Yuvavahini

ಕೊಲ್ಯ

ಮದ್ಯಮುಕ್ತ ಮದರಂಗಿ

ಯುವವಾಹಿನಿಯೆಂಬ ಕೂಡುಕುಟುಂಬದ ಸದಸ್ಯರೊಬ್ಬರ ಮದುವೆಯಲ್ಲಿ “””ಮದ್ಯಮುಕ್ತ ಮದರಂಗಿ“”” ಪ್ರತಿಜ್ಞಾ ವಿಧಿ ಸಂಕಲ್ಪ ದೊಂದಿಗೆ ನೆರವೇರಿಸಿ ನಾರಾಯಣ ಗುರುಗಳ ಸಂದೇಶವನ್ನು ಸಮಾಜಕ್ಕೆ ಸಾರಿದ ಅಭೂತಪೂರ್ವ ಕ್ಷಣ ನಮ್ಮ ಘಟಕದ ಸದಸ್ಯರಾದ ಚಿ.ರಕ್ಷಿತ್ ಕೃಷ್ಣ ಸನಿಲ್ ರವರ ಮದುವೆಯ ಮದರಂಗಿ ಕಾರ್ಯಕ್ರಮ ವು ತಾರೀಕು 13-11-2019 ನೇ ಬುಧವಾರದಂದು ಸಾಯಂಕಾಲ ಮದುಮಗನ ನಿವಾಸ ಕೊಲ್ಯ ಕನೀರುಬೀಡುವಿನಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಸಂತ ಸೆಬಾಸ್ಟಿಯನ್ ಕಾಲೇಜು ಪೆರ್ಮನ್ನೂರು ತೊಕ್ಕೋಟು ಇಲ್ಲಿಯ ಉಪನ್ಯಾಸಕರಾದ ಸಾಹಿತಿ ಅರುಣ್ ಉಳ್ಳಾಲ್ ರವರ ಆಶಯ ಭಾಷಣದಲ್ಲಿ ತಿಳಿಯಪಡಿಸಿದ ವಿಚಾರ […]

Read More

ಧಾರ್ಮಿಕ ಶಿಕ್ಷಣ ಪದ್ಧತಿ ಹಾಗೂ ಭಜನಾ ತರಬೇತಿ ಕಮ್ಮಟ

ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಹಾಗೂ ಯುವ ವಾಹಿನಿ(ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಜರುಗುವ “ಧಾರ್ಮಿಕ ಶಿಕ್ಷಣ ಪದ್ಧತಿ ಹಾಗೂ ಭಜನಾ ತರಬೇತಿ ಕಮ್ಮಟ” ನಿರಂತರವಾಗಿ ನಡೆಯುತ್ತಿದ್ದು, ಇಂದು ದ್ವಿತೀಯ ತರಗತಿಯು ಭಜನಾ ಗುರುಗಳಾದ ಅರುಣ್ ಉಳ್ಳಾಲ್ ರವರಿಂದ ಸಂಜೆ 7.00 ರಿಂದ 8.00 ಗಂಟೆಯ ವರೆಗೆ ಜರಗಿತು. ಗುರುಗಳು ದೀಪಾವಳಿ ಹಬ್ಬದ ಮಹತ್ವವನ್ನು ಹಾಗೂ ಹಿಂದೂ ಪಂಚಾಂಗದ ಬಗ್ಗೆ ಕೆಲವು ಮಾಹಿತಿಗಳನ್ನು ಸಭೆಯಲ್ಲಿ ನೀಡಿದರು. ಭಜನೆಯಲ್ಲಿ ಸ್ವರ ಉಚ್ಛಾರದ ಬಗ್ಗೆ ಇರುವ ಮಹತ್ವಗಳನ್ನು ತಿಳಿಸಿದರು. […]

Read More

ಕಾರ್ಯಕ್ರಮ ನಿರೂಪಣಾ ನಿಯಮಗಳ ಬಗ್ಗೆ ತರಬೇತಿ ಕಾರ್ಯಾಗಾರ

ಯುವವಾಹಿನಿ (ರಿ) ಕೊಲ್ಯ ಘಟಕ ವತಿಯಿಂದ ದಿನಾಂಕ 19.10.19 ರಂದು ಶನಿವಾರ ಸಂಜೆ 7.30 ಕ್ಕೆ ಕಾರ್ಯಕ್ರಮ ನಿರೂಪಣಾ ನಿಯಮಗಳ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಅವರ ನಿವಾಸ (ಒಲವು) ದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಯುವವಾಹಿನಿಯ ಸ್ವರ ಮಾಣಿಕ್ಯ ಶ್ರೀ ಯುತ. ದಿನೇಶ್ ಸುವರ್ಣ ರಾಯಿ ಅವರನ್ನು ನಮ್ಮ ಘಟಕದ ಅಧ್ಯಕ್ಷರು ಹೂ ಕೊಟ್ಟು ಸ್ವಾಗತಿಸಿದರು. ಹಾಗೂ ತರಬೇತಿಗೆ ಬಂದ ಸರ್ವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಶ್ರೀ ಯುತ. ದಿನೇಶ್ ಸುವರ್ಣ […]

