Yuvavahini

JUN 15, 2017 12.18 PM IST

ಯುವಸಿಂಚನ :-ಜೂನ್ 2017

ಸಂಪಾದಕರ ಮಾತು:- ಗಂಗಾಧರ ಪೂಜಾರಿ

ಗಂಗಾಧರ ಪೂಜಾರಿ ಸಂಪಾದಕರು ಯುವಸಿಂಚನ

ಪ್ರೀಯ ಓದುಗರೇ,
ಜಗತ್ತನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಯೊಬ್ಬರಲ್ಲೂ ನಮಗೆ ಕಾಣಸಿಗುವುದು ಆಸೆ ಮತ್ತು ಸ್ವಾರ್ಥದಿಂದ ಕೂಡಿದ ಜೀವನ. ಭೂಮಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಿಗೂ ಸ್ವಾರ್ಥ ಇರಲೇಬೇಕು. ಹಾಗಂತ ಅದು ಎಲ್ಲೆ ಮೀರಿರಬಾರದು. ನಾನು, ನಮ್ಮವರಷ್ಟೇ ಚೆನ್ನಾಗಿದ್ದರೆ ಸಾಕು ಎಂದು ಯೋಚಿಸಿ ಬೇರೆಯವರ ಹಿತಾಸಕ್ತಿಯನ್ನು ಬಲಿಕೊಡುವವರು ಅದೆಷ್ಟೋ ಜನ. ಇಂತಹ ಸ್ವಾರ್ಥವೆಂಬ ಬೆಂಕಿಯ ಬಳಿ ಶಾಂತಿ, ನೆಮ್ಮದಿ, ಸಹಬಾಳ್ವೆ ಎಂಬ ವಿಷಯವೇ ಇರುವುದಿಲ್ಲ. ಬದಲಾಗಿ ಅದು ನಮ್ಮನ್ನು ಸುಟ್ಟು ಭಸ್ಮ ಮಾಡುತ್ತದೆ. ನಾವು ನಮ್ಮವರು ಜೀವಿಸಲು ಸಾಧ್ಯವಾಗುವಷ್ಟು, ಹಣ, ಆಸ್ತಿ, ಕೂಡಿಟ್ಟರೆ ಸಾಕಾಗುವುದಿಲ್ಲವೇ? ಅದರ ಬದಲು ಲೆಕ್ಕವಿಲ್ಲದಷ್ಟು ಹಣ, ಒಡವೆಗಳನ್ನು ಬೀರುಗಳಲ್ಲಿ, ಪೆಟ್ಟಿಗೆಗಳಲ್ಲಿ, ನೆಲ ಮಾಳಿಗೆಯಲ್ಲಿ, ಗೋಡೆಗಳಲ್ಲಿ ಕನ್ನಕೊರೆದು ಅದರೊಳಗಡೆ ತುಂಬಿಸಿಡುವುದು ಯಾಕೆ ಬೇಕು? ಇನ್ನೂ ಕೆಲವು ಪ್ರಚಾರ ಪ್ರಿಯರು ದೇವರ ಹೆಸರಿನಲ್ಲಿ ಲಕ್ಷಗಟ್ಟಲೆ ದೇವಸ್ಥಾನಗಳಿಗೆ ಸುರಿದು ಒಂದು ರೀತಿಯ ಸಂತೋಷವನ್ನು ಪಡೆಯುತ್ತಾರೆ. ಆ ಸಂತೋಷ ಶಾಶ್ವತವಲ್ಲ ಎಂಬ ಸಾಮಾನ್ಯ ಜ್ಞಾನವೂ ನಮಗೆ ಇಲ್ಲವಾಗಿದೆ. ಸಮಾಜಕ್ಕೆ ಇದರಿಂದ ಯಾವ ರೀತಿಯ ಒಳಿತಾಗಿದೆ ಎಂಬುದನ್ನು ನಾವು ತಿಳಿಯುವುದಿಲ್ಲ. ದೇವರು ಒಂದಲ್ಲ ಒಂದು ದಿನ ಇಂತಹ ಶ್ರೀಮಂತಿಕೆಯನ್ನು ಪರೀಕ್ಷಿಸಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ನಮ್ಮ ಸಂತೋಷವನ್ನು ನಾವು ಹೇಗೆ ಬಯಸುತ್ತೇವೆಯೋ ಹಾಗೆಯೇ ಇನ್ನೊಬ್ಬರ ಸಂತೋಷವನ್ನು ನಾವು ಬಯಸಬೇಕು. ಇದಕ್ಕಾಗಿ ದಾನ, ಧರ್ಮದಂತಹ ಸೇವಾ ಕಾರ್ಯಗಳಲ್ಲಿ ನಮ್ಮನ್ನು ಕಿಂಚಿತ್ತಾದರೂ ತೊಡಗಿಸಿಕೊಳ್ಳಬೇಕು. ಬೇರೆಯವರ, ಸಮಸ್ಯೆಗಳಿಗೆ, ಕಷ್ಟಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು.
