೂ ಎಲ್ಲರಿಗೂ ಒಳ್ಳೆಯದಾಗುವಂತೆ ಬೇಡುವುದರ ಜೊತೆಗೆ ನಮ್ಮ ಕೌಟುಂಬಿಕ ಸಂಬಂಧಗಳನ್ನು ಅಭಿವೃದ್ಧಿ ಪಡಿಸಿಕೊಂಡರೆ ಬಹಳ ಒಳ್ಳೆಯದು. ಪರೀಕ್ಷೆಯ ಫಲಿತಾಂಶ ಬಂದ ಮೇಲೆ ಒಳ್ಳೆಯ ಅಂಕ ಪಡೆದ ಮಕ್ಕಳನ್ನು ಸನ್ಮಾನಿಸುವ ಪರಿಪಾಠವನ್ನು ಇಟ್ಟುಕೊಳ್ಳೋಣ. ಅದೇ ರೀತಿ ಸ್ವಲ್ಪ ಕಡಿಮೆ ಅಂಕ ಪಡೆದ ಮಕ್ಕಳನ್ನು […]
Read More
17-05-2017, 2:47 PM
ಮನುಷ್ಯ ಜೀವನ ಶ್ರೇಷ್ಠ ಎಂಬ ಭಾವನೆಯಿಂದ ಬೀಗುತ್ತಿರುವ ನಾವು ನೀವೆಲ್ಲರೂ ಕೆಲವೊಂದು ಸಂದರ್ಭಗಳಲ್ಲಿ ಆಂತರಿಕ ಯಾ ಬಾಹ್ಯ ಒತ್ತಡಗಳಿಂದ ರೋಸಿ ಹೋಗಿ, ಯಾವುದಾದರೂ ಪ್ರಾಣಿಯೋ, ಪಕ್ಷಿಯೋ ಆಗಿ ಹುಟ್ಟುತ್ತಿದ್ದರೆ ಈ ಎಲ್ಲಾ ಸಮಸ್ಯೆಯೇ ಇರುತ್ತಿರಲಿಲ್ಲವೆಂದು ಬಾಲಿಶವಾಗಿ ಯೋಚಿಸೋದು ಸಹಜ ತಾನೇ? ಭೂಮಿಯು ಗುರುತ್ವಾಕರ್ಷಣೆಯ ಬಲದಿಂದ ಸೂರ್ಯನ ಸುತ್ತ ತಿರುಗುತ್ತಿದ್ದರೂ ನಮ್ಮ ಅರಿವಿಗೆ ಬಾರದೆ ಒಂದು ರೀತಿಯಲ್ಲಿ ಯಾವ ದೈಹಿಕ ತಾಪತ್ರಯವೂ ಇರದೆ ಬದುಕುವ ಸೌಭಾಗ್ಯವುಳ್ಳವರು ನಾವು. ಅದೇ ರೀತಿ ನಮ್ಮ ಮನಸ್ಸೆಂಬ ಗುರುತ್ವಾಕರ್ಷಣೆಯ ಬಲ ಸ್ಥಿಮಿತದಲ್ಲಿದ್ದರೆ ಮಾತ್ರ […]
Read More
15-05-2017, 2:44 PM
” ನೀವು ಬ್ರಾಹ್ಮಣ ಅಲ್ಲ …!” ” ವಿಶುಕುಮಾರ್ – ಅಷ್ಟು ಸುಲಭವಾಗಿ ನಮ್ಮನ್ನು ಒಪ್ಪಿಕೊಳ್ಳಲು ತಯಾರಿಲ್ಲ” ಎಂದು ಹೇಳಿದ್ದೆ. ಅಗಲ ಫ್ರೇಮಿನ ಕನ್ನಡಕದ ಒಳಗಡೆ ತೀಕ್ಷಣ ಕಣ್ಣುಗಳು ನಮ್ಮನ್ನು ಅಳೆಯುವಂತಿದ್ದವು. ” ರೂಂಗೆ ಬಾ ನಿಮ್ಮೊಡನೆ ಸ್ವಲ್ಪ ಮಾತಾಡಬೇಕು” ಎಂದು ನನ್ನನ್ನು ಅವರ ರೂಂಗೆ ಕರೆದೊಯ್ದರು. ನಾನು ಅವರನ್ನು ಹಿಂಬಾಲಿಸಿದೆ . ಆದರೆ ರೂಂನ ಒಳಗಡೆ ಮತ್ತೊಬ್ಬ ವ್ಯಕ್ತಿ ಕುಳಿತಿದ್ದರು. ಅವರನ್ನು ವಿಶುಕುಮಾರ್ ಪರಿಚಯಿಸಿದರು. ” ಇವರು ಆರ್. ನರಸಿಂಹ. ನಮ್ಮ ಸ್ನೇಹಿತರು. ನಾವು ” […]
