Yuvavahini

ಸಿಂಚನ

ಸಂಪಾದಕರ ಮಾತು : www.yuvavahini.in

ಪ್ರೀತಿಯ ಸ್ನೇಹಿತರೇ, ಪ್ರತಿ ದಿನ ನಿಮ್ಮ ಬೆರಳಂಚಿಗೆ ಬಂದು ನಿಮ್ಮೆಲ್ಲರ ಗಮನವನ್ನು ನನ್ನಡೆಗೆ ಸೆಳೆದು ಹೋಗುತ್ತಿದ್ದೇನೆ, ನಿಮ್ಮೆಲ್ಲರ ಮೊಬೈಲ್‍ನಲ್ಲಿ ನಮ್ಮ ಸಂಸ್ಥೆಯು ನೆಲೆ ಕಂಡುಕೊಂಡಿರುವಾಗ ಮತ್ತೆ ನನ್ನ ಮಾತಿನ ಅವಶ್ಯಕತೆ ಇಲ್ಲ ಎಂದುಕೊಳ್ಳುತ್ತೇನೆ. ಹೀಗಿದ್ದರೂ ಔಪಚಾರಿಕ ನೆಲೆಗಟ್ಟಿನಲ್ಲಿ ನಮ್ಮ ಆಕರ ಗ್ರಂಥ ಸಾಕಾರಗೊಳ್ಳುತ್ತಿರುವ ಹೊತ್ತಿನಲ್ಲಿ ದಾಖಲೀಕರಣದ ನೆಲೆಯಲ್ಲಿ ಎರಡಕ್ಷರ ಬರೆಯಲೇ ಬೇಕಿದೆ. ಸುದೀರ್ಘ ಮೂವತ್ತು ವರುಷಗಳ ಸಾರ್ಥಕ ನಡೆಯನ್ನು ತಪಸ್ಸಿನಂತೆ ಕಳೆದಿರುವ ಯುವವಾಹಿನಿಯು, ಸಾಮಾಜಿಕವಾಗಿ ಬದಲಾವಣೆಯ ಪ್ರಬಲ ಕ್ರಾಂತಿಯನ್ನೇ ಹುಟ್ಟುಹಾಕಿದೆ .ಯಾವ ಸಮಯದಲ್ಲಿ ಏನು ಆಗಬೇಕಿದೆಯೋ ಅದು […]

Read More

ಕನವರಿಸುವುದೇ ಬಾಲ್ಯ ಮತ್ತೊಮ್ಮೆ…….: – ನಿರ್ಮಲ ಗೋಪಾಲ್

ಮಳೆರಾಯಗೆ ಅಡ್ಡ ಹಿಡಿಯಬೇಕಿದ್ದ ಬಣ್ಣಬಣ್ಣದ ಛತ್ರಿಯ ತುಂಬೆಲ್ಲಾ… ಕುಂಟಲ ಹಣ್ಣುಗಳದ್ದೇ ಕಾರುಬಾರು… ನಾ ನೆನದರೂ ಹಣ್ಣು ನೆನೆಯಬಾರದೆಂಬ ಕಕ್ಕುಲತೆ… ಅಮ್ಮ ಬೈಯುವಳೆಂದು ಹಸಿರೆಲೆಗಳ ತಿಂದು ಕುಂಟಲ ಬಣ್ಣವ ಮಾಸಿಸಿ… ನಾಲಗೆ ಬಿಳಿ ಮಾಡಿದ ನೆನೆದರೆ ಕನವರಿಸದೇ…ಬಾಲ್ಯ..ಇನ್ನೊಮ್ಮೆ…? ಗೆಳತಿಯರೊಡನೆ ಓಡೋಡಿ ಜೊತೆಗೂಡಿ ಗುಡ್ಡ ತೋಡು ದಾಟಿ ಪ್ರೀತಿಯ ಶಾಲೆಗೆಂದು ಪ್ರೀತಿಯಿಂದ ಬರುತ್ತಿದ್ದ ಅಂದಿನ ಮನಸ್ಸು ಇಂದಿನ ಮಕ್ಕಳಿಗಿಹುದೇ…! ಶಾಲೆಗಿಹುದು ಕಲ್ಲು ಮುಳ್ಳ …ಗುಡ್ಡದ ಹಾದಿ… ಆದರೆ… ಈ ದಿನಗಳಲ್ಲಿ… ಎಂದೂ ಅನ್ನಿಸಲಿಲ್ಲ… ಕಲ್ಲು ಮುಳ್ಳೆಂದು…. ಅದರೀಗ ಮನೆಯ ಮೆಟ್ಟಲಿಳಿಯಬೇಕೆಂದರೆ […]

