
03-07-2022, 3:54 PM
ದಿನಾಂಕ 03.07.2022ರ ಭಾನುವಾರ ಯುವವಾಹಿನಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಜೀವನೋಪಾಯ ಇಲಾಖೆ ಸಿಡೋಕ್, ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮವು ನಡೆಯಿತು. ಬ್ರಹ್ಮಶ್ರೀ ನಾರಾಯಣಗುರುಗಳ ಛಾಯಾಚಿತ್ರಕ್ಕೆ ಪುಷ್ಪ ಮಾಲೆಯನ್ನು ಹಾಕಿ ದೀಪ ಬೆಳಗಿಸುವುದರ ಮೂಲಕ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಮಟ್ಟುರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವು ಮಹಿಳಾ ಘಟಕದ ಪದಾಧಿಕಾರಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ […]
Read More

01-02-2022, 3:45 PM
ಮಂಗಳೂರು:- ದಿನಾಂಕ 01.02 2022 ರಂದು ಯುವವಾಹಿನಿ (ರಿ.) ಮಂಗಳೂರು ಘಟಕದ ಪದಗ್ರಹಣ ಸಮಾರಂಭವು ಯುವವಾಹಿನಿ ಸಭಾಂಗಣ ಉರ್ವಾಸ್ಟೋರ್ ಇಲ್ಲಿ ನಡೆಯಿತು. ಸಮಾರಂಭಕ್ಕೆ ಭಜನೆ ಹಾಗೂ ಗುರುಪೂಜೆಯೊಂದಿಗೆ ಚಾಲನೆ ನೀಡಲಾಯಿತು. ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ಎಸ್ಪಿನ್ ವಾಲ್ ಮತ್ತು ಕಂಪನಿ ಲಿಮಿಟೆಡ್ ಮಂಗಳೂರು ಇದರ ಜನರಲ್ ಮನೇಜರ್ ಆಗಿರುವ ಎಮ್.ಶೇಖರ ಪೂಜಾರಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯಅತಿಥಿಗಳಾಗಿ ಡಾ. ಕಿರಣ್ ಕುಮಾರ್ ಪಿ ಕೆ. ರಾಜ್ಯಾಧ್ಯಕ್ಷರು, ಭಾರತೀಯ ಮನೋವೈದ್ಯಕೀಯ ಸಂಘ, ಕರ್ನಾಟಕ ತುಳು […]
Read More

20-11-2019, 3:00 PM
ಯುವವಾಹಿನಿ (ರಿ) ಮಂಗಳೂರು ಘಟಕದ ವಾರ್ಷಿಕ ಕ್ರೀಡಾಕೂಟ – 2019 ದಿನಾಂಕ 17.11.2019ರ ಭಾನುವಾರದಂದು ಪ್ರಪ್ರಥಮ ಬಾರಿಗೆ ಯುವವಾಹಿನಿ (ರಿ) ಮಂಗಳೂರು ಘಟಕದ ವಾರ್ಷಿಕ ಕ್ರೀಡಾಕೂಟ – 2019 ನಗರದ ಹೊರವಲಯದಲ್ಲಿರುವ ಪದವು ಮೈದಾನ ದಲ್ಲಿ ನಡೆಯಿತು. ಕ್ರೀಡಾಕೂಟವು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಯುವ ಉದ್ಯಮಿ, ಗೆಜ್ಜೆಗಿರಿ ನಂದನ ಬಿತ್ತಿಲ್ ನ ಪ್ರದಾನ ಕೋಶಾಧಿಕಾರಿಯವರಾದ ಶ್ರೀಯುತ ದೀಪಕ್ ಕೋಟ್ಯಾನ್ ರವರು ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ, ವಾಲಿಬಾಲ್ ಮತ್ತು ಕ್ರೀಕೆಟ್ ಆಡುವ ಮೂಲಕ ಕ್ರೀಡಾ […]
Read More

29-10-2019, 3:56 PM
ದಿನಾಂಕ 29.10.2019 ರಂದು ಸಂಜೆ ಯುವವಾಹಿನಿ ಸಭಾಂಗಣ ದಲ್ಲಿ ಘಟಕದ ಎಲ್ಲಾ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸೇರಿ ದೀಪಗಳ ಹಬ್ಬ ದೀಪಾವಳಿ ಯನ್ನು ಸಂಭ್ರಮ ಸಡಗರದಿಂದ ಆಚರಿಸಿದೇವು. ಸಾಯಂಕಾಲ 4.30 ಗಂಟೆಗೆ ಘಟಕದ ಹಿರಿಯ ಸದಸ್ಯರಾದ ಶ್ರೀಯುತ ಪರಮೇಶ್ವರ ಪೂಜಾರಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಷ್ಣು ಸಹಸ್ರನಾಮದೊಂದಿಗೆ ಆರಂಭಗೊಂಡ ಭಜನಾ ಕಾರ್ಯಕ್ರಮದಲ್ಲಿ ವಿವಿಧ ಸದಸ್ಯರು ಎರಡು ಗಂಟೆಗಳ ಕಾಲ ಸುಶ್ರಾವ್ಯವಾಗಿ ಭಜನೆ ಹಾಡಿದರು. ನಂತರ 6.30 ಗಂಟೆಗೆ ಸಾಪ್ತಾಹಿಕ ಸಭೆಯನ್ನು […]
Read More

