Yuvavahini

MAY 23, 2017 1.23 PM IST

ರವಿರಾಜ್ ಅಜ್ರಿ :-ವಿಶುಕುಮಾರ್ ಎಂಬ ಬರಹಗಾರನ ಕಥೆ -7

ವಿಶುಕುಮಾರ್ ಹೀಗೊಂದು ನೆನಪು ….ಬರವಣಿಗೆಯ ದಾರಿಯಲ್ಲಿ …

          ದಿ. ವಿಶುಕುಮಾರ್

ಶಾಂತಸ್ವಭಾವದ, ಸೂಕ್ಷ್ಮಮತಿಯಾದ ವಿಶುಕುಮಾರ್ ತನ್ನ ಸುತ್ತಮುತ್ತಲಿನ ಜನರ ಜೀವನದ ಆಗು ಹೋಗುಗಳ ಘಟನೆಗಳನ್ನು ಪರಿಶೀಲಿಸ ತೊಡಗಿದರು. ಇದು ಹೈಸ್ಕೂಲಿನಲ್ಲಿ ಓದುವಾಗಲೇ ಈ ಗುಣವನ್ನು ಬೆಳೆಸಿಕೊಂಡರು. ಬದುಕಿನ ನೈಜ ಚಿತ್ರಣವನ್ನು ಬರವಣಿಗೆ ಮೂಲಕ ಬಟ್ಟಿಳಿಸ ತೊಡಗಿದರು.

 ಅವರು ಬರವಣಿಗೆಗೆ ಕಾಲಿಟ್ಟದುದೇ 1950 ರ ದಶಕದಲ್ಲಿ- ಆಗ ಅವರಿಗೆ 13-14 ರ ಪ್ರಾಯ. ಮೂಗಿನಡಿಯಲ್ಲಿ ಚಿಗುರೊಡೆಯುವ ಮೀಸೆ, ಕನಸುಗಳನ್ನು ಕಾಣುವ, ಆದರ್ಶಗಳು ಹುಟ್ಟಿಕೊಳ್ಳುವ ವಯಸ್ಸು. ಆ ಸಂದರ್ಭದಲ್ಲೇ ” ಚಂದಮಾಮ” ಮಾಸ ಪತ್ರಿಕೆಗೆ ” ದುಷ್ಟ ಶಾಸನ” ಕಥೆಯನ್ನು ಬರೆದು ಕಳುಹಿಸಿದ್ದರು. ಈ ಸಮಯದಲ್ಲೇ ನಾಟಕಗಳನ್ನು ಬರೆದು, ನಿರ್ದೇಶನ ಹಾಗೂ ಅಭಿನಯಿಸುವ ಗೀಳು ಹುಟ್ಟಿಕೊಂಡಿರುವುದು.

 1970 ರ ತನಕ ಕಥೆ, ನಾಟಕ, ಕಾದಂಬರಿಗಳ ವ್ಯವಸಾಯ ಬಹಳ ಹೇರಳವಾಗಿ ನಡೆಯತೊಡಗಿತು. ಅವರಿಗೆ ಅಪಾರ ಹೆಸರನ್ನು ತಂದುಕೊಟ್ಟಿದ್ದು. ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡವು.

 ಸುಮಾರು 60 ಕ್ಕೂ ಹೆಚ್ಚು ಕಥೆಗಳನ್ನು ಬರೆದರು. ಇಂದ್ರ ಧನಸು, ಕೈಲಾಸ, ಸಂಗಾತಿ, ಮಲೆನಾಡ ಮಲ್ಲಿಗೆ, ಸಂಯುಕ್ತ ಕರ್ನಾಟಕ, ಕಸ್ತೂರಿ, ಪ್ರಜಾಮತ, ಮಲ್ಲಿಗೆ, ವಿಕಟ ವಿನೋದಿನಿ, ನವಭಾರತ, ಪಂಚಾಮೃತ, ಪ್ರಜಾವಾಣಿ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟಗೊಂಡಿವೆ.

ಪ್ರಾರಂಭದ ದಿನಗಳಲ್ಲಿ ಇವರು ” ಸುಮಶರ ” ,” ಸುದರ್ಶನ ” ಕಾವ್ಯನಾಮಗಳಲ್ಲಿ ಕಥೆ, ಲೇಖನಗಳನ್ನು ಬರೆಯುತ್ತಿದ್ದರು.