Read More

ವಿದ್ಯಾತುರಾಣಾಂ ನ ಸುಖಂ ನ ನಿದ್ರಾ : ಕೆ. ರಾಜೀವ ಪೂಜಾರಿ

ವಿದ್ಯಾತುರರಿಗೆ ನೆಮ್ಮದಿಯಾಗಲೀ ನಿದ್ರೆಯಾಗಲೀ ಇರದು – ಇದು ನಮ್ಮ ಜ್ಞಾನಾರ್ಜನೆಗೆ ಸಂಬಂಧಪಟ್ಟ ಒಂದು ಮಾತು. ಜ್ಞಾನ ದೇಗುಲ ನಮ್ಮ ಭಾರತ. ಸಾವಿರಾರು ವರ್ಷಗಳಿಂದ ಜಗತ್ತಿಗೆ ಶುದ್ಧ ಜ್ಞಾನ, ವಿಜ್ಞಾನವನ್ನು ಪ್ರಸಾರ ಮಾಡುತ್ತಾ ವಿಶ್ವದ ಎಲ್ಲ ಮಾನವ ಜನಾಂಗವನ್ನು ಶ್ರೇಷ್ಠರನ್ನಾಗಿ ಸುಸಂಸ್ಕøತರನ್ನಾಗಿಸುವುದರಲ್ಲಿ ಭಾರತೀಯ ಸಂಸ್ಕøತಿ ಗುರುತಿಸಲ್ಪಟ್ಟಿದೆ. ನಮ್ಮಲ್ಲಿರುವ ಮೆದುಳು ಪ್ರಪಂಚದಲ್ಲಿರುವ ಯಾವುದೇ ಅತ್ಯಂತ ಪ್ರಬಲ ಆಧುನಿಕ ಗಣಕ ಯಂತ್ರಕ್ಕಿಂತ ಹೆಚ್ಚು ಸಂಕೀರ್ಣ, ಬಲಶಾಲಿ ಎಂದು ಗುರುತಿಸಲ್ಪಟ್ಟಿದೆ. ಇದರ ಇನ್ನೊಂದು ರೂಪ “ಕಾಮಾತುರಾಣಾಂ ನಭಯಂ ನಲಜ್ಜಾ” ಇದು ಬಯಕೆಗಳ (ಕಾಮಗಳ) […]

Read More

ಚಾವಡಿಯ ನೆರಳಲ್ಲಿ ಒಂದಿಷ್ಟು ಮಾತುಕತೆ : ಅಮಿತಾಂಜಲಿ ಕಿರಣ್

“ಬೇಡಗಳೆಡೆಯಲ್ಲಿ ಕಾಡಿದ ಬಯಕೆಗಳ… ಸುಡುವ ಕಾವನು ಬೆಳೆಸಿ ಬೆಂದು ಕಳೆದ… ಅಹಲ್ಯ, ತಾರಾ, ಸೀತೆ, ದ್ರೌಪದಿ, ಮಂಡೋದರಿಯರ ನನ್ನ, ಅವಳ, ಇವಳ, ಮತ್ತೊಬ್ಬಳ, ಇನ್ನೊಬ್ಬಳ ಊರ್ಮಿಳಾಳ… ಕತೆಯ ಕಾಯ್ವ, ಕೇಳ್ವ, ಸುಡುವ, ಬೆಳೆಸುವ ಹೊತ್ತು…” ಮುಸ್ಸಂಜೆಯ ಮಾತು. ಕವಿತೆ ಹೊಸೆಯುವ ಹೊತ್ತು. ಕವಿತೆ ಗೀತೆಯರ ಮಾತುಕತೆ. ಕವಿತೆ ಕತೆಯಾಗುವ ಕತೆ. ಮಾತುಕತೆಯ ನಡುವೆ ಒಂದಿಷ್ಟು ಕಣ್ಣೀರು _ ಮತ್ತೊಂದಿಷ್ಟು ನೆನಪುಗಳು. ಸಾಹುಕಾರ ಅಪ್ಪನ ದರ್ಪದ ಮಾತುಗಳಿಗೆ ಬೆದರಿದ ಹರಿಣಿ- ಅಮ್ಮ. ತುಂಬು ಸಂಸಾರಕ್ಕೆ ಸೊಸೆಯಾಗಿ ಬಂದವಳನ್ನು ಓಲೈಸುವವರಿಲ್ಲ. […]