Read More

ಧಾರ್ಮಿಕ ಶಿಕ್ಷಣ – ಭಜನಾ ತರಬೇತಿ ಕಮ್ಮಟ

ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 15.10.19 ರಂದು ಧಾರ್ಮಿಕ ಶಿಕ್ಷಣ_ ಭಜನಾ  ತರಬೇತಿ ಕಮ್ಮಟ  ಬ್ರಹ್ಮಶ್ರೀ  ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯದಲ್ಲಿ ಬಿಲ್ಲವ ಸೇವಾ ಸಮಾಜದ ಹಿರಿಯರು  ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು . ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವಯ೯ರಿಗೆ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಹಿರಿಯ ಸದಸ್ಯರಾದ […]

Read More

ನಾರಾಯಣ ಗುರು ಜಯಂತಿ : ಗುರುಸಂದೇಶ

ವಿಶ್ವ ಬಿಲ್ಲವರ ಸೇವಾ ಚಾವಡಿ(ರಿ) ಹಾಗೂ ಯುವವಾಹಿನಿ (ರಿ)ಕೊಲ್ಯ ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 165 ನೇ ಜಯಂತಿ ಯ ಅಂಗವಾಗಿ “ಗುರುಸಂದೇಶ” ಕಾರ್ಯಕ್ರಮವು ತಾರೀಕು 13-09-2019 ನೇ ಶುಕ್ರವಾರ ಬೆಳಿಗ್ಗೆ ಘಂಟೆ 8 ಕ್ಕೆ ಸರಿಯಾಗಿ ಅಭಯ ಆಶ್ರಯ ಅಸೈಗೋಳಿ ಇಲ್ಲಿ ಅರ್ಥಪೂರ್ಣವಾಗಿ ಜರಗಿತು. ಕಾರ್ಯಕ್ರಮ ವು ಆಶ್ರಮ ದ ಹಿರಿಯ ನಿವಾಸಿ ಶ್ರೀ ರಾಜಾರಾಮ ರವರು ಗುರುವರ್ಯರಿಗೆ ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು.ವಿಶ್ವ ಬಿಲ್ಲವರ ಸೇವಾ ಚಾವಡಿಯ ಗೌರವ ಸಲಹೆಗಾರರಾದ ಕುಸುಮಾಕರ ಕುಂಪಲರವರು ಗುರು […]

Read More

ಗುರುವಂದನಾ ಕಾರ್ಯಕ್ರಮ

ಯುವವಾಹಿನಿ (ರಿ) ಕೊಲ್ಯ ಘಟಕ ಇದರ ಸಾಪ್ತಾಹಿಕ ಸಭೆ ಹಾಗೂ ಗುರುವಂದನಾ ಕಾರ್ಯಕ್ರಮ ದಿನಾಂಕ 5.9.19 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕೊಲ್ಯದಲ್ಲಿ ಜರುಗಿತು. ಪ್ರಾರ್ಥನೆಯೊಂದಿಗೆ ಸಭೆಯು  ಘಟಕದ ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ  ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಲಾಯಿತು ಅಧ್ಯಕ್ಷರು  ಸಭೆಗೆ  ಬಂದ ಅತಿಥಿಗಳನ್ನು  ಮತ್ತು ಸದಸ್ಯರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು ಕಾರ್ಯದರ್ಶಿ ಆನಂದ್ ಅಮೀನ್ ಗತ ಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು ಸದಸ್ಯರು ಚಪ್ಪಾಳೆ ಮೂಲಕ ಅನುಮೋದನೆ ನೀಡಿದರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165 ನೇ […]

Read More

73ನೇ ಸ್ವಾತಂತ್ರ್ಯ ದಿನಾಚರಣೆ

ಕೊಲ್ಯ : ರೋಟರಿ ಸಮುದಾಯದಳ ಕೊಲ್ಯ ಸೋಮೇಶ್ವರ ,ಹಿಲ್ಸ್ ಮಂಗಳೂರು ,ಪಾದಲ್ಪಾಡಿ ಫ್ರೇಡ್ಸ್ ಪಾದಲ್ಪಾಡಿ ಯುವವಾಹಿನಿ (ರಿ) ಕೊಲ್ಯ ಘಟಕ ಇವರ ಸಹಭಾಗಿತ್ವದಲ್ಲಿ ಅಭಯ ಆಶ್ರಮ ಅಸೈಗೋಳಿ ಇದರ ಹಿರಿಯರೊಂದಿಗೆ 73ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಹಭೋಜನ ಕಾರ್ಯಕ್ರಮ ದಿನಾಂಕ 15.8.19 ರ ಗುರುವಾರ ಬೆಳಿಗ್ಗೆ 11.30 ಕೆ ಜರುಗಿತು ಈ ಕಾರ್ಯಕ್ರಮದಲ್ಲಿ ಯುವ ವಾಹಿನಿಯ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದರು ಮತ್ತು ನಮ್ಮ ಘಟಕದ ವತಿಯಿಂದ ಎರಡು ಸೀಲಿಂಗ್ ಫ್ಯಾನ್ ಗಳನ್ನು ಆಶ್ರಮಕ್ಕೆ ನೀಡಲಾಯಿತು  ಕಾರ್ಯಕ್ರಮದಲ್ಲಿ ಘಟಕದ […]