 1966 ರಲ್ಲಿ ” ಕುಸುಮ ಕೀರ್ತನ ” ಆರು ಕಥೆಗಳ ಸಣ್ಣ ಕಥಾ ಸಂಕಲನವನ್ನು ಹೊರತಂದರು. ಆ ನಂತರ ೧೯೯೫ ರಲ್ಲಿ ” ಚಲ್ಲಾಟದ ಚದುರೆಯರು ಮತ್ತು ಇತರ ಕಥೆಗಳು ” ಎಂಬ ೨೧ ಕಥೆಗಳ ಸಂಕಲನ ಹೊರತರಲಾಯಿತು.

 ನಾವು ಇವರ ಕಥೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬದುಕಿನ ಎಲ್ಲಾ ನೈಜ ಕಥೆಗಳೇ – ಅದು ಒಂದಾಲ್ಲೊಂದು ಕಡೆ ನಡೆದಿರುತ್ತದೆ. ಲೇಖಕ ಆ ಕಥೆಗಳಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾನೆ.

 ಸಮಾಜದಲ್ಲಿ ಸಾಮಾನ್ಯವಾದ ಪ್ರೇಮ, ಕಾಮ, ಕ್ರಾಂತಿ, ಬದುಕಿನ ಗುರಿಗಳನ್ನೇ ವಸ್ತುಗಳಾಗಿರುತ್ತವೆ. ಕಥೆಯನ್ನು ಒಂದು ಚೌಕಟ್ಟಿನಲ್ಲಿ ತಂದು ಓದುಗ, ಓದಿಸಿಕೊಂಡು ಹೋಗುವ ರೀತಿಯಲ್ಲಿ ಕೂತುಹಲ ಘಟ್ಟ, ಸಸ್ಪೆನ್ಸ್, ಚಿಂತನೆಗೆ ಹಚ್ಚುವ ರೀತಿಯಲ್ಲಿ ಮುಗಿಸುತ್ತಾರೆ. ಕೆಲವು ಕಾಲ ಓದುಗರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಘಟನೆಗಳು ಸದಾ ಉಳಿಯುವಂತೆ ಮಾಡುತ್ತದೆ. ಅಂಥ ಬರವಣಿಗೆ ಶೈಲಿ ವಿಶುಕುಮಾರ್ ಅವರದು.

 ಅವರ ಬರವಣಿಗೆ ತನ್ನ ಸುತ್ತಮುತ್ತಲಿನ ಪ್ರದೇಶದೇ ಆಗಿರುತ್ತದೆ. ತಾನು ನೋಡಿದ, ತನ್ನ ಅನುಭವಕ್ಕೆ ಬಂದ ವಸ್ತುಗಳೇ ಆಗಿರುತ್ತವೆ. ಇದು ನಮ್ಮ ಅನುಭವವವೂ ,ನಿಮ್ಮ ಅನುಭವವೂ ಆಗಬಹುದು.

 ಮೊದಮೊದಲು ಅವರ ಬರವಣಿಗೆಗಳಲ್ಲಿ ” ಬಂಡಾಯ” ದ ಛಾಯ ಎದ್ದು ಕಾಣುತ್ತಿರಲಿಲ್ಲ. ಅವರ ಬರವಣಿಗೆಯನ್ನು ಓದುವಾಗ ನಮ್ಮನ್ನು ಚಿಂತನೆಗೆ ಹಚ್ಚುತ್ತಿತ್ತು. ದಕ್ಷಿಣ ಕನ್ನಡದ ಸಂಸ್ಕೃತಿಯ ಅಧ್ಯನಯದ ನೆಲೆಯಲ್ಲಿ ವಿಶುಕುಮಾರ್ ಕಥೆಗಳು ಅಧ್ಯಯನಕ್ಕೆ ಯೋಗ್ಯವಾಗಿದೆ. ೫೦ ರ ದಶಕ, ೬೦ ರ ದಶಕ, ೭೦ ರ ದಶಕಗಳ ಹಿಂದಿನ ಸಾಮಾಜಿಕ, ಆರ್ಥಿಕ ಸ್ಥಿತಿ- ಗತಿಗಳನ್ನು ಅವರ ಕಥೆಗಳಲ್ಲಿ ನಾವು ಕಾಣಬಹುದು.

 ವಿಶುಕುಮಾರ್ ಅವರ ಕೆಲವು ಕಥೆಗಳನ್ನು ನಾವು ಇಲ್ಲಿ ಗಮನಿಸ ಬಹುದು.

