Yuvavahini

MAY 17, 2017 3.01 PM IST

ಗಂಗಾಧರ ಪೂಜಾರಿ -ಸಿಂಚನ: ಮೇ 2017

ಸಂಪಾದಕರ ಮಾತು-ಗಂಗಾಧರ ಪೂಜಾರಿ

ಗಂಗಾಧರ ಪೂಜಾರಿ ಸಂಪಾದಕರು ,ಸಿಂಚನ ಪತ್ರಿಕೆ

ಪ್ರೀತಿಯ ವಾಚಕರೇ,
ಇತ್ತೀಚೆಗೆ ನನ್ನ ಬಾಲ್ಯ ಸ್ನೇಹಿತರೊಬ್ಬರನ್ನು ಭೇಟಿಯಾಗುವ ಸಂದರ್ಭ ಒದಗಿ ಬಂತು. ಇವರು ವೃತ್ತಿಯಲ್ಲಿ ದಂತ ವೈದ್ಯರು. ಬಾಲ್ಯ ಜೀವನವನ್ನು ನೆನಪಿಸುತ್ತಾ ಆ ದಿನಗಳ ಮೆಲುಕು ಹಾಕುತ್ತಿದ್ದೆವು.
ಈ ಸಂದರ್ಭದಲ್ಲಿ ಯುವಕನೊಬ್ಬ ವೈದ್ಯರಲ್ಲಿಗೆ ಬಂದು ತನ್ನ ಹಲ್ಲು ನೋವಿನ ಸಮಸ್ಯೆಯನ್ನು ತೋಡಿಕೊಂಡರು. ಒಳಗಿನಿಂದಲೇ ವೈದ್ಯರು ಯುವಕನನ್ನು ಪರೀಕ್ಷಿಸಿ ಹೊರಬಂದು ಇನ್ನು ನೀವು ಗಟ್ಟಿ ವಸ್ತುಗಳನ್ನು ತಿನ್ನುವ ಹಾಗಿಲ್ಲ. ಮೆತ್ತಗಿನ ವಸ್ತುಗಳನ್ನು ಮಾತ್ರ ಜಗಿಯಬೇಕು ಎನ್ನುತ್ತಾ ಔಷಧಿ ಬರೆದು ಕಳುಹಿಸಿಕೊಟ್ಟರು. ವೈದ್ಯರು ನನ್ನ ಎದುರುಗಡೆ ಇದ್ದ ಅವರ ಆಸನದಲ್ಲಿ ಕುಳಿತುಕೊಂಡರು. ಈ ಸಂದರ್ಭದಲ್ಲಿ ನನಗೊಂದು ಪ್ರಶ್ನೆ ಕಾಡತೊಡಗಿತು. ನೇರವಾಗಿ ವೈದ್ಯರಲ್ಲಿ ಕೇಳಿದೆ. ಅಲ್ಲ ನಿಮ್ಮಲ್ಲಿಗೆ ಬಂದವ ಯುವಕ. ಅವನಿಗೆ ಗಟ್ಟಿ ವಸ್ತುಗಳನ್ನು ತಿನ್ನಬಾರದು ಎಂದಿರಲ್ಲ, ಎಂದು. ಆಗ ವೈದ್ಯರು, ಅವನ ಬಾಯಲ್ಲಿರುವ ಹಲ್ಲಿನ ಬುಡಗಳು ಒಂದೂ ಗಟ್ಟಿಯಾಗಿಲ್ಲ. ಬಹಳ ಮೆತ್ತಗಿದೆ. ಅದಕ್ಕಾಗಿ ಹೇಳಿದೆ ಎಂದರು. ಇದಕ್ಕೆ ಕಾರಣವನ್ನು ಕೇಳಿದೆ. ವೈದ್ಯರು ಸತ್ಯವಾದ ಉತ್ತರವನ್ನೇ ಹೇಳಿದರು.
