ದಿನಾಂಕ 29.09.2019 ರಂದು ಯುವವಾಹಿನಿ(ರಿ) ಮಂಗಳೂರು ಘಟಕ ಮತ್ತು ಕಾರ್ಕಳ ಘಟಕ ಇದರ ಜಂಟಿ ಆಶ್ರಯದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು, ವ್ಯಾಪಾರಸ್ಥರು, ಸ್ವ ಉದ್ಯೋಗಿಗಳಿಗೆ, ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಮತ್ತು ನಿರುದ್ಯೋಗಿಗಳಿಗೆ ಯಶಸ್ವಿ ಉದ್ಯಮಕ್ಕೆ ಸಮಗ್ರ ಮಾರ್ಗದರ್ಶನ ಚೇತರಿಕಾ 2019 ಎಂಬ ಕಾರ್ಯಕ್ರಮವು ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಯಮಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಇದರ ಪ್ರಧಾನ ಕಾರ್ಯದರ್ಶಿ ರವಿಪೂಜಾರಿ ಚಿಲಿಂಬಿ ಉದ್ಘಾಟಿಸಿದರು. ಯುವವಾಹಿನಿಯು ಅವಕಾಶ ವಂಚಿತ ವರ್ಗಗಳಿಗೆ ಯಶಸ್ವಿ ಉದ್ಯಮಕ್ಕೆ ಸಮಗ್ರ ಮಾರ್ಗದರ್ಶನ ನೀಡುವ ಮೂಲಕ ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಉದ್ಯಮ ವ್ಯಾಪಾರಕ್ಕೂ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬಿಲ್ಲವ ಸಮಾಜದ ಮಾದರಿ ಸಂಘಟನೆಯಾಗಿ ಬೆಳೆಯುತ್ತಿದೆ ಎಂದು ರವಿಪೂಜರಿಯವರು ತಿಳಿಸಿದರು. ಅವಕಾಶ ವಂಚಿತ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕ ವಾಗಿ ಅಭಿವೃದ್ಧಿಯಾಗ ಬೇಕಾದರೆ ಆ ಸಮಾಜದಲ್ಲಿ ಜನಪರ ರಾಜಕೀಯ ನಾಯಕತ್ವ ಬೆಳೆದುಬರಬೇಕು ಇದು ಆ ಸಮಾಜದ ಉದ್ಯಮಶೀಲತೆಗೆ ಪೂರಕವಾಗುತ್ತದೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಹಿತ್ಲು, ರಾಷ್ಟ್ರೀಯ ಮಟ್ಟದ ಹೆಸರಾಂತ ತರಬೇತುದಾರರು ಕಾರ್ಕಳ ಘಟಕದ ಅಧ್ಯಕ್ಷರಾದ ಸುಧಾಕರ್ ಕಾರ್ಕಳ, ಮಂಗಳೂರು ಘಟಕದ ಅಧ್ಯಕ್ಷ ರಾದ ಕೆ. ಆರ್. ಲಕ್ಷ್ಮೀನಾರಾಯಣ, ಕಾರ್ಯಕ್ರಮ ದ ಸಂಚಾಲಕರಾದ ರಾಜೇಶ್ ಕದ್ರಿ, ಕಾರ್ಕಳ ಘಟಕದ ಕಾರ್ಯದರ್ಶಿ ಗಣೇಶ್ ಸಾಲಿಯಾನ್, ಸಂಘಟನಾ ನಿರ್ದೇಶಕರಾದ ಹರೀಶ್ ಸನಿಲ್ ಮುಂತಾದವರು ಉಪಸ್ಥಿತರಿದ್ದರು. ಪ್ರವೀಣ್ ಸಾಲ್ಯನ್ ಕಿರೋಡಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಘಟಕಗಳಿಂದ ಆಗಮಿಸಿರುವ 66 ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ತರಬೇತುದಾರರಾದ ಶ್ರೀ ಸುಧಾಕರ ಕಾರ್ಕಳರವರು ಧನಾತ್ಮಕವಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಯುವವಾಹಿನಿಯಲ್ಲಿ ಪ್ರಥಮ ಬಾರಿಗೆ ನಡೆದಂತಹ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ, ಅಂತರ್ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅನುಭವವಾಯಿತೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೈಕೋರ್ಟ್ ವಕೀಲರಾದ ನವನೀತ್ ಹಿಂಗಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಜ ಮುಖಿ ಕಾರ್ಯಕ್ರಮ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರು ಘಟಕದ ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ರವರು ಧನ್ಯವಾದ ಸಮರ್ಪಿಸಿದರು.