ಈ ಸಮಾಜದಲ್ಲಿ ಅದೆಷ್ಟೋ ಜನ ದಿನಕ್ಕೆ ಮೂರು ಹೊತ್ತು ಊಟ ಮಾಡದವರು, ಬದುಕಲು ವಸತಿ ಇಲ್ಲದವರು, ಈಗಿನ ಶಿಕ್ಷಣದ ವ್ಯಾಪಾರೀಕರಣದಿಂದಾಗಿ ವಿದ್ಯೆಯನ್ನು ಮುಂದುವರಿಸಲಾಗದೆ ತನ್ನ ಜೀವನವನ್ನೇ ನರಕಕ್ಕೆ ದೂಡಿಸಿಕೊಂಡ ಅದೆಷ್ಟು ಸಂಸಾರಗಳು ನಮ್ಮ ಕಣ್ಣ ಮುಂದೆ ಇವೆ. ಇಂತಹ ಸಮಾಜದ ಏಳಿಗೆಯನ್ನು ಬಯಸಿ, ಶಿಕ್ಷಣಕ್ಕೆ ಒತ್ತುಕೊಟ್ಟು, ಬಡಮಕ್ಕಳನ್ನು ಸಮಾಜದ ಉನ್ನತಗಿರಿಗೆ ತಲುಪಿಸಿದರೆ ಇದರಿಂದ ಸಿಗುವ ಮನೋಲ್ಲಾಸ, ಶಾಂತಿ, ನೆಮ್ಮದಿಗಿಂತ ಬೇರೊಂದು ಇಲ್ಲವೇ ಇಲ್ಲ. ಇದರಿಂದ ದೇವರ ಸೇವೆ ಮಾಡಿದಂತಹ ಪುಣ್ಯ ನಮ್ಮನ್ನು ಆವರಿಸುತ್ತದೆ. ದೇವನು ಸದ್ದಿಲ್ಲದೆ ನಮ್ಮನ್ನು ಮನತುಂಬಾ ಹರಸುತ್ತಾನೆ, ಕಾಯುತ್ತಾನೆ ಎಂಬುದಕ್ಕೆ ಸಂಶಯವೇ ಇಲ್ಲ. ಹಾಗಾದರೆ ಯೋಚನೆ ಯಾಕೆ? ಸ್ವಾರ್ಥ ಜೀವನವನ್ನು ಬಿಟ್ಟುಬಿಡೋಣ. ಈಗ ಸರಿಯಾದ ಸಂದರ್ಭ. ಸಮಾಜದ ಅದೆಷ್ಟೋ ನಮ್ಮ ಪ್ರತಿಭೆಗಳು, ಆರ್ಥಿಕ ತೊಂದರೆಯಿಂದಾಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ ಯೋಚಿಸುತ್ತಾ ಕುಳಿತಿವೆ. ಅವರಿಗೆಲ್ಲಾ ನಮ್ಮ ಧೈರ್ಯದ ಸಹಾಯ ಹಸ್ತ ಬೇಕಾಗಿದೆ. ಬನ್ನಿ ಕೈ ಹಿಡಿದು ಆದರಿಸೋಣ. ಉನ್ನತ ಶಿಕ್ಷಣ ಪಡೆದ ಮಕ್ಕಳಿಗೆ ಮುಂದಿನ ದಾರಿಯನ್ನು ತೋರಿಸೋಣ. ಅವರ ಮೊಗದಲ್ಲಿ ನಗುವಿನ ಅಲೆಯನ್ನು ನೋಡೋಣ, ನಮ್ಮ ಮನಸ್ಸಿನ ಶಾಂತಿ, ನೆಮ್ಮದಿಯನ್ನು ಕಾಪಾಡೋಣ.
ಕಳೆದ ಸಂಚಿಕೆಯಲ್ಲಿ ಪ್ರಕಟವಾದ “ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ” ಎಂಬ ಆಶಯ ಲೇಖನದ ಮುಖಾಂತರ ಪೋಷಕರ ಕರ್ತವ್ಯದ ಬಗ್ಗೆ ಕಿವಿ ಮಾತು ಹೇಳಿರುವ ಶ್ರೀಮತಿ ನಿರ್ಮಲಾ ಸಂಜೀವ್ ಸುರತ್ಕಲ್ ಇವರಿಗೂ, ಬಿಲ್ಲವರು ಮತ್ತು ಜಾತಿಗಿರುವ ಉಪನಾಮಗಳು ಈ ಬಗ್ಗೆ ಲೇಖನವನ್ನು ನೀಡಿರುವ ಶೈಲು ಬಿರ್ವ, ಇವರಿಗೂ ಯುವ ಸಿಂಚನ ಬಳಗದ ಕೃತಜ್ಞತೆಗಳು.
ಈ ಸಂಚಿಕೆಯಲ್ಲಿ ಪ್ರೊ| ಮೋಹನ್ ಕೋಟ್ಯಾನ್‍ರವರ “ಸಾಮಾಜಿಕ ಆತ್ಮ ಶೋಧನೆ” ಎಂಬ ಆಶಯ ಲೇಖನ ಹಾಗೂ ವಿವಿಧ ಘಟಕಗಳ ಸಾಮಾಜಿಕ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಚಿತ್ರಣ ಮತ್ತು ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಸಹಕಾರಿಯಾಗುವಂತೆ ಕೆಲವೊಂದು ವಿದ್ಯಾರ್ಥಿ ವೇತನ ಸಿಗುವ ದಾರಿಗಳನ್ನು ತೋರಿಸಲಾಗಿದೆ. 2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ. 80ಕ್ಕಿಂತ ಮೇಲ್ಪಟ್ಟು ಅಂಕ ಪಡೆದು ಸಾಧನೆ ಮಾಡಿದ ನಮ್ಮ ಸಮಾಜದ ಮಕ್ಕಳ ಭಾವಚಿತ್ರಗಳನ್ನು ಪ್ರಕಟಿಸಲಾಗಿದೆ. ಪ್ರೀತಿಯ ವಾಚಕರೇ ಒಮ್ಮೆ ಸಂಪೂರ್ಣವಾಗಿ ಕಣ್ಣಾಡಿಸಿ ನಮ್ಮ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತೀರಿ ತಾನೆ…

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!