ಕೊಲ್ಯ :- ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದಲ್ಲಿ ತಾ. 16 ಆಗಸ್ಟ್ 2022 ರಂದು ಗುರುಗಳಾದ ಡಾ. ಅರುಣ್ ಉಳ್ಳಾಲ್ ರವರಿಂದ ಓಂಕಾರದೊಂದಿಗೆ ಆರಂಭಗೊಂಡು ಗಣಪತಿ ಸ್ತುತಿ, ಗುರುಸ್ತುತಿ ಮುಖೇನ ತರಗತಿಯನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳಿಂದಲೇ ನಿತ್ಯಾನುಷ್ಠಾನ ಶ್ಲೋಕ ಪಠಣೆ ಮಾಡಿಸಲಾಯಿತು. ಇಂದಿನ ತರಗತಿಯಲ್ಲಿ ವಿಶೇಷವಾಗಿ ರಕ್ಷಾ ಬಂಧನದ ಮಹತ್ವವನ್ನು ಗುರುಗಳು ತಿಳಿಸಿಕೊಟ್ಟರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಸೇರಿ ಪರಸ್ಪರ ರಕ್ಷೆ ಕಟ್ಟಿ ಸಹೋದರತೆಯ ಹಬ್ಬ ರಕ್ಷಾ ಬಂಧನ ವನ್ನು ಸಂಭ್ರಮದಿಂದ ಆಚರಿಸಲಾಯಿತು.ವಿಶೇಷವಾಗಿ ಸಂಘದ ಪ್ರಾರ್ಥನೆಯೊಂದಿಗೆ ರಕ್ಷಾ ಬಂಧನ ನೆರವೇರಿದ್ದು ತರಗತಿಗೆ ಮತ್ತಷ್ಟು ಮೆರುಗು ನೀಡಿತು. ಕೃಷ್ಣ ಜನ್ಮಾಷ್ಠಮಿಯ ಮಹತ್ವ ಹಾಗೂ ಅಷ್ಟಮಿ ಆಚರಣೆ ಮಾಡುವ ಕುರಿತು ಗುರುಗಳು ತಿಳಿಸಿಕೊಟ್ಟರು. ಶಾಂತಿ ಮಂತ್ರದೊಂದಿಗೆ ತರಗತಿ ಮಂಗಳವಾಯಿತು. ಪಾನಕ ಹಾಗೂ ಸಿಹಿಯ ಸೇವೆಯನ್ನು ಕು| ಉನ್ನತಿ ಇವರು ನೀಡಿರುತ್ತಾರೆ. ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.