ಶಕ್ತಿ ನಗರ :- ಯುವವಾಹಿನಿ (ರಿ.) ಶಕ್ತಿನಗರ ಘಟಕ ಇದರ ವತಿಯಿಂದ 11 ಆಗಸ್ಟ್ 22ರ ಗುರುವಾರ ದಂದು ಘಟಕದ ವತಿಯಿಂದ ಪವಿತ್ರ ಹಬ್ಬ ರಕ್ಷಾ ಬಂಧನ ಆಚರಣಾ ಕಾರ್ಯಕ್ರಮಕ್ಕೆ ಘಟಕದ ಮಾಜಿ ಅಧ್ಯಕ್ಷರಾದ ಭಾರತೀ ಜಿ ಅಮೀನ್ ರವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಸಭೆಯಲ್ಲಿ ಸಹೋದರತ್ವದ ಬಗ್ಗೆ ಅಧ್ಯಕ್ಷರಾದ ಜಯರಾಮ್ ಇವರು ಮಾತನಾಡುತ್ತಾ ಸಹೋದರ ಮತ್ತು ಸಹೋದರಿ ಎನ್ನುವ ಈ ಸುಂದರ ಬಂಧದ ಮಹತ್ವವನ್ನು ಗುರುತಿಸಲು, ಪ್ರತಿ ವರ್ಷ, ರಕ್ಷಾ ಬಂಧನ ಹಬ್ಬವನ್ನು ನಮ್ಮ ಯುವವಾಹಿನಿ ಘಟಕದಲ್ಲಿ ಆಚರಿಸುವುದು ಸಂತಸ ತಂದಿದೆ . ಈ ದಿನದಂದು, ಸಹೋದರಿಯರು ತಮ್ಮ ಸಹೋದರರ ಕೈಗಳಿಗೆ ರಾಖಿ ಕಟ್ಟುತ್ತಾರೆ ಮತ್ತು ಯಾವಾಗಲೂ ಕಾವಾಲಾಗಿರುವಂತೆ ಭರವಸೆಯನ್ನು ತೆಗೆದುಕೊಳ್ಳುತ್ತಾರೆ. ಈ ದಿನ ಅನೇಕ ಸಹೋದರ – ಸಹೋದರಿಯರು ಪರಸ್ಪರ ಜೊತೆಗಿದ್ದು ಹಬ್ಬವನ್ನು ಆಚರಿಸಿದರೆ, ಇನ್ನು ಕೆಲವು ಸಹೋದರ ಸಹೋದರಿಯರು ಯಾವುದೋ ಕಾರಣದಿಂದ ದೂರವಿರಬಹುದು.ಆದರೂ ಪರಸ್ಪರ ಅರ್ಥೈಸಿಕೊಂಡು ಆಗಮಿಸಿ ಸುಂದರ ಕಾರ್ಯಕ್ರಮಕ್ಕೆ ಇoಬು ನೀಡಿದ ಎಲ್ಲಾ ಯುವವಾಹಿನಿ ಸಹೋದರಿ ಸಹೋದರರಿಗೆ ಅನಂತಾನಂತ ವಂದನೆಗಳು . ರಕ್ಷಾ ಬಂಧನ 2022 ಶುಭಾಶಯಗಳೊಂದಿಗೆ, ಇತಿಹಾಸದ ತುಣುಕುಗಳನ್ನು ಬಿಡಿಸಿ ಹಿತ ನುಡಿದರು. ಸಭೆಯಲ್ಲಿ ಗಣೇಶ್ ಮಹಾಕಾಳಿ, ನವೀನ್ ಕುಮಾರ್, ವಿಶ್ವನಾಥ್ ಕುಂದರ್, ಯೋಗೀದ್ರ, ಕೃಷ್ಣಪ್ಪ ಅಂಚನ್, ಪದ್ಮಾವತಿ, ರಾಜೀವಿ,, ಚಿತ್ರಲತಾ, ಯಶ್ವಿತ್,ಕಿಶೋರ್ j, ಮುಂತಾದ ಗಣ್ಯರು ಮಕ್ಕಳು ಉಪಸ್ಥಿತರಿದ್ದರು.