Read More

ಸದಸ್ಯರ ಯೋಗ ಕ್ಷೇಮಕ್ಕೆ ಸ್ಪಂದಿಸುವ ಸೇವಾ ಯೋಜನೆ ಹಸ್ತಾಂತರ

ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಮೋಹನ್ ಮಾಡೂರ್ ರವರು ಕಳೆದ 7 ತಿಂಗಳಿನ ಹಿಂದೆ ಬೈಕ್ ಅಪಘಾತಕ್ಕೊಳಗಾದ ಪರಿಣಾಮವಾಗಿ ತನ್ನ ಒಂದು ಕಾಲು ಶಸ್ತ್ರಚಿಕಿತ್ಸೆ ಗೊಳಗಾಗಿ ತನ್ನ ಕುಟುಂಬ ನಿರ್ವಹಣೆಯನ್ನು ಮಾಡಲು ತಾನು ಮಾಡುತ್ತಿರುವ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗದೆ ಬೇರಾವ ಸಂಪಾದನೆ ಕೂಡಾ ಇವರಿಗಿಲ್ಲ.ಇವರ ಪತ್ನಿ ವೀಣಾ ರವರು ಕೂಡಾ ಘಟಕದ ಸದಸ್ಯೆಯಾಗಿದ್ದು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು […]

Read More

ಯುವವಾಹಿನಿ (ರಿ)ಕೊಲ್ಯ ಘಟಕದ ವತಿಯಿಂದ ವನಮಹೋತ್ಸವವ

ಕೊಲ್ಯ : ದಿನಾಂಕ21.7.19 ರಂದು ಯುವವಾಹಿನಿ (ರಿ)ಕೊಲ್ಯ ಘಟಕದ ವತಿಯಿಂದ ವನಮಹೋತ್ಸವವನ್ನುಆಚರಿಸಲಾಯಿತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಇದಕ್ಕೆ ಚಾಲನೆ ಕೊಡಲಾಯಿತು ಘಟಕದ ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಅಮೀನ್ ಕೋಶಾಧಿಕಾರಿ ಯತೀಶ್ ಕೊಲ್ಯ ಸಂಘಟನಾ ಕಾರ್ಯ ದರ್ಶಿ ನಿತಿನ್ ಕರ್ಕೇರ ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ಕುಸುಮಾಕರ್ ಕುಂಪಲ ಹಾಗೂ ಘಟಕದ ನಿರ್ದೇಶಕರು ಸದಸ್ಯರು ದೇವಸ್ಥಾನದ ಕುಟುಂಬಸ್ಥರು […]

Read More

ಯುವವಾಹಿನಿ (ರಿ) ಕೊಲ್ಯ ಘಟಕ ಇದರ ವತಿಯಿಂದ ಚಿಕ್ಕಮಗಳೂರು ಪ್ರವಾಸ

ಕೊಲ್ಯ ; ಯುವವಾಹಿನಿ (ರಿ) ಕೊಲ್ಯ ಘಟಕ ಇದರ ವತಿಯಿಂದ ಚಿಕ್ಕಮಗಳೂರು ಪ್ರವಾಸ ಕೈಗೊಳ್ಳಲಾಯಿತು ಒಟ್ಟು 30 ಜನರ ತಂಡ ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರು ಈ ಪ್ರವಾಸದ ಸಂಪೂರ್ಣ ಜವಾಬ್ದಾರಿಯನ್ನು ನಿಕಟ ಪೂರ್ವ ಅಧ್ಯಕ್ಷರಾದ ಕುಸುಮಾಕರ್ ಕುಂಪಲ ಅವರಿಗೆ ವಹಿಸಲಾಯಿತು ಶನಿವಾರ ಬೆಳಗ್ಗೆ 5.00 ಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ದಲ್ಲಿ ಪೂಜೆಯನ್ನು ಸಲ್ಲಿಸಿ ಹೊರಡಲಾಯಿತು ಚಾರ್ಮಾಡಿ ಘಾಟಿಯಲ್ಲಿ ಬೆಳಗಿನ ಉಪಹಾರ ಮಾಡಿದೆವು ಅಲ್ಲಿಂದ ಹೊರಟು ನಾವು ಸರಿಯಾಗಿ 10.30 ಕ್ಕೆ ದೇವಿ ಗಿರಿ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!