Read More

ಭೂತಾರಾಧನೆ

ತೆಂಕಿನಲ್ಲಿ ಕಾಸರಗೋಡಿನ ಚಂದ್ರಗಿರಿ ನದಿ ತೀರದಿಂದ ಬಡಗಿನಲ್ಲಿ ಬಾರ್ಕೂರು, ಹಾಗೇ ಪಶ್ಚಿಮ ಘಟ್ಟದ ಬುಡದಿಂದ ಪಡುವಣಕಡಲ ತೀರದ ವರೆಗೆ ವ್ಯಾಪಿಸಿರುವ ಪ್ರದೇಶವೇ ಇಂದಿನ ತುಳು ನಾಡು. ಹಿಂದಿನ ಕಾಲದಲ್ಲಿ ತುಳುನಾಡು ವಿಶಾಲವಾಗಿತ್ತು. ತೆಂಕಣದ ರಾಮೇಶ್ವರ, ಬಡಗಣ ಅಂಕೋಲ, ಪಡುವಣ ಅರಬ್ಬೀ ಸಮುದ್ರ, ಮೂಡಣದಲ್ಲಿ ವಿಸ್ತಾರವಾಗಿ ಹಬ್ಬಿರುವ ಪಶ್ಚಿಮ ಘಟ್ಟದತಪ್ಪಲು ಇವು ತುಳುನಾಡಿನ ಗಡಿ ಪ್ರದೇಶಗಳಾಗಿದ್ದವು. ಬಯಲು ಸೀಮೆಯ ಸಮತಟ್ಟು ನೆಲದಂತೆ ತುಳುನಾಡಿನ ಭೂಮಿಯಲ್ಲ. ಕರಾವಳಿ ಪ್ರದೇಶ ಮಾತ್ರ ಸಮತಟ್ಟಾಗಿರುವುದು. ಉಳಿದಂತೆ ಗುಡ್ಡ, ಕಾಡು, ಹಾಡಿ, ಇಳಿಜಾರು ಪ್ರದೇಶದಿಂದ […]

Read More

ದೇಯಿ ಬೈದ್ಯೆತಿ

ಪಾಡ್ದನದಲ್ಲಿ ಸರಿಸಾಟಿಯಿಲ್ಲದ ಬಂಟರೆಂದು ಕರೆಯಲ್ಪಟ್ಟಿರುವ ಬೈದರ್ಕಳರೆಂದು ಆರಾಧಿಸಲ್ಪಡುತ್ತಿರುವ ಅವಳಿ ವೀರ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯತಿ. ತುಳುನಾಡಿನ ಪಾರಂಪರಿಕ ನಾಟಿವೈದ್ಯ ಪದ್ಧತಿಯ ಮೂಲ ಪುರುಷೆಯಾಗಿ ಇತಿಹಾಸದಲ್ಲಿ ಮಹತ್ತರ ಗೌರವದ ಸ್ಥಾನ ಪಡೆದುಕೊಂಡಿದ್ದಾಳೆ. ತುಳು ಮೌಖಿಕ ಸಾಹಿತ್ಯವಾದ ಪಾಡ್ದನದ ಕಥೆಯಲ್ಲಿ ದೇಯಿಯು ದೇವರ ಅನುಗ್ರಹದಿಂದ ಕೇಂಜವ ಹಕ್ಕಿಗಳ ಮೊಟ್ಟೆಯಿಂದ ಹುಟ್ಟಿಕೊಂಡವಳೆಂದು ಹೇಳಿದೆ. ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿದ್ದ ಪಡುಮಲೆಯ ಪೆಜನಾರ ದಂಪತಿಗಳು (ದೇಯಿಯು ಹುಟ್ಟಿದ ಪೆಜನಾರರ ಕೂವೆ ತೋಟಮನೆಯು ಈಗಲೂ ಇದೆ. ಇವರು ಕರಾಡ ಬ್ರಾಹ್ಮಣರಾಗಿರುವರು. ಕರಾಡ ಬ್ರಾಹ್ಮಣರು […]

Read More

ಆ ನಾಲ್ಕು ಜನ ಯಾರು?