ಮೊದಲಿನ ಕಾಲದ ಜನರು ಬಹಳ ಶ್ರಮಜೀವಿಗಳಾಗಿ ಜೀವಿಸುತ್ತಿದ್ದರು. ತಮ್ಮ ತಮ್ಮ ದೇಹಕ್ಕೆ ಸಂಬಂಧಪಟ್ಟ ಅಂಗಾಂಗಗಳ ಬೆಳವಣಿಗೆಗೆ ಆ ರೀತಿಯ ಆಯಾಮಗಳ ಮುಖಾಂತರ ಕೆಲಸ ಮಾಡುತ್ತಿದ್ದರು. ನಿಜವಾಗಿ ಹೇಳಬೇಕೆಂದರೆ ದೇವರು ಪ್ರಾಣಿಗಳನ್ನು ಸೃಷ್ಟಿಸುವಾಗ ಅವುಗಳ ಬೆಳವಣಿಗೆಗೆ ಬೇಕಾಗುವ ಪ್ರಕೃತಿ ಸಂಪನ್ಮೂಲಗಳನ್ನು ಸೃಷ್ಟಿಸಿರುತ್ತಾನೆ. ಹಿಂದಿನ ಕಾಲದ ಜನರು ಇವುಗಳ ಸಂಪೂರ್ಣ ಉಪಯೋಗವನ್ನು ಪಡೆಯುತ್ತಿದ್ದರು. ನಮ್ಮ ಹಲ್ಲಿನ ಮುಖಾಂತರ ಗಟ್ಟಿ ವಸ್ತುಗಳನ್ನು ಜಗಿದು ಜೀರ್ಣಿಸಿಕೊಳ್ಳುತ್ತಿದ್ದರು. ಮೂಳೆ ಸಂದುಗಳ ರಕ್ಷಣೆಗೋಸ್ಕರ ಬೆವರು ಸುರಿಸಿ ದುಡಿಯುತ್ತಿದ್ದರು. ಇದರಿಂದ ನಮ್ಮ ಅಜ್ಜ-ಅಜ್ಜಿಯಂದಿರು ಬಾಯಲ್ಲಿ ಸಂಪೂರ್ಣ ಹಲ್ಲುಗಳೊಂದಿಗೆ ಗಟ್ಟಿ ಮುಟ್ಟಾಗಿ ಬಾಳುತ್ತಿದ್ದರು.
ಆಗ ನನಗೆ ನೆನಪಾದುದ್ದು ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಒಲೆಯಲ್ಲಿ ಕಾಯಿಸಿದ ಹುಣಸೆ ಬೀಜ, ನೋಕಟೆಗಳನ್ನು ಕಿಸೆಯಲ್ಲಿ ತುಂಬಿಸಿಕೊಂಡು ಎಲ್ಲ ಸ್ನೇಹಿತರೊಡನೆ ಹಂಚಿ ತಿನ್ನುತ್ತಿದ್ದ ಸಂದರ್ಭ, ಆದ್ದರಿಂದಲೇ ನನ್ನ ಹಲ್ಲುಗಳು ಈಗಲೂ ಗಟ್ಟಿ ವಸ್ತುವನ್ನು ಜಗಿದು ತಿನ್ನಲು ಯೋಗ್ಯವಾಗಿದೆ ಎಂದು ಸಮಾಧಾನವಾಯಿತು.
ಇನ್ನೊಂದು ಕಡೆ ಯೋಚಿಸುವಾಗ ಫಾಸ್ಟ್‍ಫುಡ್ ಕಾರ್ಖಾನೆಯಲ್ಲಿ ತಯಾರಾಗುವ ಮೆದು ಆಹಾರಗಳನ್ನು ತಿನ್ನುತ್ತಿರುವ ಇಂದಿನ ಜನಾಂಗ ತನ್ನ ದೇಹದ ಆರೋಗ್ಯವನ್ನು ದಿನದಿಂದ ದಿನಕ್ಕೆ ಕೆಡಿಸುತ್ತಾ, ಹೆಸರೇ ಇಲ್ಲದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ವೈದ್ಯರು ಹೇಳಿದಂತೆ ಸೃಷ್ಟಿಕರ್ತನು ತನ್ನ ಜವಾಬ್ದಾರಿಯನ್ನು ಸರಿಯಾಗಿಯೇ ಮಾಡಿರುತ್ತಾನೆ. ಆದರೆ ಮಾನವ ಮಾತ್ರ ವಿರುದ್ಧವಾಗಿಯೇ ವ್ಯವಹರಿಸುತ್ತಾ ದೇವರಿಗೆ ಸವಾ ಲಾಗಿ ನಿಲ್ಲಲು ಪ್ರಯತ್ನಿಸುತ್ತಾನೆ. ಎಲ್ಲದರಲ್ಲೂ ಇದು ನಡೆಯಲ್ಲ ಎಂಬ ಸತ್ಯವನ್ನು ಮಾತ್ರ ನಾವು ಅರಿಯಬೇಕು. ಬರೇ ಫಾಸ್ಟ್‍ಫುಡ್ ನಂತ ಮೆದು ಆಹಾರವನ್ನೇ ಅವಲಂಭಿಸದೆ ಪ್ರಕೃತಿಯ ಮೂಲ ವಸ್ತುಗಳನ್ನು ನಾವು ನಮ್ಮ ಜೀವನದಲ್ಲಿ ಉಪಯೋಗಿಸಿಕೊಂಡಾಗ ಮಾತ್ರ ಪ್ರಕೃತಿಯನ್ನು ಚೆನ್ನಾಗಿ ಉಳಿಸಿಕೊಳ್ಳಬಹುದು ಮತ್ತು ಆರೋಗ್ಯವಂತ ಜೀವನವನ್ನು ನಡೆಸಲು ಪ್ರಯತ್ನಿಸೋಣ ಅಲ್ಲವೆ.
ಕಳೆದ ಸಂಚಿಕೆಯಲ್ಲಿ ಪ್ರಕಟವಾದ “ನಾವು ನೀವೆಲ್ಲರೂ ಮಾನವರಾಗೋಣ” ಎಂಬ ಆಶಯ ಲೇಖನದ ಮುಖಾಂತರ ಮಾನವ ಜೀವನದ ಮೌಲ್ಯಗಳನ್ನು ಎತ್ತಿ ತೋರಿಸಿದ ಪ್ರೊ. ಕೇಶವ ಎಚ್. ಇವರಿಗೂ “ಆಚಾರವಿಲ್ಲದ ನಾಲಿಗೆ” ಎಂಬ ಲೇಖನವನ್ನು ನೀಡಿರುವ ರಾಕೇಶ್ ಕುಮಾರ್ ಮತ್ತು “ವಿಶುಕುಮಾರ್ ಹೀಗೊಂದು ನೆನಪು”, ಲೇಖನ ನೀಡಿ ಯುವಸಿಂಚನವನ್ನು ಶೃಂಗಾರಗೊಳಿಸಲು ಪ್ರಾರಂಭಿಸಿರುವ ವಿಶುಕುಮಾರ್‍ರವರ ನಿಕಟವರ್ತಿ ರವಿರಾಜ ಅಜ್ರಿಯ ವರಿಗೂ ಯುವಸಿಂಚನ ಬಳಗದ ನಮನಗಳು. ಈ ಸಂಚಿಕೆಯಲ್ಲಿ ‘ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ’ ಎಂಬ ಆಶಯ ಲೇಖನ ದೊಂದಿಗೆ ನಮ್ಮ ವಿವಿಧ ಘಟಕಗಳ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಚಿತ್ರಣ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಅನಿಸಿಕೆ, ಸಲಹೆಗಳೇ ನಮಗೆ ರಕ್ಷೆ. ದಯವಿಟ್ಟು ಮಾತನಾಡಿಸುವಿರಿ ತಾನೆ?

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!