Read More
15-05-2017, 7:07 AM
ಬಂಟ್ವಾಳ ತಾಲೂಕಿನ ಕಕ್ಯಪದವು LCR ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ರೋಹಿನಾಥ್ ಪಾದೆ ಹಾಗೂ ಬಬಿತಾ ದಂಪತಿಗಳ ಸುಪುತ್ರಿ ಜಯಾನಿ ರೋಹಿನಾಥ್ ಈ ಬಾರಿಯ SSLC ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. SSLC ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿರುವುದಕ್ಕೆ ಖುಷಿಯಾಗಿದೆ. ಮುಂದೆ ಪದವಿಪೂರ್ವ ಶಿಕ್ಷಣ ಪಡೆಯಲು ಸಂತ ಎಲೋಷಿಯಸ್ ಕಾಲೇಜಿಗೆ ದಾಖಲಾಗಿದ್ದೇನೆ, ವೈದ್ಯೆಯಾಗಬೇಕೆಂಬ ಗುರಿ ಇದೆ. ನಿಗದಿತ ವೇಳಾಪಟ್ಟಿ ಕ್ರಮಬದ್ಧ ಓದಿನಿಂದ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ. ಆತ್ಮವಿಶ್ವಾಸದಿಂದ ಓದಿದಾಗ […]
Read More
10-04-2017, 11:24 AM
ಪ್ರೀತಿಯ ವಾಚಕರೇ, ಸಮಯ ಸಂದರ್ಭಗಳು ಒಂದೇ ರೀತಿ ಇರುವುದಿಲ್ಲ. ಬದಲಾಗುತ್ತಿರುವ ಈ ಕಾಲದಲ್ಲಿ ಅದೆಷ್ಟೋ ಬಾರಿ ನಾವು ಮಾಡುವ ಕಾರ್ಯದಲ್ಲಿ ನಮಗೆ ವಿರುದ್ಧವಾಗಿ ನಡೆಯಬಹುದು. ಅಂತಹ ಪರಿಸ್ಥಿತಿ ಬಂದಾಗ ದುಃಖಿಸುತ್ತಾ ಇರುವ ಬದಲು, ಎದುರಾದ ಪರಿಸ್ಥಿತಿಯನ್ನು ತನ್ನ ಕಡೆ ಪರಿವರ್ತನೆ ಮಾಡಿಸಿಕೊಳ್ಳುವವನೆ ನಿಜವಾದ ಜಾಣ. ಎಷ್ಟೇ ಗಂಭೀರವಾದ ಸೋಲನ್ನು ಗೆಲುವಾಗಿ ದಕ್ಕಿಸಿಕೊಂಡಿರುವ ಅಗ್ರಗಣ್ಯರು ಈ ಪ್ರಪಂಚದಲ್ಲಿ ತುಂಬಾ ಜನ ಇದ್ದಾರೆ. ಅಂತಹವರನ್ನು ಅನುಕರಿಸಿಕೊಂಡು ತನ್ನ ಯಾವುದೇ ಪ್ರತಿಕೂಲ ಪರಿಸ್ಥಿತಿಗಳನ್ನು ಸಕಾರಾತ್ಮಕವಾಗಿ ಅರ್ಥಮಾಡಿಕೊಂಡು ಮನಸ್ಸಿನ ಮೇಲೆ ಒತ್ತಡ ಹಾಕಿಕೊಳ್ಳದೆ, […]
