27-10-2019, 2:39 AM
ಯುವವಾಹಿನಿ (ರಿ.) ಮುಲ್ಕಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮ ವಾಗಿರುವ ” ತುಳುವೆರೆ ತುಡರ ಪರ್ಬ” ಕಾರ್ಯಕ್ರಮ ದಿನಾಂಕ 26.10 .2019 ರಂದು ಸಂಜೆ 6 .30ಕ್ಕೆ ಸರಿಯಾಗಿ ನಮ್ಮ ಘಟಕದ ಅಧ್ಯಕ್ಷ ರಾದ ಸತೀಶ್ ಕಿಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಮುಲ್ಕಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಜರಗಿತು. ಸಭಾಕಾರ್ಯಕ್ರಮದ ಪ್ರಾರಂಭದಲ್ಲಿ ವರುಣ್ ಪೂಜಾರಿ ಯವರು ಪ್ರಾರ್ಥನೆ ಗೈದರು. ಅಧ್ಯಕ್ಷ ರಾದ ಸತೀಶ್ ಕಿಲ್ಪಾಡಿಯವರು ಬಂದ ಅತಿಥಿ ಗಣ್ಯ ರಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾಗತ ಕೋರಿ ಅತಿಥಿ ವರ್ಯರನ್ನು ಶಾಲು […]
Read More
15-10-2019, 6:35 AM
ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 15.10.19 ರಂದು ಧಾರ್ಮಿಕ ಶಿಕ್ಷಣ_ ಭಜನಾ ತರಬೇತಿ ಕಮ್ಮಟ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯದಲ್ಲಿ ಬಿಲ್ಲವ ಸೇವಾ ಸಮಾಜದ ಹಿರಿಯರು ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು . ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವಯ೯ರಿಗೆ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಹಿರಿಯ ಸದಸ್ಯರಾದ […]
Read More
04-10-2019, 9:40 AM
ಶ್ರೀ ಚಾಮುಂಡಿ ರಾಹು ಗುಳಿಗ ದೇವಸ್ಥಾನದಲ್ಲಿ ನಮ್ಮ ಯುವವಾಹಿನಿ(ರಿ)ಶಕ್ತಿನಗರ ಘಟಕದ ವತಿಯಿಂದ ಭಜನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು ,ಒಂದು ಘಂಟೆಗಳ ಸುಶ್ರಾವ್ಯ ಗಾಯನದೊಂದಿಗೆ ಶ್ರೀ ಯಶವ0ತ ಕರ್ಕೇರ ಎಲ್ಲಾರ ಮನ ಗೆದ್ದರು ಭಜನೆಯಲ್ಲಿ ಶ್ರೀನಿವಾಸ ಪೂಜಾರಿ, ಜಯರಾಮ ಪೂಜಾರಿ , ಲಕ್ಷ್ಮೀಕಾಂತ್, ಮಾರ್ರಪ್ಪ ಪೂಜಾರಿ, ಭವಾನಿಶಂಕರ, ಭವ್ಯಕುಮಾರ್, ಯೋಗೀಶ್ ಸುವರ್ಣ, ರೋಹಿಣಿ, ರಾಜೀವಿ, ಸುರೇಖಾ, ಶಂಕರ್ ಪೂಜಾರಿ, ಅನನ್ಯ ಮುಂತಾದ ಹಲವೂ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮ ಚಂದಗಾಣಿಸಿದರು..
