Yuvavahini

SEP 15, 2017 1.57 PM IST

ಯುವಸಿಂಚನ ಮಾಸಿಕ : ಸೆಪ್ಟೆಂಬರ್ 2017

ಸಂಪಾದಕರ ಮಾತು : ಶುಭ ರಾಜೇಂದ್ರ

ಬರೆಯಲು ಪದಗಳಿಗಾಗಿ ತಡಕಾಡುತ್ತಿದ್ದೇನೆ, ಮನದಲ್ಲಿ ಅವ್ಯಕ್ತವಾದ ಭಯ ಕಾಡುತ್ತಿದೆ ವಿವಿಧ ಸಂಘಟನೆಗಳಲ್ಲಿ ಸಾಕಷ್ಟು ಜವಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ, ಆದರೆ ಈ ಜವಬ್ದಾರಿ ಎಲ್ಲಕ್ಕಿಂತಲೂ ಬೇರೆಯಾದುದು, ಅದಕ್ಕಿಂತಲೂ ಮುಖ್ಯವಾಗಿ ಇದು ಯುವವಾಹಿನಿ ಎನ್ನುವ ಮಹಾ ಸಾಗರದಲ್ಲಿ ನಾವೆಯನ್ನು ಮುನ್ನಡೆಸುವ ಯತ್ನ. ಯುವವಾಹಿನಿಯಲ್ಲಿ ಎಲ್ಲವೂ ಒಂದು ವರುಷದ ಅಧಿಕಾರ, ಆದರೆ ಈ ಒಂದು ವರುಷದಲ್ಲಿ ನಾನು ಮಾಡುವ ಕೆಲಸ ಒಂದು ಶತಮಾನದ ವರೆಗೂ ದಾಖಲೆಯಾಗಿ ಉಳಿದಿರುತ್ತದೆ. ಇದು ಯುವವಾಹಿನಿಯನ್ನು ಹೊರ ಜಗತ್ತಿನ ಜೊತೆ ನಿರಂತರ ಸಂಪರ್ಕದಲ್ಲಿರಿಸುವ ಮಾಧ್ಯಮ. ಹೀಗಾಗಿ ಇದರ ಬಗ್ಗೆ ಸಾಕಷ್ಟು ಯೋಚನೆ ಮಾಡಬೇಕಾಗಿದೆ. ಆದರೆ ನನಗೆ ಯೋಚಿಸಲೂ ಅವಕಾಶವೇ ಇಲ್ಲದಂತೆ ನನಗೊಂದು ಜವಾಬ್ದಾರಿ ನೀಡಿದ್ದೀರಿ. ನಿಮ್ಮೆಲ್ಲ ಪ್ರೀತಿ, ಅಭಿಮಾನ ಗೌರವಕ್ಕೆ ತಲೆಬಾಗಿ ಹೊಸ ಪ್ರಪಂಚಕ್ಕೆ ಕಾಲಿಟ್ಟಿರುವ ಮಗುವಿನಂತೆ ಯುವ ಸಿಂಚನದ ಬಾಹು ಬಂಧಿಯಲ್ಲಿ ಬಂಧಿಯಾಗಿರುವೆ.