Read More
10-04-2017, 4:06 AM
ಮದರಾಸಿನ ’ಚಂದಮಾಮ’ ಪಬ್ಲಿಕೇಶನ್ರವರು ಕನ್ನಡದಲ್ಲಿ ’ವಿಜಯಚಿತ್ರ’ ಸಿನೀಮ ಮಾಸಿಕ ಮತ್ತು ವನಿತಾ ಮಹಿಳಾ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು. ರವಿರಾಜ ಅಜ್ರಿಯವರು 1978 ರಲ್ಲಿ ಈ ಪತ್ರಿಕೆಗಳಿಗೆ ಕೆಲಸಕ್ಕೆ ಸೇರಿ 1983 ರ ತನಕ ಅಲ್ಲಿ ಸೇವೆ ಸಲ್ಲಿಸಿದರು. 1983 ರಲ್ಲಿ ಖ್ಯಾತ ಪತ್ರಕರ್ತ ದಿ| ಎಸ್ ವಿಜಯಶೀಲ ರಾವ್ ಅವರ ’ಮುಂಜಾನೆ’ ಕನ್ನಡ ದಿನ ಪತ್ರಿಕೆಗೆ ಸೇರಿದರು. ಇದು ಸಿನೀಮ ಪತ್ರಿಕೆಯಾಗಿದ್ದು ಇಲ್ಲಿ ಸುಮಾರು ಮೂರು ವರ್ಷ ಕೆಲಸ ನಿರ್ವಹಿಸಿದರು. ಚಂದಮಾಮ ಪಬ್ಲಿಕೇಶನ್ನ ಮಾಲಕ ವಿಶ್ವನಾಥ ರೆಡ್ಡಿಯವರು ’ವಿಜಯಚಿತ್ರ’ ಪತ್ರಿಕೆಯ ಕಚೇರಿಯನ್ನು ಬೆಂಗಳೂರಿನ […]
Read More
10-04-2017, 4:04 AM
ಕಲಿಯುತ್ತಿರುವ ಮಕ್ಕಳೆಲ್ಲರೂ ವಾರ್ಷಿಕ ಪರೀಕ್ಷೆಗಳನ್ನು ಎದುರಿಸುತ್ತಿರುವಂತಹ ಸಮಯದಲ್ಲಿ ನಾವಿದ್ದೇವೆ. ಇಂತಹ ಸಮಯದಲ್ಲಿ ಹೆತ್ತವರ ಪಾತ್ರ ಬಹಳ ಮುಖ್ಯವಾದುದು. ನಾವು ಮಕ್ಕಳಿಗೆ ಓದು ಓದು ಎನ್ನುವುದನ್ನು ಬಿಟ್ಟರೆ ಬೇರೇನ್ನನ್ನೂ ಮಾಡುವುದಿಲ್ಲ. ಓದುವ ಮಕ್ಕಳಿರುವ ಮನೆಯವರು ಕೆಲವು ಶಿಷ್ಠಾಚಾರಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ. * ಮಕ್ಕಳಿಗೆ ಓದಲು ಶಾಂತವಾದ ಪರಿಸರವನ್ನು ಒದಗಿಸಬೇಕು. * ಮಕ್ಕಳು ಓದುವ ಸಮಯದಲ್ಲಿ ಆದಷ್ಟು ಟಿ.ವಿ. ಬಂದ್ ಮಾಡಿದರೆ ಒಳ್ಳೆಯದು. * ಮಕ್ಕಳು ಓದುತ್ತಿರುವಾಗ ನಾವು ಕೂಡಾ ಯಾವುದಾದರು ಪುಸ್ತಕ ಅಥವಾ ಪೇಪರ್ ಹಿಡಿದುಕೊಂಡು ಅವರ […]
Read More