21-10-2019, 4:21 AM
ದಿನಾಂಕ 05.09.2019 ರಿಂದ 12.09.2019 ರವರೆಗೆ ಮಂಗಳೂರು ಘಟಕದ 36 ಜನರ ತಂಡವು ತಮ್ಮ ಬಂಧುಗಳೊಂದಿಗೆ ಗುಜರಾತ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಿಂದ ಪ್ರೇರೆಪಿತಗೊಂಡ ನಮ್ಮ ಘಟಕದ ಎರಡನೇ ತಂಡವು 43 ಜನರ ಬಂಧುಗಳೊಂದಿಗೆ ದಿನಾಂಕ 10.10.2019 ರಿಂದ 17.10.2019 ರವರೆಗೆ ಗುಜರಾತ್ ಪ್ರವಾಸ ವನ್ನು ಹಮ್ಮಿಕೊಂಡಿತ್ತು. ಈ ಎರಡು ತಂಡಗಳು ಗುಜರಾತಿನಲ್ಲಿರುವ ದ್ವಾರಕ ಮಂದಿರ, ಬೆಟ್ ದ್ವಾರಕ, ರುಕ್ಕ್ಮಿನಿ ಮಾತಾ ಮಂದಿರ, ನಾಗೇಶ್ವರ ಜೋತರ್ಲಿಂಗ, ಗೋಪಿತಲಾಬ್, ಕೃಷ್ಣ ಸುಧಾಮ ದೇವಸ್ಥಾನ, ಸೋಮಾನಾಥ ಜೋತಿರ್ಲಿಂಗ, ಅಹಮದಾಬಾಧ್ ನಗರ, […]
Read More

10-10-2019, 5:59 AM
ಯುವವಾಹಿನಿ (ರಿ) ಮಂಗಳೂರು ಘಟಕ ವತಿಯಿಂದ ವಿಶ್ವ ವಿಖ್ಯಾತ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಸತತ 8ನೇ ವರ್ಷದ ಶರಬತ್ ಸೇವೆಯು ದಿನಾಂಕ 08.10.2019ರಂದು ನಡೆಯಿತು. ಶರಬತ್ ಸೇವೆಯ ಉದ್ಘಾಟನೆಯನ್ನು ನಮಗೆ ಸ್ಥಳಾವಕಾಶ ಒದಗಿಸಿಕೊಟ್ಟ ಎಸ್ಎಲ್ ಶೇಟ್ ಡೈಮಂಡ್ಸ್ ಹೌಸ್ ನ ಮಾಲಕರಾದ ರವೀಂದ್ರ ಶೇಟ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮಹಾಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಪಾಲಿಸಿಕೊಂಡು ಅತ್ಯುತ್ತಮವಾದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಸಮಾಜದಲ್ಲಿ ಉತ್ತಮವಾದ […]
Read More

30-09-2019, 8:48 AM
ದಿನಾಂಕ 29.09.2019 ರಂದು ಯುವವಾಹಿನಿ(ರಿ) ಮಂಗಳೂರು ಘಟಕ ಮತ್ತು ಕಾರ್ಕಳ ಘಟಕ ಇದರ ಜಂಟಿ ಆಶ್ರಯದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು, ವ್ಯಾಪಾರಸ್ಥರು, ಸ್ವ ಉದ್ಯೋಗಿಗಳಿಗೆ, ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಮತ್ತು ನಿರುದ್ಯೋಗಿಗಳಿಗೆ ಯಶಸ್ವಿ ಉದ್ಯಮಕ್ಕೆ ಸಮಗ್ರ ಮಾರ್ಗದರ್ಶನ ಚೇತರಿಕಾ 2019 ಎಂಬ ಕಾರ್ಯಕ್ರಮವು ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ನಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಯಮಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಇದರ ಪ್ರಧಾನ ಕಾರ್ಯದರ್ಶಿ ರವಿಪೂಜಾರಿ ಚಿಲಿಂಬಿ ಉದ್ಘಾಟಿಸಿದರು. ಯುವವಾಹಿನಿಯು ಅವಕಾಶ ವಂಚಿತ ವರ್ಗಗಳಿಗೆ […]
Read More