 ಕುಸುಮ ಕೀರ್ತನ:

 ಕುಸುಮ ಎನ್ನುವ ಬಡಹುಡುಗಿಯ ಗೋಳಿನ ಕಥೆ. ಮುಂಬಯಿಯಲ್ಲಿ ನೌಕರಿಯಲ್ಲಿರುವ ಹುಡುಗನನ್ನು ಮದುವೆಯಾಗಿ ಅನುಭವಿಸುವ ಯಾತನೆ, ವೇದನೆ ಈ ಕಥೆಯಲ್ಲಿದೆ.

 ಕರಾವಳಿಯಿಂದ ಮುಂಬಯಿಗೆ ಹೋಗಿ ಅನೇಕ ಯುವಕರು ಅಲ್ಲಿ ಶ್ರೀಮಂತರಾಗುತ್ತಲೇ ತಮ್ಮ ಕುಟುಂಬ, ಸಂಸ್ಕೃತಿ ಮರೆತು, ಸಂಬಂಧಗಳ ವಿಸ್ಮೃತಿಗೆ ದಾರಿ ಮಾಡುವ ಕಥಾಹಂದರ ಈ ಕಥೆಯಲ್ಲಿದೆ.

 ಕತ್ತಿ- ತೆನೆ, ಜೋಡೆತ್ತು ಮತ್ತು ಹಗ್ಗ:

 ಇದೊಂದು ರಾಜಕೀಯ ವಸ್ತುವುಳ್ಳ ಕಥೆ. ರಾಜಕೀಯದಲ್ಲಿ ವೈಯಕ್ತಿಕ ವಿಷಯಗಳನ್ನು ತಂದು ಹೇಗೆ ಚಾರಿತ್ರ್ಯಹರಣ ಮಾಡುತ್ತಾರೆಂಬ ಸಂಗತಿಗಳನ್ನು ಕಳಿಸುವ ಕಥಾಹಂದರ.

 ಯಾರಿಗೆ ಯಾರುಂಟು:

 ಇದೊಂದು ಕ್ರಿಶ್ಚಿಯನ್ ಕುಟುಂಬದ ಕಥೆ. ಮನೆಯಲ್ಲಿ ಹೆಂಗಸ್ಸು ಇಲ್ಲದೆ ಹೋದರೆ ಏನೆಲ್ಲಾ ಅನಾಹುತ ಆಗುತ್ತದೆಂಬ ನಿದರ್ಶನ ಈ ಕಥೆಯಲ್ಲಿದೆ.

ವಿರಾಗಿಣಿ:

ತಾನು ಬಯಸಿದ ಪರ ಧರ್ಮದ ಹುಡುಗನನ್ನು ಮದುವೆಯಾಗಲು ಸಾಧ್ಯವಾಗದೆ ಹೋದಾಗ, ಸ್ವಧರ್ಮದ ಹುಡುಗನನ್ನು ಮದುವೆಯಾಗಲು ಒತ್ತಾಯ ಬಂದಾಗ, ಮದುವೆಯಾಗದೆ ಸನ್ಯಾಸಿನಿಯಾಗುವ ಕಥೆ. ಜೈನ ಮನೆತನದ ಹುಡುಗ ಕ್ರೈಸ್ತ ಮತದ ಹುಡುಗಿಯನ್ನು ವಿವಾಹವಾಗಲು ಹೊರಟಾಗ, ಉಂಟಾಗುವ ವಿವಾದ ಕಥೆ.

ಸ್ವಾರ್ಥ:

ಮನುಷ್ಯನು ತನ್ನ ಸ್ವಾರ್ಥದಿಂದ ವಿಪತ್ತನ್ನು ಎದುರಿಸುವ ಘಟನೆ ಕಥೆಯಲ್ಲಿದೆ. ಒಂದು ಹುಡುಗಿಗೆ ಹೇಳಿಟ್ಟು ವರನನ್ನು ಇನ್ನೋರ್ವ ಹುಡುಗಿ ಎಗರಿಸಿಕೊಂಡಾಗ ಆಗುವ ದುರಂತ ಈ ಕಥೆಯಲ್ಲಿದೆ.

ಕೊರಡು ಕೊನರಿತು:

ಸದಾಮುನಿಸಿನಿಂದ ಹೊಗೆಯಾಡುತ್ತಿದ್ದ ಗಂಡ ವಿಧಿಯ ಒಂದು ಘಟನೆಯಿಂದ ಪತ್ನಿಗೆ ಪ್ರೀತಿಯ ಆಸರೆ ನೀಡುವುದು ” ಕೊರಡು ಕೊನರಿತು” ಕಥೆಯ ವಸ್ತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!