ಅಮ್ಮ ನನಗೆ ಕೈತುತ್ತು ಕೊಡುವುದನ್ನು ಬಿಟ್ಟಾಗಿನಿಂದ ನಾನು ಇವರನ್ನು ಹುಡುಕುತ್ತಿದ್ದೇನೆ. ಆದರೆ ಅವರಿನ್ನೂ ನನಗೆ ಸಿಗಲೇ ಇಲ್ಲ!. ಅವರು ನನ್ನ ಹಿಂದೆ ಮುಂದೆ ಎಲ್ಲೋ ಸುತ್ತಾಡುತ್ತಿದ್ದಾರೆ. ಗಬಕ್ಕೆನೇ ಹಿಡಿಯೋಣ ಎಂದರೆ ಆ ನಾಲ್ಕು ಜನ ನನ್ನ ಕಣ್ಣಿಗೆ ಕಾಣಲ್ಲ, ಆ ನಾಲ್ಕು ಜನ ನನ್ನ ಭ್ರಮೆ ಎಂದುಕೊಳ್ಳುತ್ತೇನೆ, ಆದರೆ ಎಲ್ಲರೂ ಆ ನಾಲ್ಕು ಜನರ ಬಗ್ಗೆ ಮಾತಾಡುತ್ತನೇ ಇರುತ್ತಾರೆ. ಸಮಾಜದ ಒಟ್ಟು ಜನ ಸಂಖ್ಯೆಯ 1ರಷ್ಟು ಜನವಾದರೂ ಈ ನಾಲ್ಕು ಜನರ ಬಗ್ಗೆ ದಿನದಲ್ಲಿ ಒಮ್ಮೆಯಾದರೂ ಪ್ರಸ್ತಾಪಿಸುತ್ತಾರೆ. […]

Read More

ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಉಲ್ಲಾಸ

ಗ್ರಾಮೀಣ ಬದುಕು ಎಂದಾಗ ನೆನಪಿಗೆ ಬರುವುದು ಅಲ್ಲಿಯ ಜನರ ಕಸುಬು, ಆಚರಣೆ, ಪ್ರಾಥಮಿಕ ಸಂಬಂಧ, ಆಡಂಬರವಿಲ್ಲದ ಬದುಕು, ಅಲ್ಪತೃಪ್ತ ಸ್ವಾವಲಂಬಿ ಜೀವನ, ವಸ್ತು ವಿನಿಮಯ ಪದ್ಧತಿಯ ಸ್ವಲ್ಪ ಇರುವಿಕೆ, ಸಾಕುಪ್ರಾಣಿಗಳ ಒಡನಾಟ ಹೀಗೆ ಹತ್ತಾರು ದೃಷ್ಟಾಂತಗಳು. ಆರ್ಥಿಕ ಅಭಿವೃದ್ಧಿಯ ವೇಗ ವರ್ಧನೆಯ ಗುರಿ ಹಿಂದೆ ಬಿದ್ದಿರುವ ನಾವು ನಿಜವಾದ ಬದುಕಿನ ಉಲ್ಲಾಸವನ್ನೇ ಕಳೆದುಕೊಳ್ಳುತ್ತಿದ್ಧೇವೆ. ಬದುಕಿನ ಮೂಲ ಸೆಲೆಯನ್ನೇ ಮುರಿದು ಕೃತಕ ಬದುಕನ್ನು ಕಟ್ಟಿಕೊಂಡಿದ್ದೇವೆ. ಕೇವಲ ಕೈಗಾರಿಕಾಭಿವೃದ್ಧಿ, ಆಧುನಿಕ ಕೃಷಿ ಅಭಿವೃದ್ಧಿ, ವಿದ್ಯುತ್‍ಶಕ್ತಿ ಉತ್ಪಾದನಾ ಉದ್ದೇಶವನ್ನೇ ಮುಂದಿಟ್ಟುಕೊಂಡು ಮಳೆಗಾಲವನ್ನು […]