Read More
17-09-2019, 10:40 AM
ನಮ್ಮ ಎಲ್ಲಾ ಯುವವಾಹಿನಿ ಭಂಧುಗಳು ದಿನಾಂಕ17/09/2019ನೇ ಮಂಗಳವಾರ ಸಮಯ 6:45ಕ್ಕೆ ನಮ್ಮ ಯುವವಾಹಿನಿ ಶಕ್ತಿನಗರ ಘಟಕವು ನೂತನವಾಗಿ ರಚಿಸಿರುವ “ಯುವವಾಹಿನಿ ಭಜನಾ ಸಮಿತಿ” ಯ ಉಧ್ಘಾಟನಾ ಕಾರ್ಯಕ್ರಮ ಹಾಗೂ ತಂಡದಿಂದ ಭಜನಾ ಕಾರ್ಯಕ್ರಮ ಕೊಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿದೆ, ಭಜನೆ ಸಮಿತಿಯನ್ನು ಮಠದ ಧರ್ಮದರ್ಶಿ ನೆರವೇರಿಸಿ ಧಾರ್ಮಿಕ ಉಪಾನ್ಯಾಸ ಮಾಡಿದ ಧರ್ಮದರ್ಶಿ ಅನಂತಕ್ರಷ್ಣರವರು ಭಜನೆ ಯಿಂದ ವಿಭಜನೆ ಆಗಲಾರದು ಹಾಗೂ ಎಲ್ಲರಿಗೂ ಒಳಿತಾಗಲಿ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹ ನಿಮ್ಮೆಲ್ಲರಿಗೂ ಇರಲಿ ಎಂದು ಆಶಿರ್ವದಿಸಿದರು ನಮ್ಮೊಂದಿಗೆ […]
Read More
15-09-2019, 10:37 AM
ನಮ್ಮ ಸಮಾಜದಲ್ಲಿ ಮದುವೆಯ ಮದರಂಗಿ ಕಾರ್ಯಕ್ರಮದಲ್ಲಿ ಮದ್ಯಪಾನವು ವಿಪರೀತವಾಗಿದ್ದು ಅದರಿಂದ ಆಗುವ ತೊಂದರೆಗಳು ಹಲವಾರು. ಬ್ರಹ್ಮಶ್ರೀ ನಾರಾಯಣ ಗುರುಗಳು ಮದ್ಯಪಾನವನ್ನು ಬಹಳ ವಿರೋಧಿಸಿದ್ದರು. ಮೂಡಬಿದ್ರೆ ಯುವವಾಹಿನಿ ಘಟಕ ಬ್ರಹ್ಮಶ್ರೀ ನಾರಾಯಣ ಗುರುಗಳ 165 ಜನ್ಮದಿನಾಚರಣೆಯ ಅಂಗವಾಗಿ ಮದ್ಯಪಾನ ಮುಕ್ತ ಮದರಂಗಿ ಕಾರ್ಯಕ್ರಮವನ್ನು ನಡೆಸಬೇಕೆಂದು ವಿನಂತಿಸುವ ಗುರು ಸಂದೇಶ ಸಂಕಲ್ಪ ಎಂಬ ನಾಮಾಂಕಿತ ಮನವಿ ಪತ್ರವನ್ನು ದಿನಾಂಕ 15/09/2019 ರಂದು ಕಡಂದಲೆ ಪಾಲಡ್ಕ ಬಿಲ್ಲವ ಸಂಘದಲ್ಲಿ ನಡೆದ ಗುರು ಜಯಂತಿ ಕಾರ್ಯಕ್ರಮದಲ್ಲಿ ಹೊಸ್ಮಾರು ಬಲ್ಲೆಟ್ಟು ಸ್ವಾಮಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ […]
Read More
08-09-2019, 5:07 PM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 08.09.19 ರಂದು ಹಳ್ಳಿಡೊಂಜಿ ದಿನ ಕಾರ್ಯಕ್ರಮವು ಘಟಕದ ಸದಸ್ಯರಾದ *ಪ್ರಸಾದ್ ಈದು ಬಟ್ಟೇಣಿ ಇವರ ಊರು ಈದು ಬಟ್ಟೇಣಿ, ಕಾರ್ಕಳ* ಇಲ್ಲಿ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಘಟಕದ 50 ಸದಸ್ಯರು ಕೂಳೂರಿನಿಂದ ಹೊರಟು 10.30 ಕ್ಕೆ ಶಿರ್ತಾಡಿ ತಲುಪಿ ಘಟಕದ ಸದಸ್ಯರಾದ *ಜಯ ಬಂಗೇರ* ಅವರ ಮನೆಯಲ್ಲಿ ಉಪಹಾರ ಮುಗಿಸಿ ನಂತರ ಅಲ್ಲಿಂದ ಹೊಸ್ಮಾರು ಆಶ್ರಮಕ್ಕೆ ಭೇಟಿ ನೀಡಿ, *ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರ ದರ್ಶನ […]
Read More
08-09-2019, 4:48 PM
