ಮಕ್ಕಳ ದಿನಾಚರಣೆಯ ಅಂಗವಾಗಿ ಕೊಂಡಾಟದ ಬಾಲೆ – 2019 ಫೋಟೊ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಈ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ದಿನಾಂಕ 14.11.2019 ರಂದು ಸಂಜೆ 6.00 ಕ್ಕೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಕೊಲ್ಯ ಸೋಮೇಶ್ವರದಲ್ಲಿ ನೆರವೇರಿಸಲಾಯಿತು.
ಈ ಸ್ಪರ್ಧೆಯಲ್ಲಿ ಒಟ್ಟು 70 ಮುದ್ದು ಕಂದಮ್ಮಗಳು ಸ್ಪರ್ಧಿಸಿದ್ದರು. ಕಾರ್ಯ ಕ್ರಮದ ಮೊದಲಿಗೆ ಘಟಕದ ವಿದ್ಯಾನಿಧಿ ನಿರ್ದೇಶಕರಾದ ಶಶಿಕಾಂತ್ ಅವರ ಮಕ್ಕಳಾದ ಯಶಿಕಾ ಮತ್ತು ಉನ್ನತಿ ಯವರು ಪ್ರಾರ್ಥನೆಯನ್ನು ನೆರವೆರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಆನಂದ ಮಲಯಾಳ ಕೊಡಿ ಅವರು ವಹಿಸಿದ್ದರು. ಅಧ್ಯಕ್ಷರು ಕಾರ್ಯಕ್ರಮಕ್ಕೆ ಬಂದ ಸರ್ವರನ್ನು ಪ್ರೀತಿ ಪೂರ್ವಕವಾಗಿ ಹೂ ನೀಡಿ ಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಸರಿ ಮಹಿಳಾ ಮಂಡಲ ಕುಂಪಲ ಇದರ ಅಧ್ಯಕ್ಷೆಯಾದ ಶ್ರೀಮತಿ ಜಯಲಕ್ಷ್ಮಿ ಮೋನಪ್ಪ ಪೂಜಾರಿ ಕುಂಪಲ ಅವರು ಮಾತನಾಡಿ ಕೊಲ್ಯ ಘಟಕದವರು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಸ್ಪರ್ಧಿಸಿದ ಮಕ್ಕಳು ದೊಡ್ಡದಾದ ಮೇಲೆ ಈ ಪೋಟೊ ವನ್ನು ನೋಡಿ ಘಟಕವನ್ನು ನೆನಪಿಸುತ್ತಾರೆ ಎಂದು ಹೇಳಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಅವರು ಮಾತನಾಡಿ ಸಂಪರ್ಕದ ನೆಲೆಯಲ್ಲಿ ಕೊಲ್ಯ ಘಟಕದವರು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಪ್ರಶಂಸಿಸಿದರು.
ಚೀರುಂಬಾ ಭಗವತಿ ಕ್ಷೇತ್ರದ ಗುರಿಕಾರರು ಆದ ಅಶೋಕ್ ಕುಮಾರ್ ಮತ್ತು ಶ್ರೀ ಗೋಕರ್ಣಾಥ ಕೊ.ಅಪರೇಟೀವ್ ಬ್ಯಾಂಕಿನ ನಿವೃತ್ತ ಪ್ರಬಂಧಕರು ಆದ ಕೃಷ್ಣಪ್ಪ ಪೂಜಾರಿಯವರು ಆಶಯ ನುಡಿ ಮಾತನಾಡಿದರು.
ಗೌರವ ಉಪಸ್ಥಿತಿ ಇದ್ದ ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಅಧ್ಯಕ್ಷರಾದ ವೇಣು ಗೋಪಾಲ್ ಕೊಲ್ಯರವರು ಮಾತನಾಡಿ ಕೊಲ್ಯ ಘಟಕವು ಬಿಲ್ಲವ ಸಂಘದಲ್ಲಿ ಪ್ರಾರಂಭವಾದ ನಂತರ ಬಿಲ್ಲವ ಸಂಘದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಹಾಗೂ ಘಟಕದವರು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಸಂಘದ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಮಂಡಲದ ಅಧ್ಯಕ್ಷೆ ಚಂದ್ರಾವತಿ ಕೊಲ್ಯ ಅವರು ಉಪಸ್ಥಿತಿ ಇದ್ದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಬಾಲ ಪ್ರತಿಭೆಯಾದ ಕುಮಾರಿ ತೀರ್ಥಾ ಪೂಜಾರಿ ಪೊಳಲಿಯವರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ನಂತರ ಮಾತನಾಡಿ ಹೆತ್ತವರು ಮಕ್ಕಳ ಬೆಳವಣಿಗೆಗೆ ಕಾರಣಿಕರ್ತರು ಅವರು ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹುರುದುಂಬಿಸಬೇಕು. ಆವಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬಂದು ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಧ್ಯ ಎಂದು ಹೇಳಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಕೊಂಡಾಟದ ಬಾಲೆ-2019 ಈ ಪ್ರಶಸ್ತಿಯನ್ನು ಶಶಿರಾಜ್ .ಕೆ ಮತ್ತು ತೃಪ್ತಿ .ಎಸ್ ಇವರ ಮಗನಾದ ಜಾಗೃತ್ ಶಶಿರಾಜ್ ಅವರು ಪಡೆದರು.
ದ್ವಿತೀಯ ಬಹುಮಾನವನ್ನು ಜಗನ್ ಮತ್ತು ತ್ರಿವೇಣಿ ದಂಪತಿಯ ಮಗನಾದ ವಿಯಾನ್ ಅವರು ಪಡೆದರು ಹಾಗೂ ತೃತೀಯ ಬಹುಮಾನವನ್ನು ಅವಿನಾಶ್ ಮತ್ತು ದೀಪಿಕಾ ದಂಪತಿಯ ಮಗನಾದ ಅಯಾಂಶ್ ಕೋಟ್ಯಾನ್ ಪಡೆದರು.
ಮೆಚ್ಚುಗೆ ಪಡೆದ ಒಟ್ಟು ಇಪ್ಪತ್ತು ಕಂದಮ್ಮಗಳಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ ನಲ್ವತ್ತೇಳು ಕಂದಮ್ಮಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು.
ಉಪಾಧ್ಯಕ್ಷರಾದ ಲತೀಶ್ ಸಂಕೋಲಿಗೆ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಆನಂದ್ ಅಮೀನ್ ಅವರು ಧನ್ಯವಾದ ಸಮರ್ಪಿಸಿದರು.