ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 15.10.19 ರಂದು ಧಾರ್ಮಿಕ ಶಿಕ್ಷಣ_ ಭಜನಾ ತರಬೇತಿ ಕಮ್ಮಟ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯದಲ್ಲಿ ಬಿಲ್ಲವ ಸೇವಾ ಸಮಾಜದ ಹಿರಿಯರು ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು .
ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವಯ೯ರಿಗೆ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಹಿರಿಯ ಸದಸ್ಯರಾದ ಗೋಪಾಲಕೃಷ್ಣ ಸೋಮೇಶ್ವರ ಹಾಗೂ ಬಂದ ಅತಿಥಿಗಳೊಂದಿಗೆ ದೀಪವನ್ನು ಪ್ರಜ್ವಲಿಸುವು ದರೊಂದಿಗೆ ಉದ್ಘಾಟನೆಯನ್ನು ನೆರವೇರಿಸಿದರು.
ಭಜನಾ ಗುರುಗಳಾದ ಅರುಣ್ ಉಳ್ಳಾಲ್ ರವರು ಶಿಷ್ಯರಿಗೆ ಸಾಂಕೇತಿಕವಾಗಿ ತಾಳವನ್ನು ವಿನಿಮಯ ಮಾಡುವುದರೊಂದಿಗೆ ಭಜನಾ ತರಬೇತಿ ಕಮ್ಮಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯುವ ವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಮತ್ತು 2019 ನೇ ಸಾಲಿನ ಯುವ ಪ್ರಶಸ್ತಿ ಪುರಸ್ಕೃತರಾದ ನರೇಶ್ ಕುಮಾರ್ ಸಸಿಹಿತ್ಲು ಇವರನ್ನು ಅಭಿನಂದಿಸಲಾಯಿತು. ಹಾಗೂ ಕಾರ್ಯದರ್ಶಿಯಾದ ಪ್ರದೀಪ್ ಎಸ್.ಆರ್ ಅವರನ್ನು ಗೌರವಿಸಲಾಯಿತು.
ಯುವ ವಾಹಿನಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಮೋಹನ್ ಮಾಡೂರು ಇವರು ಭಜನಾ ಕಮ್ಮಟದ ಬಗ್ಗೆ ಪ್ರಾಸ್ತಾವನೆಗೈದರು.
ಸಭಾ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿದ ಗೋಪಾಲಕೃಷ್ಣ ಸೋಮೇಶ್ವರ ಇವರು ಉದ್ಘಾಟನಾ ನೆಲೆಯಲ್ಲಿ ಮಾತನಾಡಿ ಅವರು 1983 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಭಜನಾ ಸಂಕೀರ್ಣತೆ ಯನ್ನು ಪ್ರಾರಂಭಿಸಿದ ದಿನವನ್ನು ನೆನಪಿಸಿದರು.
ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ ರವರ ಮಾತನಾಡಿ ಈ ಮೊದಲೇ ಮಾಡಬೇಕಾದ ಭಜನಾ ತರಬೇತಿ ಕಮ್ಮಟ ತಂಡವನ್ನು ರಚಿಸಲು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ ಆದರೆ ಈಗ ಯುವ ವಾಹಿನಿ ಕೊಲ್ಯ ಘಟಕ ಪ್ರಯತ್ನಿಸಿದೆ, ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು ಹಾಗೂ ಘಟಕವನ್ನು ಪ್ರಶಂಸಿಸಿದರು.
ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಜಗದೀಶ್ ಸುವರ್ಣ ಅವರು ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ ಪ್ರಚಾರ ಹಾಗೂ ಸಂಪರ್ಕದ ನೆಲೆಯಲ್ಲಿ ಮಾಡಿದ ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ ಎಂದು ಕೊಲ್ಯ ಘಟಕವನ್ನು ಪ್ರಶಂಸಿಸಿದರು.
ಭಜನ ಗುರುಗಳಾದ ಅರುಣ್ ಉಳ್ಳಾಲ್ ರವರು ಮಾತನಾಡಿ ನಾನೇನು ಮೆದಾೕವಿಯಲ್ಲ ನನಗೆ ಅರಿತ ವಿದ್ಯೆಯನ್ನು ನಾನು ನಿಮಗೆ ಸಂಪೂರ್ಣವಾಗಿ ಧಾರೆ ಎರೆಯುತ್ತೇನೆ ಎಂದು ಹೇಳಿದರು ಹಾಗೂ ಭಜನೆಯ ಹಿನ್ನೆಲೆ ಹಾಗೂ ಭಜನಾ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಜೀವನದಲ್ಲಿ ಪರಿವರ್ತನೆಯನ್ನು ಕಂಡುಕೊಳ್ಳುವ ಬಗ್ಗೆ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ವಿಚಾರಧಾರೆಯನ್ನು ಮನದಟ್ಟು ಆಗುವ ರೀತಿಯಲ್ಲಿ ನುಡಿದರು.
ಘಟಕದ ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಅವರು ಧಾರ್ಮಿಕ ಶಿಕ್ಷಣ ಪದ್ಧತಿ ಹಾಗೂ ಭಜನಾ ತರಬೇತಿ ಕಮ್ಮಟದಲ್ಲಿ ಪಾಲ್ಗೊಂಡ ಸರ್ವರನ್ನು ಸ್ವಾಗತಿಸಿದರು ಹಾಗೂ ಘಟಕದ ವತಿಯಿಂದ ತಾವು ಕೈಗೊಂಡ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು ಹಾಗೂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಯುವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಮತ್ತು ಪದಾಧಿಕಾರಿಗಳಿಗೆ ,ಹಾಗೂ ಬಿಲ್ಲವ ಸೇವಾ ಸಮಾಜದ ಹಿರಿಯರಾದ ಎಲ್ಲರಿಗೂ ವಂದಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶ್ರೀಗೋಕರ್ಣಾಥೇಶ್ವರ ಕ್ಷೇತ್ರ ಕುದ್ರೋಳಿಯಲ್ಲಿ ನವರಾತ್ರಿ ಸಂದರ್ಭದಲ್ಲಿ ಪ್ರಚಾರ ನಿರ್ದೇಶಕರಿಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಕೇಂದ್ರ ಸಮಿತಿಯಿಂದ ಯುವವಾಹಿನಿ ಕೊಲ್ಯ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಕುಸುಮಾಕರ ಕುಂಪಲರವರಿಗೆ ಕೇಂದ್ರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಮಾತನಾಡಿ ಇತಿಹಾಸದಲ್ಲೆ ಪ್ರಧಮವಾಗಿ ಪ್ರಚಾರ ನಿರ್ದೇಶಕರು ತಮಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ತೋರಿಸಿದ್ದಾರೆ ಎಂದು ಕುಸುಮಾಕರ ಕುಂಪಲರವರನ್ನು ಪ್ರಶಂಸಿಸಿದರು.
ಸಭೆಯ ಪ್ರಾರಂಭದಲ್ಲಿ ಸೌಮ್ಯ ಯೋಗೇಶ್ ಅವರು ಪ್ರಾರ್ಥನೆಯನ್ನು ನೆರವೇರಿಸಿದರು ಹಾಗೂ ಲತೀಶ್ .ಎಂ. ಸಂಕೊಲಿಗೆ ಮತ್ತು ಕುಸುಮಾಕರ್ ಕುಂಪಲ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಘಟಕದ ಕಾರ್ಯದರ್ಶಿ ಆನಂದ್ ಅಮೀನ್ ಅವರು ಧನ್ಯವಾದ ನೀಡುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.