ಯುವವಾಹಿನಿಯೆಂಬ ಕೂಡುಕುಟುಂಬದ ಸದಸ್ಯರೊಬ್ಬರ ಮದುವೆಯಲ್ಲಿ
“””ಮದ್ಯಮುಕ್ತ ಮದರಂಗಿ“””
ಪ್ರತಿಜ್ಞಾ ವಿಧಿ ಸಂಕಲ್ಪ
ದೊಂದಿಗೆ ನೆರವೇರಿಸಿ ನಾರಾಯಣ ಗುರುಗಳ ಸಂದೇಶವನ್ನು ಸಮಾಜಕ್ಕೆ ಸಾರಿದ ಅಭೂತಪೂರ್ವ ಕ್ಷಣ
ನಮ್ಮ ಘಟಕದ ಸದಸ್ಯರಾದ ಚಿ.ರಕ್ಷಿತ್ ಕೃಷ್ಣ ಸನಿಲ್ ರವರ ಮದುವೆಯ ಮದರಂಗಿ ಕಾರ್ಯಕ್ರಮ ವು ತಾರೀಕು 13-11-2019 ನೇ ಬುಧವಾರದಂದು ಸಾಯಂಕಾಲ ಮದುಮಗನ ನಿವಾಸ ಕೊಲ್ಯ ಕನೀರುಬೀಡುವಿನಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಸಂತ ಸೆಬಾಸ್ಟಿಯನ್ ಕಾಲೇಜು ಪೆರ್ಮನ್ನೂರು ತೊಕ್ಕೋಟು ಇಲ್ಲಿಯ ಉಪನ್ಯಾಸಕರಾದ ಸಾಹಿತಿ ಅರುಣ್ ಉಳ್ಳಾಲ್ ರವರ ಆಶಯ ಭಾಷಣದಲ್ಲಿ ತಿಳಿಯಪಡಿಸಿದ ವಿಚಾರ ಈ ಕಾರ್ಯಕ್ರಮವು “ಪರಿವರ್ತನೆ ಜಗದ ನಿಯಮ” ಎಂಬ ಕೃಷ್ಣವಾಣಿಯಂತೆ ನಕಾರಾತ್ಮತೆಯಿಂದ ಸಕಾರಾತ್ಮತೆಯೆಡೆಗೆ ಹೊಸ ದಾರಿಯನ್ನು ಎತ್ತಿ ತೋರಿಸುವಂತಿದೆ,ಮಾನವ ಜೀವನದಲ್ಲಿ ವೈದಿಕ ಜಗತ್ತು ಹದಿನಾರು ನಮೂನೆಯ ಸಂಸ್ಕಾರವನ್ನು ತಿಳಿಯಪಡಿಸಿದೆ,ಅದುವೇ ಷೋಡಶ ಸಂಸ್ಕಾರ ಈ ಷೋಡಶ ಸಂಸ್ಕಾರದಲ್ಲಿ ಮೂರು ಪ್ರಮುಖವಾದ ಸಂಸ್ಕಾರಗಳನ್ನು ನಮ್ಮ ಧರ್ಮಗುರುಗಳು ಹಾಗೂ ವೈದಿಕರು ಮುಖ್ಯವಾಗಿ ಅಳವಡಿಸಿಕೊಂಡಿದ್ದಾರೆ.ಅದರಲ್ಲಿ ಬಹು ಮುಖ್ಯವಾಗಿ ಮಧ್ಯ ಭಾಗದಲ್ಲಿ ಬರುವಂತಹ ಸಂಸ್ಕಾರ ಮದುವೆ.ಮದುವೆ ಅನ್ನುವಂತಹ ಕ್ರಮ ಹಿಂದೂ ಸಂಸ್ಕೃತಿಯಲ್ಲಿ ಅದರದ್ದೇ ಆದ ಇತಿಹಾಸ ಇದೆ ಅದನ್ನು ಉಳಿಸುವ ಪ್ರಯತ್ನವನ್ನು ಹಿಂದೂ ಸಂಸ್ಕೃತಿ,ಹಿಂದೂ ಧರ್ಮಕ್ಕನುಗುಣವಾಗಿ ನಾವು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಧರ್ಮ ಉಳಿಯುತ್ತದೆ ಎಂದು ಆಶಯ ಭಾಷಣದಲ್ಲಿ ನುಡಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ರವರು 20 ಕ್ಕೂ ಅಧಿಕ ಸದಸ್ಯರಿಗೆ ಹಾಗೂ ಆಸಕ್ತ ಬಂಧುಗಳಿಗೆ ಪ್ರತಿಜ್ಞಾ ವಿಧಿ ಸಂಕಲ್ಪವನ್ನು ಬೋಧಿಸಿ ಸರಳ ಸಮಾರಂಭಕ್ಕೆ ಆದ್ಯತೆ ನೀಡೋಣ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಮದುವೆ ಎಂಬ ಶುಭಕಾರ್ಯದಲ್ಲಿ ಮಧ್ಯಮ ವರ್ಗದವರ ಸಾಲದ ಹೊರೆಯನ್ನು ತಗ್ಗಿಸಲು ಇಂತಹ ಸರಳ ಕಾರ್ಯಕ್ರಮದ ಆಯೋಜನೆ ಮಾಡುವ ಮೂಲಕ ಆಗಲು ಸಾಧ್ಯ ಎಂದು ಹೇಳಿದರು.