ಪರಿವರ್ತನೆ ಜಗದ ನಿಯಮ ಎಂದು ಶ್ರೀ ಕೃಷ್ಣ ಪರಮಾತ್ಮ ಗೀತಾ ಸಾರದಲ್ಲಿ ಉಲ್ಲೇಖಿಸಿದ್ದಾನೆ. ಬದಲಾವಣೆ ಎನ್ನುವುದು ಶತಸಿದ್ಧ ಆದರೆ ಈ ಬದಲಾವಣೆಗೆ ನಾವುಗಳು ನೆಪ ಮಾತ್ರ. ನಮ್ಮ ಹೊಸ ತಂಡದ ಮೂಲಕ ಮತ್ತೊಂದು ಬದಲಾವಣೆ ಆರಂಭಗೊಂಡಿದೆ. ನಮ್ಮಲ್ಲಿ ಕನಸುಗಳಿವೆ, ಯುವ ಸಿಂಚನವನ್ನು ಹೊಸ ರೀತಿಯಲ್ಲಿ ಮೂಡಿಸುವ ತುಡಿತವಿದೆ. ಬಲಿಷ್ಠರಾಗಿರುವ ನೀವೆಲ್ಲ ಮಾಡಬೇಕೆಂದು ಆಶಿಸಿದಾಗ ಮೊದಲಾಗಿ ಪ್ರೋತ್ಸಾಹಿಸಿದವರು ನಮ್ಮ ನೂತನ ಅಧ್ಯಕ್ಷರಾದ ಯಶವಂತ ಪೂಜಾರಿ ಅವರು, ಇಂದು ಅವಕಾಶ ನಮಗೆ ಸಿಕ್ಕಿದೆ ಅದು 365 ದಿನ ಮಾತ್ರ ನಮ್ಮ ಬಳಿ ಇರುತ್ತದೆ ಮತ್ತೆ ಇನ್ನೊಬ್ಬರ ಪಾಲಾಗುತ್ತದೆ ನಮ್ಮ ಬಳಿ ಇರುವಷ್ಟು ದಿನದಲ್ಲಿ ಅದನ್ನು ಬಳಸಿಕೊಂಡು ಹೊಸ ಇತಿಹಾಸ ಬರೆಯಬೇಕು ಎಂದು ಸಲಹೆ ಇತ್ತರು, ಹೌದು ಈ ಮಾತು ನನಗೂ ಸತ್ಯ ಅನಿಸಿತು. ಈ ಕಾರಣದಿಂದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮತ್ತು ಯುವ ಸಿಂಚನ ಕುಟುಂಬದ ಸಭೆ ಕರೆದು ನಮ್ಮ ಹೊಸ ಕನಸನ್ನು ತೆರೆದಿಟ್ಟೆವು. ನಮ್ಮ ಆಶಯಕ್ಕೆ ಎಲ್ಲರೂ ಶಹಬ್ಬಾಸ್ ಎಂದರು. ಈವರೆಗೆ ಸಿಂಚನದ ಬಹುಜವಾಬ್ದಾರಿ ವಹಿಸಿಕೊಂಡಿದ್ದ ದಿನಕರ್ ಡಿ ಬಂಗೇರಾ ಅವರೂ ತಾಂತ್ರಿಕ ಸಮಸ್ಯೆಗೆ ಪರಿಹಾರ ನೀಡಿ ಹೊಸ ಹುರುಪು ನೀಡಿದರು. ಅಲ್ಲಿಂದ ಹಿಂದೆ ನೋಡದೆ ಪ್ರಧಾನ ಕಾರ್ಯದರ್ಶಿ ರಾಜೇಶ್ , ಉಪಾಧ್ಯಕ್ಷರಾದ ನರೇಶ್, ಪತ್ರಿಕಾ ಕಾರ್ಯದರ್ಶಿ ರಾಜೇಂದ್ರ ಚಿಲಿಂಬಿ ಇವರ ಸಹಕಾರದಲ್ಲಿ ಕೆಲಸ ಆರಂಭಿಸಿದೆವು ಇಂದು ನಮ್ಮ ಹೊಸ ಕನಸಿನ ಮೊದಲ ಪ್ರತಿರೂಪ ನಿಮ್ಮ ಕೈಯಲ್ಲಿದೆ. ತಪ್ಪು ಒಪ್ಪು, ಹೆಚ್ಚುಕಡಿಮೆ ಏನೇ ಇದ್ದರೂ ನಮಗೆ ತಿಳಿಸಿ ಮುಂದಿನ ಸಂಚಿಕೆಯನ್ನು ಇನ್ನಷ್ಟು ಅಂದವಾಗಿಸುತ್ತೇವೆ ಎನ್ನುವ ಭರವಸೆ ನೀಡುತ್ತೇವೆ.

ಬಂಧುಗಳೇ ಯುವವಾಹಿನಿಯ ಮೂವತ್ತನೇ ವರುಷದಲ್ಲಿ ನಾವಿದ್ದೇವೆ. ಮತ್ತೊಂದು ಹೊಸ ಪರ್ವ ಆರಂಭಗೊಂಡಿದೆ. ಯುವವಾಹಿನಿಯ ಪ್ರತಿಯೊಂದು ಘಟಕವೂ ಹೊಸತನದಿಂದ ಮುನ್ನುಗುತ್ತಿದೆ. ವಿಭಿನ್ನ ಕಾರ್ಯಕ್ರಮಗಳು, ಸಮಾಜಮುಖಿ ಚಿಂತನೆಗಳು ನಡೆಯುತ್ತಿದೆ. ಸಮಾಜದಲ್ಲಿ ಯುವವಾಹಿನಿ ಬಗ್ಗೆ ಭರವಸೆ ಮೂಡುತ್ತಿದೆ, ನಿರೀಕ್ಷೆಗಳು ಹೆಚ್ಚುತ್ತಿದೆ, ಇದು ನಮ್ಮ ಮೇಲಿನ ಜವಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದು ನೆನಪಿರಲಿ.