ದಿನಾಂಕ 08/09/2019 ರಂದು ಯುವವಾಹಿನಿ ಸಭಾಂಗಣದಲ್ಲಿ ಸೋಣ ಸಂಭ್ರಮ ಕಾರ್ಯಕ್ರಮವು ಬೆಳಗ್ಗೆ 9:30ರಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮಾಶ್ರೀಕಾಂತ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗೋಕರ್ಣನಾಥೇಶ್ವರ ಬಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ದೀಪ್ತಿ ನಾಯಕ್ ಉದ್ಘಾಟಿಸಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ನಾನು ಕಲಿತೆ ಹಾಗೂ ಈ ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಸಿವ ಕೆಲಸ ನಮ್ಮಿಂದ ಆಗಬೇಕು ಹಾಗಾಗಿ ಆದಷ್ಟು ಮಕ್ಕಳನ್ನು ಜೋಡಿಸಿಕೊಳ್ಳುವಂತೆ ತಿಳಿಸಿದರು.ನಂತರ ಶಕ್ತಿ ಎಜುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ್ ಆಚಾರ್ಯ ಸೋಣದ ಮದಿಪನ್ನು ನೀಡಿ […]
Read More
27-08-2019, 1:17 PM
ಯುವವಾಹಿನಿ(ರಿ.) ಅಡ್ವೆ ಘಟಕದ ಆತಿಥ್ಯದಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆಯ ಅಂಗವಾಗಿ ದಿನಾಂಕ 24-08-2019 ಶನಿವಾರದಂದು ಪುಟಾಣಿಗಳಿಗೆ ಮುದ್ದುಕೃಷ್ಣ ಸ್ಪರ್ಧೆ, ಬಾಲಕೃಷ್ಣ ಸ್ಪರ್ಧೆ ಹಾಗೂ ಶಾಲಾ ಮಕ್ಕಳಿಗೆ ಭಜನೆ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
Read More
27-08-2019, 2:32 AM
ಸಾರ್ವಜನಿಕ ಗಣೇಶೋತ್ಸವ ಸಮಿತಿ, ಅಲೆವೂರ್ ಇದರ ಜಿಲ್ಲಾ ಮಟ್ಟದ ಸಂಗೀತ ಮತ್ತು ಚಿತ್ರ ಕಲೆ ಸ್ವರ್ಧೆ ಯುವವಾಹಿನಿ ಉಡುಪಿ ಘಟಕ ಸಹಭಾಗಿತ್ವದಲ್ಲಿ ದಿನಾಂಕ 25/08/2019 ರಂದು ನಡೆಯಿತು. ನಮ್ಮ ಘಟಕದ ಉಪಾಧ್ಯಕ್ಷರಾದ ಜಗದೀಶ್ ಕುಮಾರ್,ನಿಕಟಪೂರ್ವ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್,ಕಾರ್ಯದರ್ಶಿ ಮಹಾಬಲ ಅಮೀನ್ ಕಾರ್ಯಕ್ರಮವನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಬಹಳ ಉತ್ಸಹ ದಿಂದ ಈ ಸ್ವರ್ಧೆಯಲ್ಲಿ ಬಗವಹಿಸಿದರು.ಯುವವಾಹಿನಿ ಉಡುಪಿ ಘಟಕದ ನಿಕಟಪೂರ್ವ ಅಧ್ಯಕ್ಷ ರಾದ ಅಶೋಕ್ […]
Read More
26-08-2019, 5:48 PM
ಯುವವಾಹಿನಿ(ರಿ)ಎಕ್ಕಾರು-ಪೆರ್ಮುದೆ ಹಾಗು ಬಿಲ್ಲವ ಸಮಾಜ ಸೇವಾ ಸಂಘ ಎಕ್ಕಾರು-ಪೆರ್ಮುದೆ ಇದರ ಜಂಟಿ ಆಶ್ರಯದಲ್ಲಿ ರಾಧೆ-ಕೃಷ್ಣ ಸ್ಪರ್ಧೆ ೨೦೧೯ ದಿನಾಂಕ ೨೫/೦೮/೨೦೧೯ ರಂದು ಬಿಲ್ಲವ ಸಮಾಜ ಸೇವಾ ಸಂಘ ದ ಸಭಾ ಭವನ ದಲ್ಲಿ ಜರುಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂದೇಶ್ ಪೂಜಾರಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘದ ಗೌರವ ಅಧ್ಯಕ್ಷರಾದ ಯಾದವ ಕೋಟ್ಯಾನ್, ಪ್ರದೀಪ್ ಕುಮಾರ್ ಸುವರ್ಣ, ರಮಾನಂದ ಸಾಲ್ಯಾನ್, ಉಪಾಧ್ಯಕ್ಷರಾದ ಚಂದ್ರಹಾಸ ಪೂಜಾರಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ – ಅಕ್ಷರ ಎಕ್ಕಾರು, ದ್ವಿತೀಯ […]
Read More