Read More

ಹೆಜ್ಜೆ ಇಡುತ್ತಾ ಬನ್ನಿ ಗೆಜ್ಜೆಗಿರಿಗೆ

ಐನೂರು ವರ್ಷಗಳ ಹಿಂದೆ ತುಳುನಾಡಿನಲ್ಲಿ ಅನೀತಿ ತಾಂಡವವಾಡುತ್ತಿದ್ದಾಗ. ಸತ್ಯಧರ್ಮರಕ್ಷಣೆಗಾಗಿ ಬ್ರಹ್ಮ ಸಂಕಲ್ಪದಂತೆ ಬಿಲ್ಲವ ಕುಲದಲ್ಲಿ ಅವತಾರ ಪಡೆದವರು ಕೋಟಿ ಚೆನ್ನಯರು. ಆಗಿನ ಕಾಲದ ಪಾಳೇಗಾರರಾಗಿದ್ದ ಬಂಟ ಬಲ್ಲಾಳರ ದರ್ಪ ದೌರ್ಜನ್ಯದ ಅಧರ್ಮದ ಆಡಳಿತ ನೀತಿಗೆ ವಿರುದ್ಧವಾಗಿ ಹೋರಾಡಿ ವೀರ ಮರಣವನ್ನಪ್ಪಿದ ದೈವತ್ವಕ್ಕೇರಿ ಬ್ರಹ್ಮದೇವರ ಎಡಬಲಗಳಲ್ಲಿ ನಿಂತು ಬ್ರಹ್ಮಬೈದ್ಯರಾಗಿ ತುಳುನಾಡಿನ ಭಕ್ತ ಜನಕೋಟಿಗಳಿಂದ ಇಂದು ಆರಾಧಿಸಲ್ಪಡುತ್ತಿ ದ್ದಾರೆ. ಸುಮಾರು ಇನ್ನೂರೈವತ್ತಕ್ಕಿಂತಲೂ ಅಧಿಕ ಸ್ಥಳಗಳಲ್ಲಿ ತಮ್ಮ ಕಲೆಕಾರ್ಣಿಕಗಳನ್ನು ತೋರಿಸಿ ಆರಾಧನೆ ಪಡಕೊಂಡ ಕೋಟಿ ಚೆನ್ನಯರಿಗೆ ಅವರು ತಮ್ಮ ಜೀವಿತಾವಧಿಯ ಮುಕ್ಕಾಲಂಶ […]

Read More

ಸುಖ ಎಲ್ಲಿದೆ?

ನಾವೆಲ್ಲರೂ ಇಂದು ಅನೇಕ ಆಸೆಗಳನ್ನು ಇಟ್ಟುಕೊಂಡು ಬದುಕುತ್ತಿದ್ದೇವೆ. ಅದರಿಂದ ಸುಖವಿದೆ, ಇದರಿಂದ ಸುಖವಿದೆ ಎನ್ನುತ್ತಾ ಅನೇಕ ಕನಸುಗಳನ್ನು ಕಾಣುತ್ತೇವೆ. ಈ ಕನಸುಗಳೆಲ್ಲವೂ ನಾವು ಸುಖವಾಗಿ ಬಾಳಬೇಕು, ಸುಖವಾಗಿ ಇರಬೇಕು; ಸುಖವನ್ನಲ್ಲದೆ ಕಷ್ಟವನ್ನು ಅನುಭವಿಸಬಾರದು. ಇದು ಎಲ್ಲರ ಆಸೆ. ಆದರೆ ಮನುಷ್ಯರಾದವರು ಈ ಆಸೆಗಳನ್ನು ಪಡುವುದು ತಪ್ಪೆಂದಲ್ಲ. ಇದು ಮಾನವನ ಸಹಜ ಗುಣ. ಆದರೂ ಏನು ಮಾಡೋಣ? “ತಾನೊಂದು ನೆನೆದರೆ ಮಾನವ, ಬೇರೊಂದು ಬಗೆವುದು ದೈವ” ಎಂಬಂತೆ ಎಲ್ಲರ ಆಸೆಗಳು, ಎಲ್ಲರ ಕನಸುಗಳು ಎಣಿಸಿದಂತೆ ಆಗುವುದೇ ಇಲ್ಲ. ನಾವೆಷ್ಟು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!