ಬಂಧುಗಳೇ ನೀವೆಲ್ಲ ಸಮಾಜಕ್ಕಾಗಿ ಯುವವಾಹಿನಿಯ ಮೂಲಕ ಸಾಕಷ್ಟು ಕೆಲಸ ಮಾಡುತ್ತಿದ್ದೀರಿ ಆದರೆ ಅದೆಲ್ಲೂ ದಾಖಲುಗೊಳ್ಳುತ್ತಿಲ್ಲ, ಕಳೆದ ಒಂದು ವರುಷದಿಂದ ರಾಜೇಶ್ ಬಂಟ್ವಾಳ್ ಅವರ ನೇತೃತ್ವದಲ್ಲಿ ನಮ್ಮ ವೆಬ್‍ಸೈಟ್ ಆಕರ್ಷಕವಾಗಿ ಮೂಡಿಬರುತ್ತಿದ್ದು ನಮ್ಮೆಲ್ಲ ಕೆಲಸ ಅದರಲ್ಲಿ ದಾಖಲುಗೊಳ್ಳುತ್ತಿದೆ ಹೀಗಾಗಿ ನಮ್ಮೆಲ್ಲ ಸಾಧನೆಯನ್ನು ವೆಬ್‍ಸೈಟ್ ಮತ್ತು ಯುವ ಸಿಂಚನಕ್ಕೆ ಕಳುಹಿಸಿ ನಿಮ್ಮ ಕೆಲಸಕ್ಕೆ ಯುವ ಸಿಂಚನದಲ್ಲಿ ಎಂದೆಂದಿಗೂ ಸ್ಥಳ ಕಾದಿದೆ. ಇದಷ್ಟೆಲ್ಲ ನೀವೂ ಬರಹಗಾರರಾಗಿ ನಮ್ಮ ಸಮಾಜದ ಪ್ರತಿಯೊಬ್ಬ ಯುವ ಬರಹಗಾರರನ್ನು ಪ್ರೇರೆಪಿಸುವುದು ನಮ್ಮ ಗುರಿ, ನಿಮ್ಮ ಕಥೆ, ಕವನ ಲೇಖನ, ಆಶಯಕ್ಕೂ ಯುವ ಸಿಂಚನ ವೇದಿಕೆಯಾಗುತ್ತದೆ. ಬರಹದಿಂದ ಬದಲಾವಣೆಯಾದ ಎಷ್ಟೋ ಇತಿಹಾಸಗಳಿದೆ ನಮ್ಮಿಂದ ಮತ್ತೊಂದು ಇತಿಹಾಸ ಸೃಷ್ಠಿಯಾದರೆ ಸಂತೋಷ ತಾನೆ. ಹಾಗೆಯೇ ಯುವ ಸಿಂಚನ ಸಂಗ್ರಹ ಯೋಗ್ಯ ಸಂಚಿಕೆಯಾದರೆ ನಮ್ಮ ಶ್ರಮವೂ ಸಾರ್ಥಕ ತಾನೇ. ಇದು ಸಾಧ್ಯವಾಗಬೇಕಾದರೆ ನೀವು ಕೈ ಜೋಡಿಸಬೇಕು,  ನಮ್ಮ ಏನೇ ಕಾರ್ಯ ಇದ್ದರೂ ಅದು ಸಮಾಜಕ್ಕಾಗಿ. ನಾವು ನಮ್ಮಿಂದ ನಮ್ಮ ಸಮಾಜಕ್ಕೆ ಯುವ ಸಿಂಚನವೇ ಸೇತು ಬಂಧ.

ಶುಭ ರಾಜೇಂದ್ರ ;  ಸಂಪಾದಕರು:                  ಯುವಸಿಂಚನ ಪತ್ರಿಕೆ

5 thoughts on “ಸಂಪಾದಕರ ಮಾತು : ಶುಭ ರಾಜೇಂದ್ರ

  1. Wish you all the best sister. Let your work and words May reach each and every corner of our community. Regards. Dr Ramesh Salian, Deputy Controller of Examinations, Tumkur University

  2. ಯುವ ಸಿ೦ಚನ ಉತ್ತಮವಾಗಿ ಮೂಡಿ ಬಂದಿದೆ… ಸಂಪಾದಕ ಮಂಡಳಿಗೆ ದೊಡ್ಡ ಸಲಾ೦.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!