13-09-2019, 9:13 AM
ಬ್ರಹ್ಮಶ್ರಿ ನಾರಾಯಣ ಗುರುಗಳ 165ನೇ ಜನ್ಮ ದಿನಾಚರಣೆಯು ತಾರೀಕು 13.9.2019 ರ ಶುಕ್ರವಾರದಂದು ಮಂಗಳೂರು ಘಟಕದ ವತಿಯಿಂದ ಬಹಳ ವಿಜೃಂಭಣೆಯಿಂದ ಜರುಗಿತು. ಘಟಕದ *ಯುವವಾಹಿನಿ ಸಭಾಂಗಣ* ದಲ್ಲಿ ಬೆಳಿಗ್ಗೆ 9.30 ಗಂಟೆಗೆ ಪುಷ್ಪಾಲಂಕಾರಗೊಂಡ ಗುರುಗಳ ಭಾವಚಿತ್ರಕ್ಕೆ ಕೇಂದ್ರ ಸಮಿತಿ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ರವರು ಆರತಿ ಬೆಳಗಿ ಪುಷ್ಪ ಅರ್ಪಿಸುವುದರೊಂದಿಗೆ ಗುರುನಾರಾಯಣ ಜಯಂತಿಗೆ ಚಾಲನೆ ನೀಡಿದರು. ಸರ್ವಾಲಂಕಾರ ಗೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವಿರುವ ರಥಕ್ಕೆ ಕೇಂದ್ರ […]
Read More

03-09-2019, 3:00 AM
ಯುವವಾಹಿನಿ (ರಿ) ಮಂಗಳೂರು ಘಟಕದಿಂದ ಮಂದಾರ – ಪಚ್ಚನಾಡಿ ನಿವಾಸಿಗಳ ಕಾಲೋನಿಗೆ ಭೇಟಿ. ದಿನಾಂಕ 01.09.2019 ರಂದು ಬೆಳಿಗ್ಗೆ ನಮ್ಮ ಘಟಕವು ಬೈತುರ್ಲಿ KHB ಕಾಲೋನಿ ಯಲ್ಲಿರುವ ಮಂದಾರ – ಪಚ್ಚನಾಡಿ ಡಂಪಿಂಗ್ ಯಾರ್ಡ್ ನ ನಿವಾಸಿಗಳನ್ನು ಭೇಟಿ ಮಾಡಿ ನಿವಾಸಿಗಳ ನೋವಿಗೆ ಸ್ಪಂದಿಸಿತು. ಘಟಕದ ಅಧ್ಯಕ್ಷರಾದ ಶ್ರೀ ಕೆ. ಆರ್. ಲಕ್ಷ್ಮೀ ನಾರಾಯಣ ರವರು ಬೆಳಿಗ್ಗೆ 5.30ರಿಂದ ಧ್ಯಾನ ಮತ್ತು ಯೋಗದ ಅಭ್ಯಾಸಗಳನ್ನು ನಿರಂತರವಾಗಿ ಮಾಡಿಸಿ ಅವರ ಮನಸ್ಥೈರ್ಯವನ್ನು ಹೆಚ್ಚಿಸಿದರು. ಆಯುರ್ವೇದ ವೈದ್ಯರಾದ ಡಾ. ಜ್ಞಾನೇಶ್ವರ […]
Read More

20-08-2019, 5:36 PM
ದಿನಾಂಕ 20.08.2019 ರಂದು ಯುವವಾಹಿನಿ ಸಭಾಂಗಣ ದಲ್ಲಿ ನಮ್ಮ ಘಟಕದಿಂದ ಕರ್ನಾಟಕ ರಾಜ್ಯದ ಪ್ರಸಿದ್ಧ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. 20.08.1815 ರಂದು ಜನಿಸಿ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಅಧಿಕಾರಿಯಾಗಿ, ನಿಜಲಿಂಗಪ್ಪನವರ ಸಂಪುಟದಲ್ಲಿ ಸಚಿವರಾಗಿ, ಸಿನಿಮಾ ನಟನಾಗಿ, ಎಂಟು ವರ್ಷಗಳ ತನ್ನ ಕಾಲಾವಧಿಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿರುವ ಕರ್ನಾಟಕದ ಪ್ರಸಿದ್ಧ ಮುಖ್ಯಮಂತ್ರಿಯಾಗಿರುವ ದೇವರಾಜ್ ಅರಸು ರವರ ಭಾವಚಿತ್ರಕ್ಕೆ ಘಟಕದ ಮಾಜಿ ಸಲಹೆಗಾರರಾದ ಶ್ರೀಯುತ ಪರಮೇಶ್ವರ ಪೂಜಾರಿಯವರು ಹಾರ ಹಾಕಿ ಪುಷ್ಪ ಸಮರ್ಪಿಸುವುದರ ಮೂಲಕ […]
Read More