ಘಟಕದ ಅಧ್ಯಕ್ಷರಾದ ಆನಂದ ಮಲಯಾಳಕೋಡಿಯವರು ಮಾತನಾಡಿ ಗುರುಗಳ ಸಂದೇಶವನ್ನು ಸಾರುವ ಈ ಅರ್ಥವತ್ತಾದ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲು ಆಸಕ್ತರಿದ್ದಲ್ಲಿ ಯುವವಾಹಿನಿ ಯು ಸದಾ ಕೈಜೋಡಿಸುತ್ತದೆ ಎಂದು ತಿಳಿಯಪಡಿಸಿದರು.
ಮದುಮಗನ ಸಹೋದರಿ ಘಟಕದ ಸದಸ್ಯರಾದ
ಶ್ರೀಮತಿ ರಶ್ಮಿತಾ ಸನಿಲ್ ರವರು ಇಂತಹ ಕಾರ್ಯಕ್ರಮವನ್ನು ಅಯೋಜಿಸುವುದರಿಂದ ಮದ್ಯಸೇವನೆಯ ಸಂಭ್ರಮ ಮಾಡಿ ಸಾಲದ ಹೊರೆ ಹೊರುವುದರ ಬದಲು ಆಶ್ರಮವಾಸಿಗಳಿಗೆ ಒಂದು ಹೊತ್ತಿನ ಊಟ ಕೊಟ್ಟರೆ ನಮಗೆ ಪುಣ್ಯ ಸಿಗುವುದರಲ್ಲಿ ಸಂಶಯವಿಲ್ಲ ಎಂದು ಮೆಚ್ಚುಗೆಯ ಮಾತನ್ನಾಡಿದರು.
ಘಟಕದ ವತಿಯಿಂದ ಮದುಮಗನ ಮನೆಗೆ ಉಡುಗೊರೆಯಾಗಿ ನಾರಾಯಣ ಗುರುಗಳ ಸಂದೇಶದ ಜ್ಯೋತಕವಾಗಿ ಗುರುಗಳ ಭಾವಚಿತ್ರವನ್ನು ಘಟಕದ ಅಧ್ಯಕ್ಷರು,ಅಥಿಗಳು ಹಾಗೂ ಘಟಕಕ್ಕೆ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದ ಸಾಹಿತಿ ರಮಾನಾಥ್ ಕೋಟೆಕಾರ್ ರವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು .
ಇಂತಹ ವಿಭಿನ್ನ ಕಾರ್ಯಕ್ರಮದ ಆಯೋಜನೆಯ ಸಂದೇಶವನ್ನು ತಿಳಿದು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಜ್ಞಾ ವಿಧಿ ಸಂಕಲ್ಪವನ್ನು ಮಾಡಿ ಮದುಮಗನಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದ ಎಕ್ಕೂರು ನಿವಾಸಿ ಜಯಪ್ರಕಾಶ್ ಮತ್ತು ಅವರ ಮಿತ್ರರು ಮದ್ಯ ಮುಕ್ತ ಮದರಂಗಿ ಸಂಭ್ರಮದಲ್ಲಿ ಸೇರಿದ ಹಿತೈಷ್ಟಿ ಬಂಧುಗಳ ಗಮನಸೆಳೆದ ವ್ಯಕ್ತಿಯಾದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಅರಣ್ ಉಳ್ಳಾಲ್ ಹಾಗೂ ನರೇಶ್ ಕುಮಾರ್ ಸಸಿಹಿತ್ಲು ರವರಿಗೆ ಮದುಮಗ ಪುಸ್ತಕದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಪ್ರದೀಪ್,ಕೇಂದ್ರ ಸಮಿತಿಯ ತತ್ವ ಪ್ರಚಾರದ ನಿರ್ದೇಶಕರಾದ ಜಗದೀಶ ಸುವರ್ಣ,ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹರೀಶ್ ಸನಿಲ್ ಹಾಗೂ ಬಿಲ್ಲವ ಸೇವಾ ಸಮಾಜ(ರಿ) ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ ಸಭೆಯಲ್ಲಿ ಉಪಸ್ಥಿತಿತರಿದ್ದರು.
ಕೊಲ್ಯ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಕುಸುಮಾಕರ ಕುಂಪಲ ರವರು ಅತಿಥಿಗಳನ್ನು ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಮೋಹನ್ ಮಾಡೂರು ರವರು ವಂದನಾರ್ಪಣೆಗೈದರು.