ದಿನಾಂಕ 29.10.2019 ರಂದು ಸಂಜೆ ಯುವವಾಹಿನಿ ಸಭಾಂಗಣ ದಲ್ಲಿ ಘಟಕದ ಎಲ್ಲಾ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸೇರಿ ದೀಪಗಳ ಹಬ್ಬ ದೀಪಾವಳಿ ಯನ್ನು ಸಂಭ್ರಮ ಸಡಗರದಿಂದ ಆಚರಿಸಿದೇವು. ಸಾಯಂಕಾಲ 4.30 ಗಂಟೆಗೆ ಘಟಕದ ಹಿರಿಯ ಸದಸ್ಯರಾದ ಶ್ರೀಯುತ ಪರಮೇಶ್ವರ ಪೂಜಾರಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಷ್ಣು ಸಹಸ್ರನಾಮದೊಂದಿಗೆ ಆರಂಭಗೊಂಡ ಭಜನಾ ಕಾರ್ಯಕ್ರಮದಲ್ಲಿ ವಿವಿಧ ಸದಸ್ಯರು ಎರಡು ಗಂಟೆಗಳ ಕಾಲ ಸುಶ್ರಾವ್ಯವಾಗಿ ಭಜನೆ ಹಾಡಿದರು. ನಂತರ 6.30 ಗಂಟೆಗೆ ಸಾಪ್ತಾಹಿಕ ಸಭೆಯನ್ನು ನಡೆಸಲಾಯಿತು. ಅಧ್ಯಕ್ಷರಾದ ಶ್ರೀ ಕೆ ಆರ್. ಲಕ್ಷ್ಮೀನಾರಾಯಣರವರು ಎಲ್ಲಾ ಅತಿಥಿಗಳನ್ನು ಮತ್ತು ಸರ್ವ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯದರ್ಶಿಯವರಾದ ಗಣೇಶ್ ವಿ. ಕೋಡಿಕಲ್ ರವರು ಗತ ಸಭೆಯ ವರದಿಯನ್ನು ಓದಿ, ಅನುಮೋದನೆ ಪಡಕೊಂಡರು. ಘಟಕದಿಂದ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಡಿಸೆಂಬರ್ 22 ರಂದು ನಡೆಯುವ ಯುವವಾಹಿನಿಯ ಪ್ರತಿಷ್ಠಿತ ಅಂತರ್ ಘಟಕ ಸಾಂಸ್ಕೃತಿಕ ಕಾರ್ಯಕ್ರಮ ಡೆನ್ನಾನ ಡೆನ್ನನ – 2019 ರ ಬಗ್ಗೆ ಚರ್ಚಿಸಿ, ಉಪಯುಕ್ತ ಸಮಿತಿಗಳನ್ನು ರಚಿಸಿ, ಸರ್ವರಿಗೂ ಸೂಕ್ತ ಮಾಹಿತಿಯನ್ನು ನೀಡಲಾಯಿತು. ಅಧ್ಯಕ್ಷರು ದೀಪಾವಳಿ ಆಚರಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ಸತೀಶ್ ಕುಮಾರ್ ರವರು ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು. ಸಭೆಯ ನಂತರ ಎಲ್ಲಾ ಸದಸ್ಯರು ಯುವವಾಹಿನಿ ಸಭಾಂಗಣ ದ ಒಳಗಡೆ ಮತ್ತು ಹೊರಗಡೆ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು. ನಂತರ ನಡೆದ ಕುಣಿತ ಭಜನೆಯಲ್ಲಿ ಘಟಕದ ಎಲ್ಲಾ ಸದಸ್ಯರು ಪಾಲ್ಗೊಂಡರು. ಸರ್ವಾಲಂಕೃತಗೊಂಡ ಬ್ರಹ್ಮಶ್ರೀ ನಾರಾಯಣ ಗುರುವರ್ಯ ರ ಭಾವಚಿತ್ರಕ್ಕೆ ಮಂಗಳಾರತಿ ಮಾಡಲಾಯಿತು. ಕಾರ್ಯಕ್ರಮದ ಸಂಚಾಲಕರಾದ ಗೋಪಾಲ ಪೂಜಾರಿಯವರ ವಿಶೇಷ ಮುತುವರ್ಜಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಪ್ರದಾನ ಕಾರ್ಯದರ್ಶಿ ಎಸ್. ಆರ್. ಪ್ರದೀಪ್, ಸಂಘಟನಾ ನಿರ್ದೇಶಕರಾದ ಹರೀಶ್ ಸನಿಲ್, ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಉಮಾ ಶ್ರೀಕಾಂತ್ ಮತ್ತಿತರ ಗಣ್ಯರು ಬಾಗವಹಿಸಿದ್ದರು. ನಮ್ಮ ಘಟಕದ ಆಜೀವ ಗೌರವ ಸದಸ್ಯರಾದ ಶ್ರೀನಿವಾಸ ಪೂಜಾರಿ ಹಾಗೂ ದೇವೇಂದ್ರ ಕೋಟ್ಯಾನ್ ರವರು ಜಂಟಿಯಾಗಿ 1st year Bio medical Deralakatte ಯಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿನಿ ಶಾಲೋನಿಯವರಿಗೆ ಶೈಕ್ಷಣಿಕ ವೆಚ್ಚವನ್ನು ವಿತರಿಸಿದರು. ಬೊಳ್ಳಿ ಟ್ರಾವಲ್ಸನ ಮಾಲೀಕರಾದ ಅರುಣ್ ರವರು ಘಟಕದ ಶೈಕ್ಷಣಿಕ ದತ್ತು ಸ್ವೀಕಾರ ನಿಧಿಗೆ ದೇಣಿಗೆ ನೀಡಿದರು. ಅರುಣ್ ರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸುಮಾರು ನೂರಕ್ಕೂ ಅಧಿಕ ಸದಸ್ಯರು ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮದ ಹಬ್ಬವನ್ನು ಆಚರಿಸಿದರು. ನಂತರ ಎಲ್ಲರಿಗೂ ಪ್ರಸಾದ, ಸಿಹಿತಿಂಡಿ ಹಾಗೂ ಉಪಾಹಾರ ವಿತರಿಸಲಾಯಿತು.